K G F 2 : ವರ್ಲ್ಡ್ ವೈಡ್ ಕೆಜಿಎಫ್ 2 ಇದುವರೆವಿಗೂ ಮಾಡಿರುವ ಕಲೆಕ್ಷನ್ ಎಷ್ಟು ಗೊತ್ತಾ..?

By Infoflick Correspondent

Updated:Tuesday, June 21, 2022, 21:24[IST]

K G F 2 : ವರ್ಲ್ಡ್ ವೈಡ್ ಕೆಜಿಎಫ್ 2 ಇದುವರೆವಿಗೂ   ಮಾಡಿರುವ ಕಲೆಕ್ಷನ್ ಎಷ್ಟು ಗೊತ್ತಾ..?

ಸ್ಯಾಂಡಲ್ ವುಡ್ ನ ಅತಿ ಹೆಚ್ಚು ಸುದ್ದಿ ಮಾಡಿದ ಚಿತ್ರ ಕೆಜಿಎಫ್ 2. ಇತ್ತೀಚೆಗೆ ಹಲವು ಭಾಷೆಗಳಲ್ಲಿ ಕೆಜಿಎಫ್ ಚಿತ್ರ ವಿಶ್ವಾದ್ಯಂತ ರಿಲೀಸ್ ಆಗಿತ್ತು.  ಈ ಚಿತ್ರ ಎಲ್ಲೆಡೆ ತನ್ನದೇ ಹವಾ ಕ್ರಿಯೇಟ್ ಮಾಡಿದ್ದು ಎಲ್ಲರಿಗೂ ತಿಳಿದಿರುವ ವಿಚಾರವೇ. ಅಷ್ಟರಮಟ್ಟಕ್ಕೆ ಕೆಜಿಎಫ್ ಚಿತ್ರ ಹಿಟ್ ಆಗಿದೆ.  ಚಿತ್ರದ ಹಾಡುಗಳು, ಡೈಲಾಗ್ ಗಳು ಎಲ್ಲವೂ ಸಿಕ್ಕಾಪಟ್ಟೆ ವೈರಲ್ ಆಗಿವೆ. ಪುಟ್ಟ ಮಕ್ಕಳು ಕೂಡ ಕೆಜಿಎಫ್ ಚಿತ್ರದ ಹಾಡು, ಡೈಲಾಗ್ ಗಳನ್ನು ಹೇಳುತ್ತಾರೆ. ಹೀಗಿರುವಾಗ ವರ್ಲ್ಡ್ ವೈಡ್ ಕೆಜಿಎಫ್ ಚಿತ್ರ ಮಾಡಿರುವ ಒಟ್ಟು ಕಲೆಕ್ಷನ್ ಎಷ್ಟು ಗೊತ್ತಾ..?     

ಭಾರತದಲ್ಲಿ ಮೂರನೇ ಸ್ಥಾನವನ್ನು ಪಡೆದಿರುವ ಕೆಜಿಎಫ್ 2 ಚಿತ್ರ, ವರ್ಲ್ಡ್ ವೈಡ್ ಭಾರೀ ಕಲೆಕ್ಷನ್ ಮಾಡಿದೆ. ಕನ್ನಡದ ಸಿನಿಮಾ ಈ ಮಟ್ಟಕ್ಕೆ ಕಲೆಕ್ಷನ್ ಮಾಡಿರುವುದು ಹೆಮ್ಮೆಯ ವಿಚಾರವೇ. ಕೆಜಿಎಫ್ 2 ಚಿತ್ರ ರಾಜಮೌಳಿ ನಿರ್ದೇಶನದ RRR ಸಿನಿಮಾದ ದಾಖಲೆಯನ್ನು ಕೂಡ ಉಡೀಸ್ ಮಾಡಿದೆ. ಈ ಮೂಲಕ ಕೆಜಿಎಫ್ 2 ಎಲ್ಲಾ ಭಾಷೆಯಲ್ಲೂ, ಎಲ್ಲಾ ಪ್ರದೇಶಗಳಲ್ಲಿಯೂ ಉತ್ತಮ ಗಳಿಸಿದೆ. ಭಾರತದ ಮೂಲೆ ಮೂಲೆಗಳಿಂದಲೂ ಕೆಜಿಎಫ್ 2 ಚಿತ್ರವನ್ನು ನೋಡಲು ಜನರು ಮುಗಿಬಿದ್ದಿದ್ದರು. ಇವನ್ನೆಲ್ಲಾ ಆಧಾರವಾಗಿಟ್ಟುಕೊಂಡ ಫಿಂಕ್ವಿಲ್ ವೆಬ್ಸೈಟ್ ಚಿತ್ರದ ಫೈನಲ್ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಲಿಸ್ಟ್ ಮಾಡಿದೆ. 

