ಯಾರು ಊಹೆ ಮಾಡದ ಹಾಗೆ ಕೆಜಿಎಫ್ 3 ಹಾಲಿವುಡ್ ಸ್ಟೈಲ್ ನಲ್ಲಿ ಬರುತ್ತಂತೆ..! ಯೌಟ್ಯೂಬ್ ನಲ್ಲಿ ಯಾರು ಹೇಳದ ಸ್ಟೋರಿ ಇಲ್ಲಿದೆ
Updated:Tuesday, April 19, 2022, 15:45[IST]

ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ, ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರ್ ಅವರ ಸಂಗೀತದಲ್ಲಿ, ಭುವನ್ ಗೌಡ ಅವರ ಕೊರಿಯಾಗ್ರಫಿನಲ್ಲಿ ಮೂಡಿಬಂದಿರುವ ನಟ ಯಶ್ ಅವರ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರ ಇದೀಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹೌದು ಎಲ್ಲಿ ನೋಡಿದ್ರೂ ರಾಕಿ ಬಾಯ್ ಅಭಿನಯಕ್ಕೆ ದಾಖಲೆಗಳೆಲ್ಲವೂ ಧೂಳಿಪಟ ಆಗುತ್ತಿದ್ದು, ನಾಲ್ಕು ದಿನದಲ್ಲಿ 540 ಕೋಟಿ ಕಲೆಕ್ಷನ್ ಗಡಿ ದಾಟಿ ಮುನ್ನುಗ್ಗಿ ಸಾಗುತ್ತಿದೆ. ಕೆಜಿಎಫ್ 2 ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ರಾಕಿ ಪಾತ್ರ ಸತ್ತು ಹೋಗುತ್ತದೆ ಎಂಬಂತೆ ತೋರಿಸಿದ್ದಾರೆ. ಆದರೆ ನಿಜವಾಗಿ ರಾಕಿ ಭಾಯ್ ಸತ್ತಿದ್ದಾನೋ ಇಲ್ಲವೋ ಎಂಬುದಾಗಿ ಈಗಲೂ ಕೂಡ ಚರ್ಚೆಯಾಗುತ್ತಿದೆ. ಇನ್ನೊಂದು ಕಡೆ ಕೊನೆಯಲ್ಲಿ ಕ್ರೆಡಿಟ್ಸ್ ಭಾಗದಲ್ಲಿ ಕೆಜಿಎಫ್ ಭಾಗ-3 ಬರುವ ಸೂಚನೆ ನೀಡಿದ್ದಾರೆ ಪ್ರಶಾಂತ್ ನೀಲ್.
ಹೌದು ಕೆಜಿಎಫ್ ಭಾಗ 2 ವೀಕ್ಷಣೆ ಮಾಡಿದ ಸಿನಿಪ್ರೇಕ್ಷಕರು ಕೆಜಿಎಫ್ 3 ಬಂದೇ ಬರುತ್ತದೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಸಿನಿಮಾ ಇಲ್ಲಿಗೆ ಕೊನೆಯಾಗುತ್ತದೆ. ಮತ್ತೆ ಮೂರು ಬಂದರೆ ಚೆನ್ನಾಗಿರುವುದಿಲ್ಲ ಎನ್ನುತ್ತಿದ್ದಾರೆ. ಹೌದು ಹೀಗಿರುವಾಗ ಒಂದು ಸಂದರ್ಭದಲ್ಲಿ ನಟ ಯಶ್ ಅವರು ಕೆಜಿಎಫ್ ಹೆಸರನ್ನಿಟ್ಟುಕೊಂಡು ಎಷ್ಟು ಬೇಕೋ ಅಷ್ಟು ಈ ಕೆಜಿಎಫ್ ಸಿನಿಮಾ ಭಾಗಗಳ ಮಾಡಬಹುದು ಎಂದಿದ್ದರು. ಹಾಗೆ ಇತ್ತೀಚೆಗೆ ನಿರ್ದೇಶಕ ಪ್ರಶಾಂತ್ ನೀಲ್ ಅವರು ಕೂಡ ಕೆಜಿಎಫ್-2 ಚಿತ್ರವನ್ನು ಜನರು ಇಷ್ಟಪಟ್ಟರೆ, ಈ ಫ್ರಾಂಚೈಸಿ ಮತ್ತು ಕ್ಯಾರೆಕ್ಟರ್ ಅನ್ನು ಇಷ್ಟಪಟ್ಟರೆ ನಾನು ಖಂಡಿತವಾಗಿ ಕೆಜಿಎಫ್ ಮೂರು ಮಾಡುತ್ತೇನೆ ಎಂದಿದ್ದಾರೆ. ಅದಕ್ಕೆ ಸಾಕ್ಷಿಯೆಂಬಂತೆ ಕೆಜಿಎಫ್ ಚಾಪ್ಟರ್ ಟು ಸಿನಿಮಾದಲ್ಲಿ ಕೆಲವೊಂದಿಷ್ಟು ಚಿತ್ರದ ಸನ್ನಿವೇಶಗಳು ಕೆಜಿಎಫ್ ಭಾಗ-3 ಬರುವ ಸೂಚನೆಯನ್ನು ಹೇಳಿವೆ ಎಂದರೆ ತಪ್ಪಾಗಲಾರದು.
