Sudeep : ಕಿಚ್ಚ ಸುದೀಪ್ ಜೀವನದಲ್ಲಿ ಕೊಂಡುಕೊಂಡ ಮೊದಲ ಕಾರು ಬೈಕ್ ಯಾವುದು ಗೊತ್ತಾ..? ಅವರ ಬಾಯಲ್ಲೇ ಕೇಳಿ

By Infoflick Correspondent

Updated:Monday, May 23, 2022, 22:22[IST]

Sudeep :  ಕಿಚ್ಚ ಸುದೀಪ್ ಜೀವನದಲ್ಲಿ ಕೊಂಡುಕೊಂಡ ಮೊದಲ ಕಾರು ಬೈಕ್ ಯಾವುದು ಗೊತ್ತಾ..? ಅವರ ಬಾಯಲ್ಲೇ ಕೇಳಿ

ಕನ್ನಡದ ಬಾದ್ಶಾ ಕಿಚ್ಚ ಸುದೀಪ್ ಅವರು ಇದೀಗ ವಿಕ್ರಾಂತ್ ರೋಣ ಸಿನಿಮಾದ ಕೆಲಸಗಳಲ್ಲಿ ತುಂಬಾ ಬಿಜಿಯಾಗಿದ್ದಾರೆ. ಹೌದು ವಿಕ್ರಾಂತ್ ರೋಣ ಸಿನಿಮಾ ಒಂದು ದೊಡ್ಡ ಬಜೆಟ್ ಸಿನಿಮಾ ಆಗಿದ್ದು, ಒಟ್ಟು ಏಳು ಭಾಷೆಗಳಲ್ಲಿ ಕನ್ನಡದ ಚಿತ್ರ ಬಿಡುಗಡೆಯಾಗುತ್ತಿದೆ. ಹೌದು ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಇತ್ತೀಚಿಗೆ ಕೆಜಿಎಫ್ ಚಿತ್ರವೂ ದೊಡ್ಡಮಟ್ಟದಲ್ಲಿ ವಿಶ್ವಮಟ್ಟಕ್ಕೆ ತಲುಪಿ ಕನ್ನಡದ ಗತ್ತು ಏನು ಎಂಬುದಾಗಿ ತೋರಿಸಿತ್ತು. ಹೌದು ಇದಿಗ್ಕ್ ಕಿಚ್ಚ ಸುದೀಪ್ ಅವರ ಸರದಿ, ವಿಕ್ರಾಂತ ರೋಣ ಸಿನಿಮಾ ದೊಡ್ಡ ಬಜೆಟ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾವಾಗಿ ಹೊರಹೊಮ್ಮುತಿದೆ. ಸುದೀಪ್ ಅವರು ಅಪಾರ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲದೆ ಬಹುಭಾಷಾ ನಟರಲ್ಲಿ ಕಿಚ್ಚ ಸುದೀಪ್ ಅವರು ಹೆಚ್ಚು ಗುರುತಿಸಿಕೊಂಡಿದ್ದಾರೆ.  

ಹೌದು ಕಿಚ್ಚ ಸುದೀಪ್ ಅವರು ಜೀವನದಲ್ಲಿ ಮೊದಲ ಬಾರಿ ಕೊಂಡುಕೊಂಡ ಬೈಕ್ ಹಾಗೂ ಕಾರು ಯಾವುದು ಎಂದು ಈಗ ಮಾಹಿತಿ ಲಭ್ಯವಾಗಿದೆ. ನಟ ಕಿಚ್ಚ ಸುದೀಪ್ ಅವರು ಮೊದಲ ಬೈಕ್ ಕೊಂಡುಕೊಂಡಿದ್ದೂ ಆರ್ ಎಕ್ಸ್ ಹಂಡ್ರೆಡ್ ಅಂತೆ.. ಅದಕ್ಕಿಂತ ಮೊದಲು ಕಿಚ್ಚ ಸುದೀಪ್ ಮತ್ತು ಪ್ರಿಯ ಅವರ ನಡುವೆ ಬಂದು ಸ್ಕೂಟಿ ಇತ್ತು. ಆ ಸ್ಕೂಟಿ ನೆನಪು ಇದೀಗ ತುಂಬಾ ಇವೆ ಎನ್ನುತ್ತಾರೆ ಕಿಚ್ಚ ಸುದೀಪ್. ಹಾಗಾಗಿ ಅದನ್ನು ಇಂದಿಗೂ ನಾನು ಡಿಸ್ಪೊಸ್ ಮಾಡಿಲ್ಲ, ಹಾಗೆ ನನ್ನ ಬೆಡ್ ರೂಮಿನಲ್ಲಿಯೇ ಅದನ್ನು ಇಟ್ಟಿದ್ದೇನೆ. ಈಗಲೂ ಅದು ವರ್ಕಿಂಗ್ ಕಂಡಿಶನ್ ಅಲ್ಲಿಯೇ ಇದೆ ಎಂದಿದ್ದಾರೆ ಸುದೀಪ್. ಹಾಗೆ ಮೊದಲ ಕಾರು ಯಾವುದು ಕೊಂಡುಕೊಂಡದ್ದೂ ಎಂಬ ಪ್ರಶ್ನೆಗೆ ಅವರೇ ಹೇಳಿದ್ದು, ಸದಾಶಿವನಗರದಲ್ಲಿ ಒಂದು ಸೆಕೆಂಡ್ ಹ್ಯಾಂಡ್ ಕಾರು ಮಾರಾಟಕ್ಕಿದೆ ಎಂಬುದು ಅವರ ಗಮನಕ್ಕೆ ಬಂದಿತ್ತಂತೆ.   

ಅದರ ಮಾಲೀಕ ಫಾರಿನರ್, ನಂತರ ಅಲ್ಲಿಗೆ ಹೋದೆವು. 1.50 ಲಕ್ಷ ಇಟ್ಟುಕೊಂಡು ಅಲ್ಲಿಗೆ ಹೋದೆವು. ಜಾಕ್ ಮತ್ತು ನಾನು ಹೋಗಿದ್ದೆ,, ಅವರು ಆಗಲೇ ಕಾರಿನ ಬೆಲೆ ನಾಲ್ಕುವರೆ ಲಕ್ಷ ಎಂದು ಹೇಳಿದರು. ಜಾಕ್ ನಡಿ ಹೋಗೋಣ ಜೇಬಲ್ಲಿ ಕೇವಲ ಒಂದುವರೆ ಲಕ್ಷ ಇದೆ ಎಂದು ನನ್ನ ಮುಖ ನೋಡಿ ಹೇಳುತ್ತಿದ್ದ. ನಾನು, ಈರಪ್ಪ ಮಾತನಾಡೋಣ ಎಂದೆ ಸ್ವಲ್ಪ ಕಡಿಮೆ ಮಾಡಿಸಲು ತುಂಬಾ ಪ್ರಯತ್ನಪಟ್ಟೆ, ನಂತರ 50000 ಟೋಕನ್ ಅಡ್ವಾನ್ಸ್ ಕೊಟ್ಟು ಎರಡು ಮೂರು ತಿಂಗಳು ಫಾರಿನ್ ಕಾರ್ ಓನರ್ರನ್ನ ಗೋಳು ಹಾಕಿಕೊಂಡು, ಆ ಕಾರನ್ನ ಯಾರಿಗೂ ಮಾರದಂತೆ ಹೇಳಿ, ಹಾಗೋ ಹೀಗೋ ಮಾಡಿ ಸಾಲ ಮಾಡೋಣ ಎಂದು ಹೋದರೆ, ನೀನು ಸಿನಿಮಾ ಮಾಡಿದರೆ ನಿನ್ನ ಸಿನಿಮಾವನ್ನು ಯಾರು ನೋಡಲ್ಲ ದುಡ್ಡು ಹೇಗೆ ವಾಪಸ್ ಕೊಡುತ್ತೀಯಾ ಎಂದರು. ಆಮೇಲೆ ನಾನು ಹೇಗೆ ಮಾಡಿಕೊಡುತ್ತೇನೆ ಕೊಡಿ ಸಾರ್ ಎಂದು ಸಾಲ ತೆಗೆದುಕೊಂಡು ಮೊದಲ ಬಾರಿ ಸಫಾರಿ ಕಾರನ್ನು ಕೊಂಡುಕೊಂಡೇ ಎಂದರು ಕಿಚ್ಚ ಸುದೀಪ್. ಹೌದು ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ,, ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...