ಕೆಜಿಎಫ್ 2 ಬ್ಲಾಕ್ ಬಾಸ್ಟರ್ ಎಂದಪ್ರೇಕ್ಷಕರು; ಇಲ್ಲಿದೆ ನೋಡಿ ರಿವ್ಯೂ

By Infoflick Correspondent

Updated:Thursday, April 14, 2022, 08:08[IST]

ಕೆಜಿಎಫ್ 2 ಬ್ಲಾಕ್ ಬಾಸ್ಟರ್ ಎಂದಪ್ರೇಕ್ಷಕರು; ಇಲ್ಲಿದೆ ನೋಡಿ ರಿವ್ಯೂ

ಸುಮಾರು ನಾಲ್ಕು ವರ್ಷ ಇದೊಂದು ಘಳಿಗೆಗಾಗಿ ಸಿನಿಪ್ರಿಯರು ಕಾದು ಕೂತಿದ್ದರು. 'ಕೆಜಿಎಫ್ 2' ಸಿನಿಮಾ ನೋಡಲು ಮಧ್ಯರಾತ್ರಿಯಿಂದಲೇ ಸಿನಿಮಾ ನೋಡಿದ  ನೆಟ್ಟಿಗರು 'ಕೆಜಿಎಫ್ 2' ಮೊದಲಾರ್ಧ ಸಿನಿಮಾ ಬಗ್ಗೆ ಟ್ವಿಟರ್‌ನಲ್ಲಿ ವಿಮರ್ಶೆ ಮಾಡುವುದಕ್ಕೆ ಆರಂಭಿಸಿದ್ದಾರೆ. ನೆಟ್ಟಿಗರ ವಿಮರ್ಶೆ ತುಣುಕು ಇಲ್ಲಿದೆ ನೋಡಿ. 

*ಈ ಚಿತ್ರ ತಾಯಿ ಪ್ಲ್ಯಾಶ್ ಬ್ಯಾಕ್‌ನಿಂದ ಆರಂಭ ಆಗುತ್ತದೆ. ಕೆಜಿಎಫ್ 2' ಸಿನಿಮಾ ನೋಡಿದವರಿಗೆ ಫಸ್ಟ್ ಹಾಫ್ ಅಂತೂ ಸಿಕ್ಕಾಪಟ್ಟೆ ಇಷ್ಟ ಆಗಿದೆ. 

*ಇಂಟರ್‌ವಲ್ ಅಂತೂ ಬೆಂಕಿ ಹತ್ತಿಸುವಂತಿದೆ. ಬಿಜಿಎಂ ಅಂತೂ ಸೂಪರ್.  

* ಹೀರೊ ಇಂಟ್ರುಡಕ್ಷನ್ ಅದ್ಭುತವಾಗಿದೆ. ಆದರೆ, ಸಿಕ್ಕಾಪಟ್ಟೆ ಬಿಲ್ಡಪ್ ಇದೆ.   

*ಯಶ್ ಅವರ ನಟನೆ ಮೈಯಲ್ಲಿ ವಿದ್ಯುತ್ ಹರಿಯುವಂತೆ ಮಾಡುತ್ತದೆ. ಸಂಜಯ್ ದತ್​ ನಟನೆ ಅತ್ಯದ್ಭುತ’  

* ರಾಕಿ ಭಾಯ್ ಜೊತೆ ಅಧೀರ ಎಂಟ್ರಿ ಕೂಡ ತೀರಾ ಭಯಂಕರವಾಗಿದೆ. ಸಿನಿಮಾದ ತೀವ್ರತೆಗೆ 3 ಸ್ಟಾರ್, ಕಥೆಯಲ್ಲಿ ಗ್ರಿಪ್ ಇದೆ. ಸಂಜಯ್​ ದತ್​ ನಿಭಾಯಿಸಿರುವ ಅಧೀರ ಪಾತ್ರ ಮೊದಲಾರ್ಧದಲ್ಲೇ ಎಂಟ್ರಿ ಆಗಿದೆ. ರಾಕಿ ಭಾಯ್​ ಮತ್ತು ಅಧೀರ ಫಸ್ಟ್​ ಹಾಫ್​ನಲ್ಲಿಯೇ ಮುಖಾಮುಖಿ ಆಗುತ್ತಾರೆ. 