ಕರ್ನಾಟಕ ರಾಜ್ಯದಲ್ಲಿ ₹171.50 ಕೋಟಿ ಕಲೆಕ್ಷನ್ ಆಗಿದ್ದು, ಆಂಧ್ರ ಮತ್ತು ತೆಲಂಗಾಣದಲ್ಲಿ ₹150 ಕೋಟಿ, ತಮಿಳುನಾಡಿನಲ್ಲಿ  ₹109.70 ಕೋಟಿ ಗಳಿಸಿದೆ. ಇನ್ನು ಕೇರಳದಲ್ಲಿ ₹66.10 ಕೋಟಿ ಗಳಿಸಿದ್ರೆ, ಉತ್ತರ ಭಾರತದಲ್ಲಿ ಬರೋಬ್ಬರಿ ₹494.30 ಕೋಟಿ ಕಲೆಕ್ಷನ್ ಮಾಡಿದ್ದು ಭಾರತದಲ್ಲಿ ಒಟ್ಟು ₹991.60 ಕೋಟಿ ಹಣವನ್ನು ಗಳಿಸಿದೆ. ಇನ್ನು ಕೆಜಿಎಫ್ 2 ವರ್ಲ್ಡ್ವೈಡ್ ಮಾಡಿರುವ ಕಲೆಕ್ಷನ್ ನ ಮೊತ್ತವೂ ಕೂಡ ಹೆಚ್ಚಿದೆ. ವಿದೇಶಗಳಲ್ಲೂ ರಿಲೀಸ್ ಆದ ಕೆಜಿಎಫ್ ಚಿತ್ರ ರಿಲೀಸ್ ಆಗಿದ್ದು, 200 ಕೋಟಿ ಹಣ ಕ್ಲಬ್ ಸೇರಿದ ಮೊದಲ ಸಿನಿಮಾವಾಗಿದೆ. 

ಕೆಜಿಎಫ್ ಚಿತ್ರ ಉತ್ತರ ಅಮೆರಿಕಾ $7.45 ಮಿಲಿಯನ್ ಕಲೆಕ್ಷನ್ ಮಾಡಿದ್ದು, ಮಧ್ಯ ಪ್ರಾಚ್ಯದಲ್ಲಿ $8.13 ಮಿಲಿಯನ್ ಗಳಿಸಿದೆ. ಆಸ್ಟೇಲಿಯಾದಲ್ಲಿ $2.53 ಮಿಲಿಯನ್ ಗಳಿಸಿದ್ದು, ನ್ಯೂಜಿಲ್ಯಾಂಡ್ $0.43 ಮಿಲಿಯನ್ ಹಾಗೂ ಮಲೇಷ್ಯಾದಲ್ಲಿ $2.45 ಮಿಲಿಯನ್ ಕ್ಲಬ್ ಸೇರಿದೆ. ಸಿಂಗಾಪುರದಲ್ಲಿ $0.90 ಮಿಲಿಯನ್ ಗಳಿಸಿದ್ದು, ನೇಪಾಳ $1.05 ಮಿಲಿಯನ್ ಕಲೆಕ್ಷನ್ ಮಾಡಿದೆ. ಏಪ್ಯಾದಲ್ಲಿ $0.65 ಮಿಲಿಯನ್, ಯುಕೆ- $1.46 ಮಿಲಿಯನ್, ಯುರೋಪ್ $1.50 ಮಿಲಿಯನ್, ಉಳಿದ ರಾಷ್ಟ್ರ $0.50 ಮಿಲಿಯನ್ ಗಳಿಸಿದೆ. ಒಟ್ಟು $27.05 ಮಿಲಿಯನ್ ಅಂದರೆ ₹206.60 ಕೋಟಿ ಕ್ಲಬ್ ಸೇರಿದೆ.  ವರ್ಲ್ಡ್ ವೈಡ್ ಕೆಜಿಎಫ್ 2 ಇದುವರೆವಿಗೂ   ಮಾಡಿರುವ ಕಲೆಕ್ಷನ್ ೧೨೩೯ ಕೋಟಿ ರೂಪಾಯಿ ಆಗಿದೆ