KGF2 Breaks All Records : ಬಾಲಿವುಡ್ ನ ಎಲ್ಲಾ ದಾಖಲೆ ಮುರಿದ ಕೆಜಿಎಫ್2 ಗಲ್ಲಾಪೆಟ್ಟಿಗೆಯಲ್ಲಿ ಎಷ್ಟು ಗಳಿಸಿದೆ? ಇಲ್ಲಿದೆ ನೋಡಿ
Updated:Wednesday, May 4, 2022, 18:08[IST]

ಕೆಜಿಎಫ್ ಚಾಪ್ಟರ್ 2' ಸಿನಿಮಾ ಅಬ್ಬರಕ್ಕೆ ಇಡೀ ಭಾರತೀಯ ಚಿತ್ರರಂಗ ಥಂಡಾ ಹೊಡೆದಿದೆ. ಅದರಲ್ಲೂ ಬಾಲಿವುಡ್ ದಾಖಲೆಗಳನ್ನು 'ರಾಕಿ ಭಾಯ್' ಉಡೀಸ್ ಮಾಡುತ್ತಿದ್ದಾನೆ. ವೀಕೆಂಡ್ನಲ್ಲಂತೂ ಬಾಕ್ಸಾಫೀಸ್ನಲ್ಲಿ ಈ ಸಿನಿಮಾ ಧೂಳೆಬ್ಬಿಸುತ್ತಲೇ ಇದೆ. ಬಾಲಿವುಡ್ ಬಾಕ್ಸಾಫೀಸ್ನಲ್ಲಿ ರಂಜಾನ್ ಮಹತ್ವದ ಪಾತ್ರವಹಿಸುತ್ತಿದೆ.
ಕೆಜಿಎಫ್ 2' ಕೇವಲ ಹಿಂದಿ ಬೆಲ್ಟ್ನಲ್ಲಿ ಅಷ್ಟೇ ಅಲ್ಲ. ಕನ್ನಡ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿಯೂ ಜೋರಾಗೇ ಕಲೆಕ್ಷನ್ ಮಾಡಿದೆ. 'ಕೆಜಿಎಫ್ 2' ಕನ್ನಡ ವರ್ಷನ್ ಬರೋಬ್ಬರಿ 100 ಕೋಟಿ ಶೇರ್ ಪಡೆದುಕೊಂಡಿದೆ. ತೆಲುಗಿನ ಎರಡೂ ರಾಜ್ಯಗಳಿಂದ 128 ಕೋಟಿ ಗಳಿಸಿದೆ. ಎಲ್ಲಾ ಕಡೆ ಒಂದೊಂದು ಮೈಲಿಗಲ್ಲು ದಾಟಿರುವ 'ಕೆಜಿಎಫ್ 2' ವಿಶ್ವದಾದ್ಯಂತ 19 ದಿನಗಳಲ್ಲಿ ಸುಮಾರು 1034.85 ಕೋಟಿ ಲೂಟಿ ಮಾಡಿದೆ.
ಈ ಚಿತ್ರ ಬಾಲಿವುಡ್ನಲ್ಲಿ ನಿತ್ಯ ಹೊಸ ಹೊಸ ಮೈಲಿಗಲ್ಲನ್ನು ಸೃಷ್ಟಿ ಮಾಡುತ್ತಾ ಮುಂದೆ ಸಾಗುತ್ತಿದೆ. ಹಿಂದಿಯ ಆವೃತ್ತಿಯಲ್ಲಿ ಶುಕ್ರವಾರ 4.25 ಕೋಟಿ , ಶನಿವಾರ 7.25 ಕೋಟಿ, ಭಾನುವಾರ 9.27 ಕೋಟಿ, ಸೋಮ 3.75 ಕೋಟಿ, ಮಂಗಳವಾರ 9.57 ಕೋಟಿ. ಒಟ್ಟು: ₹ 382.90 ಕೋಟಿ. ಗಳಿಸಿದೆ.
ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಸಿನಿಮಾ ಎಂಬ ಖ್ಯಾತಿ 'ದಂಗಲ್'ಗೆ ಇತ್ತ. ಆದರೆ ಈ ಚಿತ್ರವನ್ನು 'ಕೆಜಿಎಫ್ 2' ಈ ವಾರ ಹಿಂದಿಕ್ಕಲಿದೆ. ಸದ್ಯ ಇದು ದಂಗಲ್, ಬಾಹುಬಲಿ: ದಿ ಕನ್ಕ್ಲೂಷನ್ ಮತ್ತು ಆರ್ಆರ್ಆರ್ ನಂತರದ ಮೈಲಿಗಲ್ಲನ್ನು ದಾಟಿದ ನಾಲ್ಕನೇ ಭಾರತೀಯ ಚಿತ್ರವಾಗಿದೆ.