ಕೆಲ್ ರಾಹುಲ್ ಆಸ್ಪತ್ರೆಗೆ ದಾಖಲು: ಶಸ್ತ್ರ ಚಿಕಿತ್ಸೆಗೆ ಒಳೊಪಡಿಸಬೇಕು ಎಂದ ವೈದ್ಯರು..!

Updated: Monday, May 3, 2021, 14:33 [IST]

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪಂಜಾಬ್ ಕಿಂಗ್ಸ್ ನಾಯಕನಾಗಿರುವ ಕೆಎಲ್ ರಾಹುಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಆಪರೇಷನ್ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ. 

ಮೇ 1ರಂದು ಕೆಎಲ್ ರಾಹುಲ್ಗೆ ಕಿಬ್ಬೊಟ್ಟೆಯಲ್ಲಿ ತೀರಾ ನೋವು ಕಾಣಿಸಿಕೊಂಡಿತ್ತು. ಮೊದಲು ಚಿಕಿತ್ಸೆ ನೀಡಿದಾಗ ಸ್ಪಂದಿಸಲಿಲ್ಲ. ಆಗ ಬಯೋ ಬಬಲ್ ಒಳಗಿದ್ದ ತುರ್ತು ಚಿಕಿತ್ಸಾ ವಿಭಾಗಕ್ಕೆ ಅವರನ್ನು ವೈದ್ಯರು ಕರೆದೊಯ್ದು ಪರಿಶೀಲಿಸಿದರು. ಆಗ ರಾಹುಲ್ ಅವರಿಗೆ ಅಪೆಂಡಿಸಿಟಿಸ್ ಇರುವುದು ಪತ್ತೆಯಾಗಿದೆ. 
ರಾಹುಲ್ ಅವರು ಆಸ್ಪತ್ರೆಗೆ ದಾಖಲಾಗಿರುವ ಸಂಗತಿಯನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ನಿನ್ನ ಹೇಳಿದೆ. ರಾಹುಲ್ ಅವರನ್ನು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಂಜಾಬ್ ಟ್ವೀಟ್ ಮೂಲಕ ತಿಳಿಸಿದೆ. 

ಇನ್ನು 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 30ನೇ ಪಂದ್ಯ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದ್ದು ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಡಲಿವೆ. ಟೂರ್ನಿಯಲ್ಲಿ ಇದುವರೆಗೂ 7 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಗೆದ್ದು 2 ಪಂದ್ಯಗಳನ್ನು ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು, 7 ಪಂದ್ಯಗಳನ್ನಾಡಿ 2 ಪಂದ್ಯಗಳಲ್ಲಿ ಜಯಗಳಿಸಿ 5 ಪಂದ್ಯಗಳಲ್ಲಿ ಸೋಲುಂಡಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಎದುರಿಸಲಿದೆ.