Kishore Pattikonda : ಬ್ರೇಕಿಂಗ್ ನ್ಯೂಸ್ : ಜೇಮ್ಸ್ ಸಿನಿಮಾ ನಿರ್ಮಾಪಕ ಆಸ್ಪತ್ರೆಗೆ ದಾಖಲು..! ಆತಂಕದಲ್ಲಿ ಕುಟುಂಬ

By Infoflick Correspondent

Updated:Tuesday, July 5, 2022, 13:19[IST]

Kishore Pattikonda : ಬ್ರೇಕಿಂಗ್ ನ್ಯೂಸ್ : ಜೇಮ್ಸ್ ಸಿನಿಮಾ ನಿರ್ಮಾಪಕ ಆಸ್ಪತ್ರೆಗೆ ದಾಖಲು..! ಆತಂಕದಲ್ಲಿ ಕುಟುಂಬ

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಕಳೆದ ಎರಡು ತಿಂಗಳ ಹಿಂದೆ ಅವರ ಹುಟ್ಟು ಹಬ್ಬದ ದಿನ ಮಾರ್ಚ್ 17ನೇ ತಾರೀಕು ಭರ್ಜರಿಯಾಗಿ ತೆರೆಯ ಮೇಲೆ ಬಂದಿತ್ತು.. ಹಾಗೆ ದಾಖಲೆ ಮಟ್ಟದಲ್ಲಿ ಕಲೆಕ್ಷನ್ ಕೂಡ ಮಾಡಿದ್ದು ಚಿತ್ರತಂಡ ಖುಷಿಯನ್ನು ಹೆಚ್ಚು ಹಂಚಿಕೊಳ್ಳಲಿಲ್ಲ ಕಾರಣ ಅಪ್ಪು ಅವರ  ಅಗಲಿಕೆ ಎನ್ನಲಾಗಿತ್ತು. ಹೌದು ಅಪ್ಪು ಅವರಿಲ್ಲದೆ ಇಷ್ಟು ಸಾಧನೆ ಮಾಡಿದ್ದು ಚಿತ್ರ ತಂಡಕ್ಕೆ ಮತ್ತು ನಿರ್ಮಾಪಕ ಕಿಶೋರ್ ಪಟ್ಟಿಕೊಂಡವರಿಗೆ ನೋವು ತಂದ ವಿಷಯ. ನಿರ್ಮಾಪಕ ಕಿಶೋರ್ ಅವರು ತುಂಬಾ ಸರಳ ವ್ಯಕ್ತಿತ್ವ ಹೊಂದಿದ್ದವರು. ಯಾರ ಜೊತೆಯೂ ಕೂಡ ಹೆಚ್ಚು ಮಾತನಾಡುತ್ತಿರಲಿಲ್ಲ. ತುಂಬಾನೆ ಸರಳ ವ್ಯಕ್ತಿ ಎನಿಸಿಕೊಂಡವರು ಕಿಶೋರ್. 

ಹೌದು ಇದೀಗ ತಿಳಿದು ಬಂದಿರುವ ಮಾಹಿತಿ ಪ್ರಕಾರ ಜೇಮ್ಸ್ ಸಿನಿಮಾದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರು ಇದ್ದಕ್ಕಿದ್ದಂತೆ ಆಸ್ಪತ್ರೆಗೆ ದಾಖಲಾಗಿದ್ದಾರಂತೆ. ಹೈ ಬಿಪಿಯಿಂದ ಕಿಶೋರ್ ಅವರಿಗೆ ಸ್ಟ್ರೋಕ್ ಆಗಿದೆ ಎಂದು ತಿಳಿದುಬಂದಿದೆ. ನಿರ್ಮಾಪಕ ಕಿಶೋರ್ ಅವರನ್ನು ಈಗ ಶೇಷಾದ್ರಿ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಾಗೆ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನಲಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಜೊತೆಗೆ ಕಿಶೋರ್ ಅವರ ಆರೋಗ್ಯದ ಬಗ್ಗೆ ಮಾಹಿತಿ ತಿಳಿದು ಬಂದ ಪ್ರಕಾರ ಕೋಮಾದಲ್ಲಿದ್ದಾರೆ ಎಂದು ಮೊದಲು ಕೇಳಿ ಬಂದಿತ್ತು. ಆದ್ರೆ ಈಗ ವೈದ್ಯರು ಔಟ್ ಆಫ್ ಡೇಂಜರ್ ಎಂದು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು ಕಿಶೋರ್ ಅವರನ್ನು ಆಸ್ಪತ್ರೆಗೆ ದಾಖಲೆಸುತ್ತಿದ್ದಂತೆ ಅವರ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದು ಇದೀಗ ಆಗಲೇ ಸುಧಾರಿಸಿಕೊಳ್ಳುತ್ತಿರುವ ನಿರ್ಮಾಪಕ ಕಿಶೋರ್ ಅವರು ಆದಷ್ಟು ಬೇಗನೆ ಗುಣಮುಖರಾಗಲೆಂದು ನೀವು ಸಹ ದೇವರಲ್ಲಿ ನೀವು ಬೇಡಿಕೊಳ್ಳಿ. ಶೇಷಾದ್ರಿ ಅಪೋಲೋ ಆಸ್ಪತ್ರೆಯ ವೈದ್ಯರು ಹೇಳುವ ಹಾಗೆ ಕಿಶೋರ್ ಅವರಿಗೆ ಏನು ಆಗಿಲ್ಲ ಸುಧಾರಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ಹೇಳಿ ವಿಷಯ ಮುಟ್ಟಿಸಿದ್ದಾರೆ..