Ranjani Raghavan : ಕಿರಣ್ ರಾಜ್ ಮತ್ತು ರಂಜನಿ ರಾಘವನ್ ಧರ್ಮಸ್ಥಳಕ್ಕೆ ಓಡೋಗಿ ಮದ್ವೆ ಅದರಾ ?

By Infoflick Correspondent

Updated:Sunday, June 12, 2022, 16:06[IST]

Ranjani Raghavan :   ಕಿರಣ್ ರಾಜ್ ಮತ್ತು ರಂಜನಿ ರಾಘವನ್  ಧರ್ಮಸ್ಥಳಕ್ಕೆ ಓಡೋಗಿ ಮದ್ವೆ ಅದರಾ ?

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಕಲಾವಿದರ ಮದುವೆ ವಿಚಾರಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಕನ್ನಡ ಕಿರುತೆರೆಯಲ್ಲಿ ಸೀರಿಯಲ್ ಗಳ ಮೂಲಕ ಪ್ರೇಕ್ಷಕ ಪ್ರಭು ಮನಸ್ಸುಗಳ ಗೆಲ್ಲುವ ನಿಟ್ಟಿನಲ್ಲಿ ಕನ್ನಡತಿ ಸೀರಿಯಲ್ ನಟಿ ರಂಜನಿ ರಾಘವನ್ ಹಾಗೂ ನಟ ಕಿರಣ್ ಗೆದ್ದಿದ್ದಾರೆ ಎಂದು ಹೇಳಬಹುದು. ಕನ್ನಡತಿ ಸೀರಿಯಲ್ ನ ಪಾತ್ರಧಾರಿಗಳಾದ ನಟ ಕಿರಣ್ ರಾಜ್ ಹರ್ಷ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಇನ್ನೊಂದು ಕಡೆ ನಟಿ ರಂಜನಿ ರಾಘವನ್ ಅವರು ಭುವಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಇತ್ತೀಚಿಗೆ ಸಂದರ್ಶನದಲ್ಲಿ ಈ ಜೋಡಿ ಕಾಣಿಸಿಕೊಂಡಿದ್ದು, ಕನ್ನಡತಿ ಸೀರಿಯಲ್ ಬಗ್ಗೆ ಮಾತನಾಡಿ ತಮ್ಮ ತಮ್ಮ ರಿಯಲ್ ಮದುವೆ ಜೋಡಿ ಯಾರು, ಯಾವಾಗ ಮದುವೆ ಎಂಬ ಮಾಹಿತಿಯನ್ನು ಸಹ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

ಕಥೆ, ಹಾಡುಗಾರಿಕೆ, ಕಾದಂಬರಿ, ನಟನೆ ಎಲ್ಲದರಲ್ಲಿಯೂ ಕೂಡ ನಟಿ ರಂಜನಿ ರಾಘವನ್ ಅವರು ಮುಂದಿದ್ದಾರೆ. ನಿಮ್ಮ ಮದುವೆ ಯಾವಾಗ ಎನ್ನುವ ಪ್ರಶ್ನೆಗೆ ನಟಿ ರಂಜನಿ ರಾಘವನ್ ಅವರು ಸದ್ಯಕ್ಕೆ ಕನ್ನಡತಿ ಸೀರಿಯಲ್ ನಲ್ಲಿ ಮದುವೆ ಆಗಲಿ, ಮುಂದೆ ನೋಡೋಣ ಎಂದು ಮಾಧ್ಯಮ ಎದುರು ನಗೆ ಬೀರಿದ್ದಾರೆ. ಅತ್ತ ಕಿರಣ್ ರಾಜ್ ಅವರಿಗೂ ಸಹ ಇದೇ ಪ್ರಶ್ನೆ ಮಾಡಲಾಗಿತ್ತು. ಆಗ ಅವರು ನಾವು ಆರಂಭದಲ್ಲಿ ಕನ್ನಡತಿ ಸೀರಿಯಲ್ ನಲ್ಲಿ ಅಭಿನಯ ಮಾಡುತ್ತಿರುವಾಗ ಕೆಲ ಯೂಟ್ಯೂಬ್ ಚಾನೆಲ್ ಗಳು ತಂಬ್ ಗಳನ್ನು ಬದಲಾಯಿಸಿ,  

ನಾನು ಮತ್ತು ರಂಜನಿ ಇಬ್ಬರು ಓಡಿಹೋಗಿ ಧರ್ಮಸ್ಥಳದಲ್ಲಿ ಮದುವೆಯಾಗಿದ್ದೇವೆ ಎಂಬ ಮಟ್ಟಕ್ಕೆ ಬರೆದುಕೊಂಡು ತಮಗೆ ಹೇಗೆ ಬೇಕೋ ಹಾಗೆ ಆರಂಭದಲ್ಲಿ ಹಾಕಿಕೊಳ್ಳುತ್ತಿದ್ದರು. ಅದು ತುಂಬಾ ಬೇಜಾರಾಗುತ್ತಿತ್ತು. 

ನಂತರ ನಾವು ಏನೇ ಮಾಡಿದರೂ ದಿನದ ಕೊನೆಯಲ್ಲಿ ಅವರಿಗೆ ಎಂಟರ್ಟೈನ್ಮೆಂಟ್ ಮಾಡಬೇಕು, ಹಾಗಾಗಿ ಅವರು ಇಷ್ಟಬಂದಂತೆ ಮಾಡಿಕೊಳ್ಳಲಿ ಎಂದು ಸುಮ್ಮನಾಗಿದ್ದೆವೆ. ನನ್ನ ಮದುವೆ ಸ್ವಲ್ಪ ತಡ, ಯಾರು ಸಿಕ್ಕಿಲ್ಲ ಸಿಕ್ಕರೆ ಅದು ಸಹ ಟೆಲಿಕಾಸ್ಟ್ ಆಗುತ್ತದೆ, ನಿಮಗೂ ಕೂಡ ಗೊತ್ತಾಗುತ್ತದೆ ಎಂದಿದ್ದಾರೆ ಕಿರಣ್ ಅವರು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಕನ್ನಡತಿ ಸೀರಿಯಲ್ ನಲ್ಲಿ ನಟ ಕಿರಣ್ ಅವರ ಪಾತ್ರ ನಟಿ ರಂಜನಿಗೆ ತುಂಬಾ ಇಷ್ಟವಂತೆ. ರಿಯಲ್ ಲೈಫ್ ನಲ್ಲಿ ಅದೇರೀತಿ ಗುಣಗಳ ಹುಡುಗನನ್ನ ಮದುವೆ ಆಗುತ್ತೇನೆ ಎನ್ನುವ ಸಿಗ್ನಲ್ ಕೊಟ್ಟಿದ್ದಾರೆ ನಟಿ ರಂಜನಿ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕು. ಮಾಹಿತಿ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು..