ಆಜಾಧಿ ಅಂದ್ರೆ ಚಪ್ಪಲಿ ಕಿತ್ತೊಗೋ ಹಂಗೆ ಹೊಡಿತಿನಿ..! ದಿ ಕಾಶ್ಮೀರ್ ಫೈಲ್ಸ್ ಚಿತ್ರ ನೋಡಿ ಗರಂ ಆದ ಕಿರಿಕ್ ಕೀರ್ತಿ..!

By Infoflick Correspondent

Updated:Wednesday, March 16, 2022, 13:07[IST]

ಆಜಾಧಿ ಅಂದ್ರೆ ಚಪ್ಪಲಿ ಕಿತ್ತೊಗೋ ಹಂಗೆ ಹೊಡಿತಿನಿ..! ದಿ ಕಾಶ್ಮೀರ್ ಫೈಲ್ಸ್ ಚಿತ್ರ ನೋಡಿ ಗರಂ ಆದ ಕಿರಿಕ್ ಕೀರ್ತಿ..!

ಈ ಚಿತ್ರವು 1990 ರಲ್ಲಿ ಕಾಶ್ಮೀರ ದಂಗೆಯ ಸಮಯದಲ್ಲಿ ಕಾಶ್ಮೀರಿ ಪಂಡಿತರು ಅನುಭವಿಸಿದ ಕ್ರೂರ ನೋವುಗಳ ನೈಜ ಕಥೆಯನ್ನು ಹೇಳುತ್ತದೆ. ದಿ ಕಾಶ್ಮೀರ್ ಫೈಲ್ಸ್ 2022 ರ ಭಾರತೀಯ ಹಿಂದಿ ಭಾಷೆಯ ನಾಟಕ ಚಲನಚಿತ್ರವಾಗಿದೆ. ವಿವೇಕ್ ಅಗ್ನಿಹೋತ್ರಿ ಬರೆದು ನಿರ್ದೇಶಿಸಿದ್ದಾರೆ. ಝೀ ಸ್ಟುಡಿಯೋಸ್ ನಿರ್ಮಿಸಿದ ಈ ಚಲನಚಿತ್ರವು ಕಾಶ್ಮೀರ ದಂಗೆಯ ಸಮಯದಲ್ಲಿ ಕಾಶ್ಮೀರಿ ಹಿಂದೂಗಳ ವಲಸೆಯನ್ನು ಆಧರಿಸಿದೆ.. ಈ ಚಲನಚಿತ್ರವು 26 ಜನವರಿ 2022ರ ಭಾರತದ ಗಣರಾಜ್ಯೋತ್ಸವದಂದು ವಿಶ್ವಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಬೇಕಿತ್ತು. 

ಆದರೆ ಓಮಿಕ್ರಾನ್ ರೂಪಾಂತರದ ಹರಡುವಿಕೆಯಿಂದಾಗಿ ಮುಂದೂಡಲ್ಪಟ್ಟಿತು, ಮತ್ತು ಅಂತಿಮವಾಗಿ 11 ಮಾರ್ಚ್ 2022 ರಂದು ಥಿಯೇಟರ್‌ನಲ್ಲಿ ಬಿಡುಗಡೆಯಾಯಿತು. ಹೌದು ಕಾಶ್ಮೀರಿ ಪಂಡಿತರ ನಿರ್ಗಮನದ ಸಮಸ್ಯೆಯನ್ನು ತಿಳಿಸಿದ್ದಕ್ಕಾಗಿ ವಿಮರ್ಶಕರು ಚಲನಚಿತ್ರವನ್ನು ಶ್ಲಾಘಿಸಿದರು. ಪಾತ್ರವರ್ಗದ ಅಭಿನಯವನ್ನು ವಿಶೇಷವಾಗಿ ಖೇರ್‌ರವರ ಅಭಿನಯವನ್ನು ಮನಮುಟ್ಟುವಂತೆ ವಿವರಿಸಲಾಗಿದೆ, ಆದ್ರೆ ಕೆಲವರು ಈ ಚಲನಚಿತ್ರವು ಐತಿಹಾಸಿಕ ಪರಿಷ್ಕರಣಾ ವಾದದ ಕೆಲಸ ಎಂದು ಆರೋಪಿಸಿದ್ದಾರೆ. ಇದು ಆಡಳಿತ ಪಕ್ಷದೊಂದಿಗೆ ಹೊಂದಾಣಿಕೆಯ ಪ್ರಚಾರ, ಮುಸ್ಲಿಮರ ವಿರುದ್ಧ ಪೂರ್ವಾಗ್ರಹವನ್ನು ಬೆಳೆಸುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.     

ಹೌದು ಇದೀಗ ಕಿರಿಕ್ ಕೀರ್ತಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಗ್ಗೆ ಮಾತನಾಡಿದ್ದು, ಸಿನಿಮಾ ನೋಡಿ ಬಂದು ಹೊರಗಡೆ ಮಾಧ್ಯಮದ ಎದುರು ಆಕ್ರೋಶ ಹೊರಹಾಕಿದ್ದಾರೆ. ಹೌದು ಇನ್ನುಮೇಲೆ ನನ್ನ ಎದುರು ಯಾರಾದರೂ ಆಜಾದಿ ಎಂದರೆ ಚಪ್ಪಲಿ ಕಿತ್ತು ಹೋಗು ಹಾಗೆ ಹೊಡಿತೀನಿ ಎಂದಿದ್ದಾರೆ. ಹಾಗೆ  ಸ್ವಾತಂತ್ರ್ಯ ಬರುವ ಮುಂಚೆ ಆಗಿದ್ದರೆ ಏನೋ ಒಂದು ಅಧಿಕಾರ ಇಲ್ಲದ ವೇಳೆ ಎನ್ನಬಹುದು ಆದ್ರೆ ಸ್ವಾತಂತ್ರ್ಯ ಬಂದ ಮೇಲೆ ಇದೆಲ್ಲಾ ಆಗಿದೆ ಎಂದರೆ ನಿಜ ನಮಗೆ ನಮ್ಮ ಮೇಲೆ ಅಸಹ್ಯ ಆಗುತ್ತದೆ. ಇತಿಹಾಸವನ್ನು ತಿರುಚಿ ಮರುಚಿ ಏನೇನೆಲ್ಲಾ ಹೇಳಿದ್ದಾರೆ ಅದೆಲ್ಲ ಶುದ್ಧ ಸುಳ್ಳು, ಎಲ್ಲಾರೂ ಈ ಸಿನಿಮಾವನ್ನು ನೀವು ನಿಮ್ಮ ಕುಟುಂಬದ ಜೊತೆ ಬಂದು ನೋಡಿ. ಇತಿಹಾಸ ಗೊತ್ತಾಗುತ್ತದೆ ಕೊನೆಯಲ್ಲಿ ಕ್ಲೈಮ್ಯಾಕ್ಸ್ ನೋಡುವಾಗ ಆರರಿಂದ 60 ವರ್ಷದ ಮುದುಕರನ್ನು ನೋಡದೆ ಜೀವ ತೆಗೆಯುವ ದೃಶ್ಯ ತುಂಬಾ ನೋವಾಗುತ್ತದೆ. ( video credit : samvada )