ಭಾನುವಾರದ ಪೂರ್ತಿ ಸಮಯ ಇವರ ಜೊತೆಗೆ ಎಂದ ಕಿಚ್ಚ ಸುದೀಪ್..! ಅಸಲಿಗೆ ಅಂಥದ್ದೇನಾಯ್ತು

By Infoflick Correspondent

Updated:Friday, March 4, 2022, 08:28[IST]

ಭಾನುವಾರದ ಪೂರ್ತಿ ಸಮಯ ಇವರ ಜೊತೆಗೆ ಎಂದ ಕಿಚ್ಚ ಸುದೀಪ್..! ಅಸಲಿಗೆ ಅಂಥದ್ದೇನಾಯ್ತು

ಸ್ಯಾಂಡಲ್ವುಡ್ನ ಕಿಚ್ಚ ಸುದೀಪ್ ಅವರು ಇದೀಗ ಮಹತ್ತರ ಕಾರ್ಯವನ್ನು ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಹೌದು ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಕೊರೋನ ಹಾವಳಿ ಹೆಚ್ಚಾಗಿದ್ದು, ಎಲ್ಲಾ ಕೆಲಸಗಳು ಸ್ಥಗಿತಗೊಂಡಿದ್ದವು. ಹಾಗೆ ಸಿನೆಮಾ ಕಾರ್ಯಗಳು ಕೂಡ ನಿಂತು ಹೋಗಿದ್ದವು. ಈಗೀಗ ಸಿನಿಮಾ ಥಿಯೇಟರ್ ಗಳು ಓಪನ್ ಆಗುತ್ತಿವೆ. ಜೊತೆಗೆ ಈ ಸಿನಿಮಾ ಕೆಲಸಗಳು ಕೂಡ ಆರಂಭವಾಗಿವೆ. ಸ್ಟಾರ್ ನಟರು ಎಂದರೆ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತಸ, ಹಾಗೂ ಅವರನ್ನು ನೋಡಬೇಕು ಎನ್ನುವ ಹತಾಶೆ ಅಭಿಮಾನ ತುಂಬಾನೆ ಇರುತ್ತದೆ. ಅವರನ್ನು ಕಾಣಬೇಕು, ಅವರ ಜೊತೆ ಮಾತನಾಡಬೇಕು, ಅವರ ಜೊತೆ ಫೋಟೋ ತೆಗೆಸಿಕೊಳ್ಳಬೇಕು ಎಂಬುದಾಗಿ ಅಭಿಮಾನಿಗಳ ಆಶಯ ಆಗಿರುತ್ತದೆ.  

ಹೌದು ಅಂತಹದಕ್ಕೆ ಇದೀಗ ಕಿಚ್ಚ ಸುದೀಪ್ ಅವರು ಸ್ಥಾನ ಮಾಡಿಕೊಟ್ಟಿದ್ದಾರೆ. ಕಳೆದ ಎರಡು ವರ್ಷಗಳಿಂದ ಯಾವ ಅಭಿಮಾನಿಗಳನ್ನ ಭೇಟಿ ಮಾಡದ ಕಾರಣಕ್ಕಾಗಿ ಅವರಿಗೆ ಸಮಯ ನೀಡಬೇಕು ಎಂದು ಪ್ರತಿ ಭಾನುವಾರ ಸುದೀಪ್ ಅವರು ಎಲ್ಲಾ ಅವರ ಅಭಿಮಾನಿ ದೇವರುಗಳಿಗೆ ಸಮಯ ಮೀಸಲಿಡುತ್ತಿದ್ದಾರಂತೆ. ಪ್ರತಿ ಭಾನುವಾರ ನೀವು ಸುದೀಪ್ ಅವರನ್ನು ಅವರ ಮನೆ ಬಳಿ ಭೇಟಿ ಮಾಡಬಹುದು ಎಂದು ಇದೀಗ ತಿಳಿದುಬಂದಿದೆ. ಸುದೀಪ್ ಅಭಿಮಾನಿಗಳಿಗಾಗಿ ಪೂರ್ತಿ ಭಾನುವಾರ ಸಮಯ ಮೀಸಲಿಡುತ್ತಿದ್ದಾರೆ. ಈ ವಿಷಯ ತಿಳಿದು ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸುತ್ತಿದ್ದು, ಭಾನುವಾರ ಅವರ ಮನೆ ಬಳಿ ಅವರ ಅಭಿಮಾನಿಗಳು ದೌಡಾಯಿಸುತ್ತಿದ್ದಾರೆ ಎಂದು ಮಾಧ್ಯಮ ಮೂಲಕ ಹೇಳಲಾಗಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...