ಸುಳ್ಳು ಸುದ್ದಿಯ ವೈರಲ್ ಗೆ ಮಾತಿನ ಗುದ್ದು ನೀಡಿದ ಕಿಚ್ಚ

By Infoflick Correspondent

Updated:Saturday, April 23, 2022, 10:11[IST]

ಸುಳ್ಳು ಸುದ್ದಿಯ ವೈರಲ್ ಗೆ ಮಾತಿನ ಗುದ್ದು ನೀಡಿದ ಕಿಚ್ಚ

ನಟ ಸುದೀಪ್ 'ಕೆಜಿಎಫ್' ಬಗ್ಗೆ ಮಾತನಾಡಿಲ್ಲವೆಂದೊ ಅಥವಾ ಯಾವುದೋ ಹಳೆಯ ವಿಡಿಯೋದಲ್ಲಿ 'ಕೆಜಿಎಫ್' ಬಗ್ಗೆ ಏನೋ ಹೇಳಿದ್ದಾರೆಂದೊ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಈ ಚರ್ಚೆ ನಡೆಯುತ್ತಿರುವಾಗಲೇ ನಟ ಸುದೀಪ್ ತಲೆಕೆಡೆಸಿಕೊಳ್ಳದೆ ತಮ್ಮ ಕಾರ್ಯದಲ್ಲಿ ಬಿಜಿ ಇದ್ದಾರೆ. 

ನಟ ಜಗ್ಗೇಶ್ ನಟನೆಯ 'ತೋತಾಪುರಿ' ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ  ಆಯೋಜಿತವಾಗಿತ್ತು. ಕಾರ್ಯಕ್ರಮದಲ್ಲಿ ನಟ ಸುದೀಪ್ ಭಾಗವಹಿಸಿ, ಟ್ರೇಲರ್ ಬಿಡುಗಡೆ ಮಾಡಿದರು. ಈ ಸಮಯದಲ್ಲಿ ಸಿನಿಮಾದ ಬಗ್ಗೆ ಚಿತ್ರರಂಗದ ಬಗ್ಗೆ, ಹಿರಿಯ-ಕಿರಿಯ ನಟರ ಬಗ್ಗೆ ಸಾಕಷ್ಟು ವಿಷಯಗಳನ್ನು ಮಾತನಾಡಿದರು. 

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯರು ಪಂಡಿತ್ ಶ್ರೀ ರಾಮಚಂದ್ರ ಆಚಾರ್ಯ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯವಹಾರ ಹಣಕಾಸು ಸಾಲದ ಬಾಧೆ ಪ್ರೀತಿ-ಪ್ರೇಮ ವಿಚಾರ ಮನೆಯಲ್ಲಿ ಅಶಾಂತಿ ಅತ್ತೆ-ಸೊಸೆ ಕಿರಿಕಿರಿ ಮತ್ತೆ ಯಾವುದೇ ಏನೇ ಸಮಸ್ಯೆಗಳಿದ್ದರೂ ಅಘೋರಾರ   ನಾಗಸಾಧು ಶಕ್ತಿಗಳಿಂದ ಕೇವಲ ಎರಡೇ ಗಂಟೆಯಲ್ಲಿ ಶಾಶ್ವತ ಪರಿಹಾರ - 9035551170

ನವರಸನಾಯಕ ಜಗ್ಗೇಶ್ ಅಭಿನಯದ ತೋತಾಪುರಿ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಅಭಿನಯಚಕ್ರವರ್ತಿ ಕೆಜಿಎಫ್ 2 ಸಿನಿಮಾದ ಬಗ್ಗೆ ಅನಾವಶ್ಯಕವಾಗಿ  ಸುದೀಪ್ ಅವರನ್ನು ಎಳೆದು ವಿವಾದ ಎಬ್ಬಿಸಿದಕ್ಕೆ ಪರೋಕ್ಷವಾಗಿ ತಮ್ಮ ಚಾಣಾಕ್ಷ ಮಾತಿನಿಂದ ಚಾಟಿ ಬೀಸಿದ್ದಾರೆ. 

ಕಾರ್ಯಕ್ರಮದಲ್ಲಿ ನಿರೂಪಕಿ ಕೇಳಿದ ಪ್ರಶ್ನೆಗೆ ಉತ್ತರ ನೀಡುತ್ತಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿ ವಿವಾದ ಮಾಡಿದ್ದಕ್ಕೆ ಕಿಚ್ಚ ಸುದೀಪ್ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ. 

ಸುದೀಪ್ ಎಲ್ಲಾ ಚಿತ್ರಗಳನ್ನು ಪ್ರೋತ್ಸಾಹಿಸುತ್ತಾರೆ ಎಂದು ನಿರೂಪಕರು ಹೇಳಿದ್ದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಸುದೀಪ್ 'ಸಿನಿಮಾಗೆ ಸಪೋರ್ಟ್ ಮಾಡಿಲ್ಲ ಅಂದ್ರೆ ನಾನು ಸುದ್ದಿಯಲ್ಲಿರ್ತೀನಿ' ಎಂದು ಹೇಳಿದ್ದಾರೆ. ನಂತರ ನಿರೂಪಕಿ ತೋತಾಪುರಿ ಹಣ್ಣಿನಲ್ಲಿ ನೀವು ಹುಳಿ, ಖಾರ, ಉಪ್ಪು, ಸಿಹಿ ಎಂದಾದರೆ ನೀವು ಯಾವುದು ಎಂದು ಕೇಳಿದ ಪ್ರಶ್ನೆಗೆ ಎಲ್ಲರಿಗೂ ನಾನು ಒಂದೊಂದು ರೀತಿ ಕಾಣಬಹುದು. ಅದು ನಮ್ಮನ್ನು ರುಚಿಸುವವರ ನಾಲಿಗೆಯ ಮೇಲೆ ಅವಲಂಬಿಸಿರುತ್ತದೆ. ಅದು ಜನ ಸ್ವೀಕರಿಸುವ ರೀತಿ ಒಂದೊಂದು ಬಗೆಯಾಗಿರುತ್ತದೆ ಇದಕ್ಕೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದರು.

VIDEO CREDIT : Cinibuzz