* ಮೊದಲಾರ್ಧದಲ್ಲಿ ರಮಿಕಾ ಸೇನ್ ಉರ್ಫ್ ರವೀನಾ ಟಂಡನ್ ಎಂಟ್ರಿ ಕೊಟ್ಟಿಲ್ಲ. ಹೀಗಾಗಿ ದ್ವಿತೀಯಾರ್ಧದಲ್ಲಿ ರಮಿಕಾ ಎಂಟ್ರಿ ಬಳಿಕ ಪ್ರೇಕ್ಷಕರಿಗೆ ಮತ್ತೊಂದು ಟ್ವಿಸ್ಟ್ ಸಿಗಲಿದೆ.‌ ನಾಯಕಿ ಶ್ರೀನಿಧಿ ಶೆಟ್ಟಿಗೆ ಫಸ್ಟ್ ಹಾಫ್‌ನಲ್ಲಿ ಹೆಚ್ಚಿಗೆ ಕೆಲಸವಿಲ್ಲ. ಹೀಗಾಗಿ ಸೆಕೆಂಡ್ ಹಾಫ್‌ನಲ್ಲಿ ಶ್ರೀನಿಧಿ ಹಾಗೂ ರವೀನಾ ಪಾತ್ರಗಳು ಮೇಜರ್ ಟ್ವಿಸ್ಟ್‌ಗೆ ಸಾಕ್ಷಿಯಾಗಬಹುದು. 

*ಎಲ್ಲಕ್ಕಿಂತ ಹೆಚ್ಚಾಗಿ ಅನಂತ್ ನಾಗ್ ಮಗನ ಪಾತ್ರದಲ್ಲಿ ಪ್ರಕಾಶ್ ರೈ ಕಾಣಿಸಿಕೊಳ್ಳಿದ್ದಾರೆ. ಹಾಗಾಗಿ ಪ್ರಕಾಶ್ ರೈ ಅವರದ್ದು ಅನಂತ್ ನಾಗ್ ಅವರ ರಿಪೈಸ್ ಪಾತ್ರವಲ್ಲ.! 

*ಒಂದು ಕಾರ್​ ಚೇಸಿಂಗ್​ ದೃಶ್ಯ ತುಂಬ ಥ್ರಿಲ್ಲಿಂಗ್​ ಆಗಿದೆ. ನಂತರ ಬರುವ ಒಂದು ಫೈಟಿಂಗ್​ ಸೀನ್​ ಕೂಡ ಮಾಸ್​ ಪ್ರೇಕ್ಷಕರನ್ನು ಸೆಳೆಯುವಂತಿದೆ. 

* ರಾಕಿಭಾಯ್‌ ಎಂಟ್ರಿಯೇ ಒಂದು ಅದ್ಭುತ. ನೋಡಲು ಎರಡು ಕಣ್ಣು ಸಾಲದು ಎಂಬಂತೆ ರಾಕಿಭಾಯ್‌ ಎಂಟ್ರಿಯನ್ನ ಚಿತ್ರಿಸಿದ್ದಾರೆ‌ ಡೈರೆಕ್ಟರ್ ಪ್ರಶಾಂತ್‌ ನೀಲ್.‌ ಹೀಗೆ ಪ್ರತಿಯೊಂದು ಸೀನ್‌ ಕೂಡ ಪ್ರೇಕ್ಷಕನ ಎದೆಬಡಿತ ಹಿಡಿದಿಟ್ಟುಕೊಳ್ಳುತ್ತದೆ


* ಬಹಳಷ್ಟು ಜನರು ಕೆಜಿಎಫ್-2' ಸಿನಿಮಾಗೆ 5ಕ್ಕೆ 5 ರೇಟಿಂಗ್‌ ನೀಡಿದ್ದಾರೆ. ಮತ್ತು ಈ ಸಿನಿಮಾ ಭಾರತ ಚಿತ್ರರಂಗದ ಕಿರೀಟ ಎಂದು ಬರೆದುಕೊಂಡಿದ್ದಾರೆ