KGF 3: ಕೆಜಿಎಫ್ 3 ಸಿನಿಮಾ ತೆರೆಗೆ ಬರುವುದು ಪಕ್ಕಾ ಶೂಟಿಂಗ್ ಇಷ್ಟರಲ್ಲೇ ಆರಂಭವೆಂದ ನಿರ್ಮಾಪಕ ವಿಜಯ್: ಯಾವಾಗ ನೋಡಿ ?

By Infoflick Correspondent

Updated:Saturday, May 14, 2022, 19:47[IST]

KGF 3:  ಕೆಜಿಎಫ್ 3 ಸಿನಿಮಾ ತೆರೆಗೆ ಬರುವುದು ಪಕ್ಕಾ ಶೂಟಿಂಗ್ ಇಷ್ಟರಲ್ಲೇ ಆರಂಭವೆಂದ ನಿರ್ಮಾಪಕ ವಿಜಯ್:  ಯಾವಾಗ ನೋಡಿ ?

ಕನ್ನಡ ಚಿತ್ರರಂಗದ ಖ್ಯಾತ ನಟ ಯಶ್ ಅವರು ಇದೀಗ ತುಂಬಾನೇ ಪ್ರಸಿದ್ದಿ ಹೊಂದಿದ್ದಾರೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ ಹೊರ ದೇಶದಲ್ಲೂ ಕೂಡ ನಟ ಯಶ್ ಅವರ ಅಭಿನಯ ಎಲ್ಲರಿಗೂ ಇಷ್ಟವಾಗಿದೆ. ಕೆಜಿಎಫ್ ಭಾಗ-2 ಒಂದು ಅತ್ಯದ್ಭುತ ಕಮರ್ಷಿಯಲ್ ಆಕ್ಷನ್ ಚಿತ್ರ ಆಗಿದ್ದು, ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹೌದು ಕೆಜಿಎಫ್ ಭಾಗ-1 ವೀಕ್ಷಿಸಿದ ಸಿನಿಮಾ ಪ್ರಿಯರು ಕೆಜಿಎಫ್ ಭಾಗ ಎರಡರಲ್ಲಿ ಇದರ ಸಿಕ್ವೆನ್ಸ್ ಹೇಗಿರಲಿದೆ ಎಂದು ತುಂಬಾನೇ ಕಾತುರದಿಂದ ಕಾದಿದ್ದರು, ಅದಕ್ಕೆ ತಕ್ಕಂತೆ ಸಿನಿಮಾ ನಿರೀಕ್ಷೆಗಿಂತ ಕೆಜಿಎಫ್ ಭಾಗ-2 ಮೂಡಿಬಂದಿದೆ. ಹನ್ನೆರಡು ನೂರು ಕೋಟಿ ಕಲೆಕ್ಷನ್ ಮಾಡಿ ವರ್ಲ್ಡ್ ವೈಡ್ ಪೂರಾ ಧೂಳೆಬ್ಬಿಸುತ್ತಿದೆ.  

ಕೆಜಿಎಫ್ ಭಾಗ-3 ಸಿನಿಮಾ ಬರುತ್ತದೆಯೆನ್ನುವ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದ್ದು, ಈಗ ಕೆಜಿಎಫ್ ಭಾಗ-3 ಬಂದೇ ಬರುತ್ತದೆ ಎನ್ನಲಾಗಿದೆ ಚಿತ್ರದ ನಿರ್ಮಾಪಕರಾದ ವಿಜಯ್ ಕಿರಗಂದೂರು ಅವರು ಒಂದು ಬಿಗ್ ಅಪ್ಡೇಟ್ ನೀಡಿದ್ದಾರೆ. ಹೌದು ಪ್ರಶಾಂತ್ ನೀಲ್ ಅವರು ಈಗ ಪ್ರಭಾಸ್ ಅವರ ಅಭಿನಯದ ಸಲಾರ್ ಚಿತ್ರದ ಶೂಟಿಂಗ್ ನಲ್ಲಿ ತುಂಬಾ ಬ್ಯುಸಿಯಾಗಿದ್ದು, 35 ಪರ್ಸೆಂಟ್ ಸಿನಿಮಾ ಶೂಟಿಂಗ್ ಮುಕ್ತಾಯ ಆಗಿದೆ ಎಂದಿದ್ದಾರೆ. ಹಾಗೇನೇ ಇದೇ ವರ್ಷದ ಅಕ್ಟೋಬರ್ ವೇಳೆಗೆ ಸಿನಿಮಾ ಶೂಟಿಂಗ್ ಮುಗಿಯಲಿದ್ದು ಅದಾದ ಬಳಿಕವೇ, ಅಂದರೆ ನವಂಬರ್ ತಿಂಗಳಲ್ಲಿ ಕೆಜಿಎಫ್ ಭಾಗ-3 ರ ಶೂಟಿಂಗ್ ಆರಂಭಿಸುವುದಾಗಿ ತಿಳಿಸಿದ್ದಾರೆ.

ಕೆಜಿಎಫ್ ಭಾಗ-3 ಸಿನಿಮಾ 2024 ಕ್ಕೆ ತೆರೆಗೆ ಬರುವ ಸಾಧ್ಯತೆಯಿದ್ದು ಕೆಜಿಎಫ್ ಭಾಗ ಮೂರರಲ್ಲಿ ನಟ ಯಶ್ ಅವರೆ ಅಭಿನಯ ಮುಂದುವರಿಸುತ್ತಾರಾ , ಅಥವಾ ಬೇರೆ ನಟ ಯಾರಾದರೂ ಬರುತ್ತಾರ ಎಂಬುದಾಗಿ ಕಾದು ನೋಡಬೇಕಿದೆ. ಮಾರ್ವೆಲ್, ಸ್ಪೈಡರ್ಮ್ಯಾನ್ ರೀತಿ ಕೆಜಿಎಫ್ ಭಾಗ-3 ಚಿತ್ರ ಬರಬೇಕು ಎನ್ನುವ ಪ್ರಯತ್ನದಲ್ಲಿ ಕೆಲಸ ಮಾಡಬೇಕು ಎಂದು ಇದೀಗ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಸಂದರ್ಶನದಲ್ಲಿ ಇಷ್ಟು ಮಾಹಿತಿ ಬಿಟ್ಟುಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ,ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು....