ಉಪ್ಪಿ ಪ್ಯಾನ್ ಇಂಡಿಯಾ ಕಬ್ಜ ಸಿನಿಮಾದ ಹೊಸ ಪೋಸ್ಟರ್ ಲಾಂಚ್..! ಕಿಚ್ಚನ ಲುಕ್ ಇದೀಗ ವೈರಲ್

Updated: Thursday, January 14, 2021, 12:38 [IST]

ಆರ್. ಚಂದ್ರು ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಮುಖ್ಯಪಾತ್ರದಲ್ಲಿ ನಟಿಸೋದು ಘೋಷಣೆಯಾಗಿದೆ. ಹಾಗೇನೇ ಈ ವಿಷಯ ಹೊರಬೀಳುತ್ತಿದ್ದ ಹಾಗೆ ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿಮಾನಿಗಳಿಗೆ ಹೆಚ್ಚು ಸಂತಸವಾಗಿದ್ದು, ಪ್ಯಾನ್ ಇಂಡಿಯಾ ಕಬ್ಜ ಚಿತ್ರದ ಮೇಲೆ ಹೈವೋಲ್ಟೇಜ್ ಥಿಂಕಿಂಗ್ ಆರಂಭವಾಗಿದೆ. ಹಾಗೇನೆ ಕಬ್ಜಾ ಸಿನಿಮಾ ಕೂಡ ಇಂಟರ್ನ್ಯಾಷನಲ್ ಲೆವೆಲ್ ನಲ್ಲಿ ಸೌಂಡ್ ಮಾಡುವುದು ಪಕ್ಕಾ ಆಗಿದ.    

Advertisement

ಕಬ್ಜ ಸಿನಿಮಾದ ನಿರ್ದೇಶಕ ಆರ್ ಚಂದ್ರು ಅವರ ಕೆಲಸ ಈ ಸಿನಿಮಾದಲ್ಲಿ ಹೇಗಿರಬಹುದೆಂದು, ಈಗಾಗಲೇ ನಿರೀಕ್ಷೆ ಹೆಚ್ಚುತ್ತಿದೆ. ಭಾರ್ಗವ ಭಕ್ಷಿ ಎನ್ನುವ ಬಹು ಮುಖ್ಯಪಾತ್ರದಲ್ಲಿ ಸ್ಯಾಂಡಲ್ವುಡ್ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಾಣಿಸಿಕೊಳ್ಳುತ್ತಿದ್ದು, ಸಿನಿಮಾ ಮಾತ್ರ ಯಶಸ್ವಿಯಾಗುವುದು ಗ್ಯಾರಂಟಿ. ಮತ್ತು ಕಿಚ್ಚನ ಹೊಸ ಲುಕ್ಕಿನ ಪೋಸ್ಟರ್ ನೋಡಿ ಅಭಿಮಾನಿಗಳು ಫುಲ್ ಫಿದಾ ಕೂಡ ಆಗಿದ್ದಾರೆ. ಹೌದು ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಕಬ್ಜ ಚಿತ್ರ ಈಗಾಗಲೇ ತನ್ನದೇ ಆದ ನೆಟ್ಟಿನಲ್ಲಿ ಫ್ಯಾನ್ಸ್ ಫಾಲೋಯಿಂಗ್ ಹೊಂದಿದ್ದು, ಇಡೀ ನಮ್ಮ ಭಾರತ ಚಿತ್ರರಂಗದಲ್ಲಿಯೇ ಒಂದು ಹೊಸ ದಾಖಲೆ ಬರೆಯುವ ಸಾಹಸಕ್ಕೆ ಚಿತ್ರತಂಡ ಕೈ ಹಾಕಿದೆ.    

Advertisement

ಕಬ್ಜಾ ಸಿನಿಮಾದ ಈ ರೀತಿಯ ಸುದ್ದಿಗಳನ್ನು ಕೇಳುತ್ತಿದ್ದರೆ ಕನ್ನಡ ಅಭಿಮಾನಿಗಳಿಗೆ ತುಂಬಾ ಖುಷಿಯಾಗುತ್ತದೆ.  ಕಾರಣ ನಮ್ಮ ಕನ್ನಡ ಭಾಷೆಯ ಚಿತ್ರ ಬೇರೆ ಲೆವೆಲ್ ನಲ್ಲಿ ಮಿಂಚಲಿದೆ ಎಂದು. ಹೌದು ಇಂದು ಬಿಡುಗಡೆ ಆಗಿರುವ ಹೊಸ ಪೋಸ್ಟರ್ ಒಮ್ಮೆ ನೋಡಿ. ಬಳಿಕ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ. ಹಾಗೆ ಇಡೀ ಕಬ್ಜ ಚಿತ್ರತಂಡಕ್ಕೆ ಶುಭವಾಗಲಿ ಎಂಬುದಾಗಿ  ಹಾರೈಸಿ. ಜೊತೆಗೆ ಕಬ್ಜ ತಂಡದ ಮೇಲೆ ನಿಮ್ಮ ನಿಮ್ಮ ಆಶೀರ್ವಾದ ಇರಲಿ ಧನ್ಯವಾದಗಳು...