KGF 3 : ರಾಕಿ ಭಾಯ್ ಗೆ ಫಿದಾ ಆದ ಅಭಿಮಾನಿಗಳು ಮಾಡಿರುವ ಕೆಲಸ ನೋಡಿ..

By Infoflick Correspondent

Updated:Friday, May 13, 2022, 10:02[IST]

KGF 3 : ರಾಕಿ ಭಾಯ್ ಗೆ ಫಿದಾ ಆದ ಅಭಿಮಾನಿಗಳು ಮಾಡಿರುವ ಕೆಲಸ ನೋಡಿ..

ಕೆಜಿಎಫ್ ಚಾಪ್ಟರ್ 2 ನೋಡಿದ ಜನ ರಾಕಿ ಭಾಯ್ ಗೆ ಜೈ ಕಾರ ಕೂಗಿದ್ದಾರೆ. ಈ ಸಿನಿಮಾದಿಂದ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಭಾರತದಲ್ಲಷ್ಟೇ ಅಲ್ಲದೇ, ವಿದೇಶಗಳಲ್ಲೂ ಯಶ್ ಗೆ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಒಮ್ಮೆ ಸಿನಿಮಾ ನೋಡಿದ ಅದೆಷ್ಟೋ ಜನ ಅಭಿಮಾನಿಗಳು ಮತ್ತೆ ಮತ್ತೆ ಸಿನಿಮಾ ನೋಡಿದ್ದಾರೆ. ಕೆಜಿಎಫ್ 2 ಸಿನಿಮಾ ಈಗಾಗಲೇ ಎಲ್ಲಾ ದಾಖಲೆಗಳನ್ನು ಮುರಿದಿದೆ. ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಮೂಲಕ ಬಾಕ್ಸ್ ಆಫೀಸಿನಲ್ಲಿ ಚಿಂದಿ ಉಡಾಯಿಸಿದೆ.  

ಇದುವರೆಗೂ ಭಾರತದಲ್ಲಿ ಮಾಡಿರದಂತಹ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ಇನ್ನು ಸಿನಿಮಾದ ಕೊನೆಯಲ್ಲಿ ಕೆಜಿಎಫ್ ಚಾಪ್ಟರ್ 3 ಕೂಡ ಬರಲಿದೆ ಎಂಬ ಸುಳಿವನ್ನು ನೀಡಲಾಗಿದೆ. ಇದರಿಂದ ಅಭಿಮಾನಿಗಳು ಫುಲ್ ಖುಷ್ ಆಗಿರುವುದರ ಜೊತೆಗೆ ಕೆಜಿಎಫ್ ಚಾಪ್ಟರ್ 3 ನೋಡಲು ಕಾತುರರಾಗಿದ್ದಾರೆ. ಆದರೆ ಮೂರನೇ ಭಾಗದ ಶೂಟಿಂಗ್ ಯಾವಾಗ ನಡೆಯುತ್ತದೆ. ಇದರಲ್ಲಿ ಇನ್ಯಾವ ಹೊಸ ಪಾತ್ರ ಕಾಣಿಸಿಕೊಳ್ಳಲಿದೆ..? ಚಿತ್ರ ಯಾವಾಗ ರಿಲೀಸ್ ಆಗುತ್ತದೆ ಎಂಬ ಯಾವ ವಿಚಾರವನ್ನೂ ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

ಆದರೆ ಈ ಎಲ್ಲಾ ವಿಚಾರಗಳನ್ನು ತಿಳಿಯುವ ಕಾತರವಂತೂ ಅಭಿಮಾನಿಗಳಲ್ಲಿದೆ. ರಾಕಿ ಭಾಯ್ ನನ್ನು ಮತ್ತೆ ತೆರೆ ಮೇಲೆ ನೋಡುವ ಹಂಬಲವೂ ಇದೆ. ಇನ್ನು ಈ ಚಿತ್ರವನ್ನು ನೋಡಿದ ಅಭಿಮಾನಿಗಳು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಅದೇನೆಂದರೆ ಅಭಿಮಾನಿಯೊಬ್ಬ ಕೆಜಿಎಫ್ ಚಾಪ್ಟರ್ 3 ನ ಟ್ರೈಲರ್ ಅನ್ನು ಬಿಟಿದ್ದಾನೆ. ಕೆಜಿಎಫ್ 2 ನಲ್ಲಿನ ಸೀನ್ಸ್ ಗಳನ್ನೇ ತೆಗೆದುಕೊಂಡು ಮೂರನೇ ಅಧ್ಯಾಯದ ಪ್ರೋಮೋ ಸಿದ್ಧಪಡಿಸಿ, ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದಾನೆ. ಇದು ಈಗ ಎಲ್ಲೆಡೆ ವೈರಲ್ ಆಗಿದೆ.