ಕೆಜಿಎಫ್ ಮೊದಲ ದೃಶ್ಯ ಅವರ ಅಮ್ಮನ ರಾಜನ ಕಥೆಯ ಮಾತು ನೀವು ಗಮನಿಸಿದ್ದರೆ ಕೊನೆಯ ಕ್ಲೈಮಾಕ್ಸನಲ್ಲಿ ಕಂಡುಬಂದಿವೆ. ಹಾಗಾದರೆ ಕೆಜಿಎಫ್ ಭಾಗ-3 ಯಾವ ರೀತಿ ಸ್ಟೋರಿ ಹೊಂದಿರುತ್ತದೆ ಎಂಬುದಾಗಿ ಈ ವಿಡಿಯೋದಲ್ಲಿ ತಿಳಿಸಲಾಗಿದೆ. ಕೇವಲ ಕೆಜಿಎಫ್ ಚಿನ್ನವನ್ನು ರಾಕಿ ಹೊತ್ತು ಸಮುದ್ರದಲ್ಲಿ ಹೋಗಿರಲಿಲ್ಲ. ಇಡೀ ಜಗತ್ತಿನ ಚಿನ್ನವನ್ನು ಹೊತ್ತು ಹೋಗಿದ್ದ. 1978 ರಿಂದ 1981 ವರೆಗೆ ಏನಾಯ್ತು ರಾಕಿ ಅಮೆರಿಕ ಮತ್ತು ಇಂಡೋನೇಷಿಯ ದೇಶದಲ್ಲಿ ಯಾವ ರೀತಿ ದಾಳಿ ಮಾಡಿ ಬಂದಿದ್ದ ಎಂದು ಕೆಜಿಎಫ್ 2 ಅಲ್ಲಿ ತೋರಿಸಿಲ್ಲ.
ಆ ಕತೆಯನ್ನು ಜೊತೆಗೆ ಇದ್ದು ಎಲ್ಲವನ್ನೂ ನೋಡಿದ್ದ ಆನಂದ್ ಇಂಗಳಗಿ ಪಾತ್ರದ ಪತ್ರಕರ್ತ ಕಥೆ ಬಿಚ್ಚಿಡುವ ಸಾಧ್ಯತೆ ಇದೆ. ಹಾಗೆ ಕೆಜಿಎಫ್ 3 ಯಾರು ಸಹ ಊಹೆ ಮಾಡದ ರೀತಿ ರಾಕಿ ಗರ್ಜಿಸುತ್ತಾನೆ ಎನ್ನಲಾಗಿದೆ.
ನಿಜಕ್ಕೂ ಯಾರು ಊಹೆ ಮಾಡದ ರೀತಿಯಲ್ಲಿ ಕೆಜಿಎಫ್ ಭಾಗ-3 ಬರುತ್ತದೆ ಎಂಬುದಾಗಿ ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಸಿನಿಮಾ ಹೇಗಿದೆ ಎಂದು ಕಮೆಂಟ್ ಮಾಡಿ ಧನ್ಯವಾದಗಳು... ( video credit : kannada news )