Ravichandran : ನನ್ನ ತಾಯಿ ಜೀವಂತ ಇದ್ದಾರೆ ಅಂದ್ರೆ ಅದಕ್ಕೆ ಕಾರಣ ರವಿಚಂದ್ರನ್ ಎಂದ ಖುಷ್ಬೂ..! ವಿಡಿಯೋ

By Infoflick Correspondent

Updated:Thursday, May 26, 2022, 13:02[IST]

Ravichandran :  ನನ್ನ ತಾಯಿ ಜೀವಂತ ಇದ್ದಾರೆ ಅಂದ್ರೆ ಅದಕ್ಕೆ ಕಾರಣ ರವಿಚಂದ್ರನ್ ಎಂದ ಖುಷ್ಬೂ..! ವಿಡಿಯೋ

ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಮಕ್ಕಳ ಕಾರ್ಯಕ್ರಮ ಡ್ರಾಮಾ ಜೂನಿಯರ್ಸ್ ಇದೀಗ ತುಂಬಾನೇ ಅದ್ಭುತವಾಗಿ ಪ್ರದರ್ಶನ ಕಾಣುತ್ತಿದೆ. ಹೌದು ಈ ವಾರ ನಟ ರವಿಚಂದ್ರನ್ ಅವರ ಹುಟ್ಟುಹಬ್ಬವ ಡ್ರಾಮಾ ಜೂನಿಯರ್ ಸೆಟ್ಟಿನಲ್ಲಿ ಆಚರಣೆ ಮಾಡಲಾಗಿತ್ತು. ಮಕ್ಕಳ ತುಂಟಾಟ, ಕಾಮಿಡಿ ನಟನೆ ಎಲ್ಲಾದಕ್ಕೂ ಫಿದಾ ಆಗಿರುವ ಜಡ್ಜಸ್ ಜೊತೆಗೆ ಈ ವಾರ ರವಿಚಂದ್ರನ್ ಅವರ ಹುಟ್ಟುಹಬ್ಬವನ್ನು ತುಂಬಾ ಗ್ರಾಂಡ್ ಆಗಿ ಆಚರಿಸಿದ್ದಾರೆ ಎಂದು ಹೇಳಲಾಗಿದೆ. ಹೌದು ಇದೆ ಮೂವತ್ತಕ್ಕೆ 61 ನೇ ವಸಂತಕ್ಕೆ ಕಾಲಿಡುತ್ತಿರುವ ನಟ ರವಿಚಂದ್ರನ್ ಅವರ ಹುಟ್ಟುಹಬ್ಬಕ್ಕೆ ದಕ್ಷಿಣ ಸಿನೆಮಾ ರಂಗದ ಖ್ಯಾತ ನಟಿ ಖುಷ್ಬೂ ಅವರು ಆಗಮಿಸಿದ್ದರು. ಹಾಗೆ ಖುಷ್ಬೂ ಅವರಿಂದ ಹೂಗುಚ್ಛ ಪಡೆದ ನಟ ರವಿಚಂದ್ರನ್ ಅವರು ಫ್ಲವರ್ ಇಂದ ಫ್ಲವರ್ ತೆಗೆದುಕೊಂಡಿದ್ದೇನೆ ಎಂದು ಖುಷಿಯಾಗಿಯೇ ಅವರ ಹುಟ್ಟುಹಬ್ಬದ ಶುಭಾಶಯವನ್ನು ಸ್ವೀಕರಿಸಿದರು.   

ರವಿಚಂದ್ರನ್ ಹಾಗೂ ನಟಿ ಖುಷ್ಬೂ ಅವರು ರಣಧೀರ ಮತ್ತು ಅಂಜದಗಂಡು ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿದ್ದರು. ರಣಧೀರ ಸಿನಿಮಾ ಅಂದಿನ ಕಾಲದಲ್ಲಿಯೇ ತುಂಬಾ ಹಿಟ್ ಆಗಿತ್ತು. ನಟಿ ಖುಷ್ಬೂ ವ್ಯಾಯಾಮ ವಾಕಿಂಗ್ ಮಾಡಿಯೇ ಇದೀಗ 20 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಹೌದು ಅಂದಿನ ಅಂಜದಗಂಡು ಸಿನಿಮಾದಲ್ಲಿ ಹೇಗೆ ಖುಷ್ಬೂ ಕಾಣಿಸುತ್ತಿದ್ದರೋ ಅದೇ ರೀತಿ ಈಗ ಡ್ರಾಮಾ ಜೂನಿಯರ್ ಸೆಟ್ಟಿನಲ್ಲಿ ಕಾಣಿಸಿಕೊಂಡಿದ್ದಾರೆ. ಬಳಿಕ ನಟ ರವಿಚಂದ್ರನ್ ಅವರನ್ನು ನೆನೆದು, ಖುಷ್ಬೂ ಅವರು ಇಂದು ನನ್ನ ತಾಯಿ ಜೀವಂತವಾಗಿದ್ದಾರೆ ಎಂದರೆ ಅದಕ್ಕೆ ರವಿಚಂದ್ರನ್ ಅವರೆ ಕಾರಣ. ನನ್ನನ್ನು ಕನ್ನಡ ಚಿತ್ರರಂಗಕ್ಕೆ ರಣಧೀರ ಮೂಲಕ 35 ವರ್ಷದ ಹಿಂದೆಯೇ ಪರಿಚಯ ಮಾಡಿದ್ದು ಇದೆ ನಟ ರವಿಚಂದ್ರನ್ ಎಂದರು.  

ಹಾಗೆ ಕೆಲವರು ಜೀವನದಲ್ಲಿ ಬರುತ್ತಾರೆ, ಇನ್ನು ಕೆಲವರು ಬಂದು ಹೋಗುತ್ತಾರೆ, ಆದರೆ ಸುಮಾರು 35 ವರ್ಷಗಳಿಂದ ರವಿಚಂದ್ರನ್ ಮತ್ತು ನಮ್ಮ ಸ್ನೇಹ ಪ್ರೀತಿ ಹಾಗೇಯೇ ಇದೆ. ಅವರ ಹುಟ್ಟುಹಬ್ಬಕ್ಕೆ ನನ್ನನ್ನು ಡ್ರಾಮಾ ಜೂನಿಯರ್ಸ್ ಗೆ ಕರೆತಂದದ್ದಕ್ಕೆ ಧನ್ಯವಾದ ಎಂದರು ಖುಷ್ಬೂ. ರವಿಚಂದ್ರನ್ ಅವರು ಮಾಡಿರುವ ಸಹಾಯ ನೆನೆದು, ನಾನು ಎಂದಿಗೂ ಅವರಿಗೆ ಚಿರಋಣಿ ಎಂದರು ಖುಷ್ಬೂ. ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ. ನಟ ರವಿಚಂದ್ರನ್ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನ ಮಕ್ಕಳು ಹೇಗೆ ಮಾಡಿದ್ದಾರೆ ಎಂದು ಗೊತ್ತಾಗುತ್ತದೆ. ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ. ಧನ್ಯವಾದಗಳು... ( video credit : Zee kannada )