K G F 2 : ಕೊನೆಗೂ ಓಟಿಟಿಗೆ ಹೆಜ್ಜೆ ಇಡಲು ರೆಡಿಯಾದ ಕೆಜಿಎಫ್ 2..! ಇದು ಫ್ರಿಯಂತೆ ನೋಡಿ..!

By Infoflick Correspondent

Updated:Thursday, June 2, 2022, 17:32[IST]

K G F 2 :  ಕೊನೆಗೂ ಓಟಿಟಿಗೆ ಹೆಜ್ಜೆ ಇಡಲು ರೆಡಿಯಾದ ಕೆಜಿಎಫ್ 2..! ಇದು ಫ್ರಿಯಂತೆ ನೋಡಿ..!

ಕನ್ನಡ ಚಿತ್ರರಂಗದ ಖ್ಯಾತ ನಟ ಯಶ್ ಅವರ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರ ಕಲೆಕ್ಷನ್ ವಿಚಾರದಲ್ಲಿ ದೊಡ್ಡ ಸಾಧನೆ ಮಾಡಿದೆ. ಕೋಟಿ ಕೋಟಿ ಹಣ ಬಾಚಿಕೊಂಡಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾ ಹನ್ನೆರಡು ನೂರು ಕೋಟಿ ಅದಕ್ಕಿಂತ ಅಧಿಕ ಹಣ ಸಂಪಾದಿಸಿದೆ ಎನ್ನಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಇದೊಂದು ಬಿರುಗಾಳಿಯ ರೀತಿ ಕೆಜಿಎಫ್ ಸಿನಿಮಾ ಎದ್ದಿದ್ದು, ಇಡೀ ವಿಶ್ವಕ್ಕೆ ಕನ್ನಡ ಚಿತ್ರರಂಗದ ಶಕ್ತಿ ಏನೆಂದು ಗೊತ್ತು ಪಡಿಸಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸಖತ್ ಎಂಜಾಯ್ ಮಾಡಿದರು, ಜೊತೆಗೆ ಈಗಲೂ ಕೂಡ ಕೆಲವು ಥಿಯೇಟರ್ಗಳಲ್ಲಿ ಸಿನಿಮಾ ಓಡುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹೌದು ಹೀಗಿರುವಾಗ ಇತ್ತೀಚೆಗೆ ಅಮೆಜಾನ್ ಪ್ರೈನ್ನಲ್ಲಿ ಎರಡುನೂರು ರೂಪಾಯಿ ಕೊಟ್ಟು ಸಿನಿಮಾ ವೀಕ್ಷಣೆ ಮಾಡುವಂತೆ ಈ ಮುಂಚೆ ಹೇಳಿದರು. 

ಆದರೆ ಇದೀಗ ಕೆಜಿಎಫ್ 2 ಸಿನಿಮಾ ಪ್ರಿಯಾಗಿ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿದೆ. ಹೌದು ಅಮೆಜಾನ್ ಪ್ರೈಮ್ ಮೆಂಬರ್ ಗಳು ಮಾತ್ರ ಈ ಸಿನಿಮಾವನ್ನ ಫ್ರಿಯಾಗಿ ನೋಡಬಹುದು. ಅದು ಯಾವಾಗಿನಿಂದ ಗೊತ್ತಾ..? ಇದೇ ತಿಂಗಳು ಅಂದರೆ ಜೂನ್ 3ನೇ ತಾರೀಖಿನಿಂದ ಅಮೆಜಾನ್ ಪ್ರೈಮ್ ನಲ್ಲಿ ಕೆಜಿಎಫ್ ಭಾಗ-2 ಸಿನಿಮಾ ಭರ್ಜರಿಯಾಗಿ ಪ್ರದರ್ಶನವಾಗಲಿದೆಯಂತೆ. ಈ ಅಧಿಕೃತ ಮಾಹಿತಿಯನ್ನು ಹೊಂಬಾಳೆ ಫಿಲಂ ಸಂಸ್ಥೆಯು ಟ್ವಿಟ್ಟರ್ ಖಾತೆಯ ಮೂಲಕ ಕಾತ್ರಿ ಪಡಿಸಿದೆ. ಕೆಜಿಎಫ್ ಭಾಗ2 ನೋಡಿದ ಎಲ್ಲಾ ಸಿನಿಮಾ ವೀಕ್ಷಕರು ಮತ್ತೊಮ್ಮೆ ಸಿನಿಮಾವನ್ನು ನೋಡಬೇಕು ಎಂದು ತುಂಬಾ ಉತ್ಸಾಹದಿಂದ ಕಾಯುತ್ತಿದ್ದಾರೆ. ಅದಕ್ಕೆ ತಕ್ಕಂತೆ ಈಗ ಅಮೆಜಾನ್ ಪ್ರೈಮ್ನಲ್ಲಿ ಜೂನ್ 3ನೇ ತಾರೀಖಿನಂದು ಕೆಜಿಎಫ್ ಭಾಗ-2 ಹವಾ ಮತ್ತೆ ಶುರುವಾಗಲಿದೆ.

ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಟ ಯಶ್ ಜೊತೆಗೆ ನಟಿ ಶ್ರಿನಿಧಿ ಶೆಟ್ಟಿ ಅವರ ಕಾಂಬಿನೇಷನ್ ನಲ್ಲಿ ಈ ಕೆಜಿಎಫ್ ಭಾಗ-2 ಸಿನಿಮಾ ಮೂಡಿಬಂದಿತ್ತು. ಈಗ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿರುವ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಜೂನ್ 3ನೇ ತಾರೀಕು ತಪ್ಪದೆ ಸಿನಿಮಾ ಮತ್ತೊಮ್ಮೆ ಕಣ್ಣು ತುಂಬಿಕೊಳ್ಳಬೇಕು ಎಂದವರು ವೀಕ್ಷಿಸಿ ಧನ್ಯವಾದ...