ಕೆಜಿಎಫ್ 3 ಬಂದೆ ಬರುತ್ತೇ ಪಾರ್ಟ್ 3 ಬೇಕೇ ಬೇಕು ಎಂದ ಪ್ರೇಕ್ಷಕರು..! ವಿಡಿಯೋ ಈಗ ವೈರಲ್

By Infoflick Correspondent

Updated:Thursday, April 14, 2022, 10:30[IST]

ಕೆಜಿಎಫ್ 3 ಬಂದೆ ಬರುತ್ತೇ ಪಾರ್ಟ್ 3 ಬೇಕೇ ಬೇಕು ಎಂದ ಪ್ರೇಕ್ಷಕರು..! ವಿಡಿಯೋ ಈಗ ವೈರಲ್

ಕನ್ನಡ ಚಲನಚಿತ್ರರಂಗದ ಬಹುನಿರೀಕ್ಷಿತ ಕೆಜಿಎಫ್ ಪಾರ್ಟ್ 2 ಸಿನಿಮಾ ಇಂದು ವಿಶ್ವದಾದ್ಯಂತ ಭರ್ಜರಿಯಾಗಿ ತೆರೆ ಕಂಡಿದೆ. ರಾಕಿ ಬಾಯ್ ಎಂಟ್ರಿಗೆ ಥಿಯೇಟರ್ ಧೂಳಿಪಟ ಆಗಿದ್ದು, ಸಿನಿಮಾ ನೋಡಿದ ಪ್ರತಿಯೊಬ್ಬರು ತುಂಬಾನೇ ಎಂಜಾಯ್ ಮಾಡಿದ್ದಾರೆ. ಹಾಗೇನೇ ಪ್ರತಿಯೊಂದು ದೃಶ್ಯ ಪ್ರೇಕ್ಷಕರನ್ನ ಥೆಯಟರ್ ಒಳಗೆ ತೇಲಾಡುವಂತೆ ಮಾಡಿವೆ. ಹೌದು ಸುಮಾರು 10000 ಸ್ಕ್ರೀನ್ ಮೇಲೆ ಮೊದಲ ಶೋ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ ಟು ಸಿನಿಮಾ ಬಿಡುಗಡೆಯಾಗಿದ್ದು, ಮೊದಲ ಶೋನಲ್ಲಿಯೇ ಒಳ್ಳೆ ಓಪನಿಂಗ್ ಪಡೆದುಕೊಂಡಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರ ನಿರ್ದೇಶನದ ಬಗ್ಗೆ ನಿಜಕ್ಕೂ ಎರಡು ಮಾತಿಲ್ಲ ಕೆಜಿಎಫ್ 2ನಲ್ಲಿ ಪ್ರಶಾಂತ್ ನೀಲ್ ಅವರ ಕೈಚಳಕ ಎದ್ದು ಕಾಣುತ್ತಿದೆ..

ಇಂದು ಕನ್ನಡಿಗರಿಗೆ ಇದು ಹೆಮ್ಮೆಯ ವಿಷಯ, ಸಿನಿಮಾ ನೋಡಿದ ಪ್ರತಿಯೊಬ್ಬರೂ ಕೂಡ ಥ್ರಿಲ್ ಆಗಿದ್ದಾರೆ. ಕೆಜಿಎಫ್-2 ಆರ್ಭಟಕ್ಕೆ ಪ್ರತಿಯೊಬ್ಬರು ಫಿದಾ ಆಗಿದ್ದಾರೆ ಎಂದು ಹೇಳಬಹುದು. ಕೆಜಿಎಫ್ 2 ಸಿನಿಮಾ ಕನ್ನಡದ ಒಂದು ಹೆಮ್ಮೆಯ ಸಿನಿಮಾವಾಗಿದೆ. ಹಾಗೆ ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮತ್ತೊಮ್ಮೆ ಸಾಬೀತಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯ ಯಾರು ಊಹೆ ಮಾಡಲು ಸಾಧ್ಯವಾಗದ ರೀತಿ ಕಂಡಿದ್ದು, ಒಂದು ಹಾಲಿವುಡ್ ಚಿತ್ರದ ಹಾಗೆ ಸಿನಿಮಾದ ಸ್ಕ್ರೀನ್ ಪ್ರೆಸೆನ್ಸ್ ಹಾಗೂ ಎಲಿವೆಶನ್ ಮೂಡಿಬಂದಿದೆ. ಕೊನೆಯ 30 ನಿಮಿಷ ಕ್ಲೈಮ್ಯಾಕ್ಸ್ ರೋಮಾಂಚನವಿದೆ ಎನ್ನುತ್ತಾರೆ ಎಲ್ಲಾ ಪ್ರೇಕ್ಷಕ ಪ್ರಭುಗಳು.

ಕನ್ನಡ ಸಿನಿಮಾ ಇಷ್ಟು ದೊಡ್ಡ ಮಟ್ಟಕ್ಕೆ ಮೂಡಿಬಂದಿರೊದ ನೋಡಿ ಎಲ್ಲರೂ ಕೂಡ ಶಾಕ್ ಆಗಿದ್ದಾರೆ. ಸಿನಿಮಾ ಹೇಗಿದೆ ಎಂದು ಸಿನಿಮಾ ನೋಡಿದ ಪ್ರೇಕ್ಷಕರು ಇದೀಗ ಅವರ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೆಜಿಎಫ್-2 ಸಿನಿಮಾ ನೋಡಿ ಕೆಜಿಎಫ್ ಪಾರ್ಟ್ 3 ಬಂದೇ ಬರುತ್ತೆ, ನಿಜಕ್ಕೂ ಬರಲೇಬೇಕು ಎಂದು ಅಭಿಮಾನಿಗಳು ಆರ್ಡರ್ ಮಾಡಿದ್ದಾರೆ. ಈ ವಿಡಿಯೋ ನೋಡಿದರೆ ನಿಜಕ್ಕೂ ಹೆಮ್ಮೆ ಪಡುತ್ತಿರ. ನಮ್ಮ ಸಿನಿಮಾಗೆ ಇಷ್ಟು ಕ್ರೇಜ್ ಹುಟ್ಟಿರುವುದು ನೋಡಿದರೆ ನಿಜಕ್ಕೂ ಖುಷಿ ಆಗುತ್ತಿದೆ. ನೀವೂ ಸಹ ಈ ವಿಡಿಯೋ ನೋಡಿ. ಬಳಿಕ ಈ ವಿಡಿಯೋವನ್ನು ಹೆಚ್ಚಿನ ಮಟ್ಟದಲ್ಲಿ ಶೇರ್ ಮಾಡಿ. ಜೊತೆಗೆ ಕೆಜಿಎಫ್ ಚಿತ್ರವನ್ನು ಎಲ್ಲರೂ ಚಿತ್ರಮಂದಿರಕ್ಕೆ ಹೋಗಿ ನೋಡಿ ಧನ್ಯವಾದಗಳು.