ಕೆಜಿಎಫ್ 2 ಕೊನೆ ಕ್ಲೈಮ್ಯಾಕ್ಸ್ ನಲ್ಲಿ ಬಂದ ಹಾಡು ನಿಜಕ್ಕೂ ಯಾರು ಬರದದ್ದು ಗೊತ್ತಾ..? ಈಗ ವೈರಲ್

By Infoflick Correspondent

Updated:Monday, April 25, 2022, 10:54[IST]

ಕೆಜಿಎಫ್ 2 ಕೊನೆ ಕ್ಲೈಮ್ಯಾಕ್ಸ್ ನಲ್ಲಿ ಬಂದ ಹಾಡು ನಿಜಕ್ಕೂ ಯಾರು ಬರದದ್ದು ಗೊತ್ತಾ..? ಈಗ ವೈರಲ್

ಕನ್ನಡದ ಚಿತ್ರ ಹೆಮ್ಮೆಯ ಕೆಜಿಎಫ್ ಚಾಪ್ಟರ್ 2 ಸಿನಿಮಾ ಈಗ ವಿಶ್ವಮಟ್ಟದಲ್ಲಿ ಹೆಸರು ಮಾಡುತ್ತಿದೆ. ಹೌದು ನಟ ಯಶ್ ಅವರು ಅಭಿನಯಿಸಿದ ಕೆಜಿಎಫ್ ಚಿತ್ರ 900 ಕೋಟಿ ಹತ್ತಿರ ಅಧಿಕ ಕಲೆಕ್ಷನ್ ಮಾಡಿರುವುದಾಗಿ ವರದಿಯಾಗಿದೆ. ಹೌದು ಸಿನಿಮಾ ಬಿಡುಗಡೆಯಾಗುವ ಮುನ್ನ ತುಂಬಾ ಕ್ರೇಜ್ ಹುಟ್ಟಿಸಿದ್ದು, ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಭಾಗ ಒಂದರಲ್ಲಿ ಅತ್ಯದ್ಭುತವಾಗಿ ಕಥೆ ಹೆಣೆದು ಸಿನಿಮಾ ಮಾಡಿ ಗೆದ್ದಿದ್ದರು..ಈಗ ಕೆಜಿಎಫ್ ಭಾಗ-2 ಯಾವ ರೀತಿ ಇರಲಿದೆ ಎಂಬುದಾಗಿ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದ ಅಭಿಮಾನಿ ದೇವರುಗಳಿಗೆ ನಿರೀಕ್ಷೆ ಸುಳ್ಳಾಗಲಿಲ್ಲ. ಕೆಜಿಎಫ್ ಭಾಗ-2 ಚಿತ್ರ ಅಂದುಕೊಂಡಿದ್ದಕ್ಕಿಂತಲೇ ಹೆಚ್ಚು ಯಶಸ್ವಿಯಾಗಿದೆ ಎಂದು ಹೇಳಬಹುದು.  

ಚಿತ್ರತಂಡ ಇದೀಗ ಸಖತ್ ಖುಷಿಯಲ್ಲಿ ತೇಲಾಡುತ್ತಿದೆ. ಕೆಜಿಎಫ್ ಸಿನಿಮಾದ ಹಾಡುಗಳು ಕೂಡ ತುಂಬಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದಾವೆ. ತೂಫಾನ್, ಸುಲ್ತಾನ್, ಹಾಗೆ ತಾಯಿ ಹಾಡು ಎಲ್ಲವೂ ಕೂಡ ಮೈರೋಮಾಂಚನ ಆಗಿದ್ದು. ಕೆಜಿಎಫ್ ಚಾಪ್ಟರ್ 2 ಚಿತ್ರದ ಕ್ಲೈಮ್ಯಾಕ್ಸ್ ಮುಗಿದ ಬಳಿಕ ಬರುವ ಹಾಡು ಬಾ ಬಾ ಬಾ ಮಾನ್ಸ್ಟಾರ್ ತುಂಬಾ ವೈರಲ್ ಆಗಿದೆ. ಯೂಟ್ಯೂಬ್ನಲ್ಲಿ ಬಿಡುಗಡೆಯಾದ ಈ ಹಾಡು ಒಂದೇ ಗಂಟೆಯಲ್ಲಿ ಒಂದು ಮಿಲಿಯನ್ ವಿಕ್ಷಣೆ ಪಡೆದಿದೆ.

ಅಸಲಿಗೆ ಇದನ್ನು ಬರೆದು ಹಾಡಿದವರು ಯಾರು ಗೊತ್ತಾ ಫ್ರೆಂಚ್ ಬಿರಿಯಾನಿ ಸಿನಿಮಾಗೆ ಪಿಆರ್ಕೆ ಪ್ರೊಡಕ್ಷನ್ ನಲ್ಲಿ ಬೆಂಗಳೂರು ನಮ್ಮ ಬೆಂಗಳೂರು ಹಾಡು ಬರೆದು ರಾಪ್ ಸಾಂಗ್ ಮಾಡಿ ಧ್ವನಿಗೂಡಿಸಿದ ಕನ್ನಡದ ಹಿರಿಯ ನಟ ಅರುಣ್ ಸಾಗರ್ ಅವರ ಪುತ್ರಿ ಅದಿತಿ ಸಾಗರ್ ಎಂದು ತಿಳಿದು ಬಂದಿದೆ.

ಕೆಜಿಎಫ್ 2  ಹಾಡು ಬಿಡುಗಡೆಯಾದ ಎಲ್ಲಾ ಹಾಡುಗಳು ರೋಮಾಂಚನಗೊಳಿಸಿದವು ಎನ್ನಬಹುದು. ಈ ಹಾಡು ಕೇಳಿದ್ದರೆ ಹೇಗಿದೆ ಎಂದು ಕಾಮೆಂಟ್ ಮಾಡಿ. ಹಾಗೆ ಯಶ್ ಅಣ್ಣ ಮತ್ತು ಇಡೀ ಕೆಜಿಎಫ್ 2 ಚಿತ್ರತಂಡಕ್ಕೆ ಅದಿತಿ ಸಾಗರ್ ಧನ್ಯವಾದ ತಿಳಿಸಿದ್ದಾರೆ...