ರಾಜಾರಾಣಿ 2 ಹೊಸ ನಿರೂಪಕಿ ಬಗ್ಗೆ  ಇಲ್ಲಿದೆ ಕುತೂಹಲಕಾರಿ ವಿಷಯ

By Infoflick Correspondent

Updated:Monday, June 13, 2022, 22:24[IST]

ರಾಜಾರಾಣಿ 2 ಹೊಸ ನಿರೂಪಕಿ ಬಗ್ಗೆ  ಇಲ್ಲಿದೆ ಕುತೂಹಲಕಾರಿ ವಿಷಯ

ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ರಾಜರಾಣಿ ಸೀಸನ್-2 ಮತ್ತೆ ತನ್ನ ಮುನ್ನೋಟ ಆರಂಭಿಸಿದೆ. ಎರಡನೇ ಅಧ್ಯಾಯ ಶುರು ಮಾಡಿಕೊಂಡಿದೆ. ಇತ್ತೀಚೆಗಷ್ಟೇ ಗ್ರಾಂಡ್ ಓಪನಿಂಗ್ ಕೂಡ ನಡೆದಿದ್ದು, ರಿಯಾಲಿಟಿ ಶೋನಲ್ಲಿ ಕನ್ನಡ ಕಿರುತೆರೆಯ ಜನಪ್ರಿಯ ಕೆಲವು ರಿಯಲ್ ಜೋಡಿಗಳನ್ನು ಕರೆಸಿ ಕಾರ್ಯಕ್ರಮ ಮಾಡುತ್ತಿದ್ದಾರೆ ಎನ್ನಲಾಗಿದೆ. ಹೌದು ರಾಜಾರಾಣಿ ಮೊದಲ ಸೀಸನ್ನಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗಿ ಬಂದಿದ್ದ ಅಕ್ಕ ಸೀರಿಯಲ್ ನ ಖ್ಯಾತ ನಟಿ ಅನುಪಮಾ ಗೌಡ ಅವರು ಭರ್ಜರಿ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದರು. ಹಾಗೇನೇ ಯಶಸ್ವಿ ಸೀಸನ್ ಕೂಡ ಆಗಿ ರಾಜಾರಾಣಿ ಸೀಸನ್ ಒಂದು ಹೊರಹೊಮ್ಮಿತ್ತು. ಹೌದು ಈ ಬಾರಿ ಮತ್ತೆ ಎರಡನೇ ಸೀಸನ್ ಆರಂಭ ಮಾಡಿದ್ದು, ರಾಜ ರಾಣಿ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ನಟಿ ತಾರಾ ಹಾಗೂ ಸೃಜನ್ ಅವರೇ ಮುಂದುವರೆಯುತ್ತಿದ್ದಾರೆ. ಆದರೆ ನಿರೂಪಕಿ ಸ್ಥಾನದಲ್ಲಿ ಬದಲಾವಣೆ ಆಗಿದೆ. ನಟಿ ಅನುಪಮ ಗೌಡ ಈ ಬಾರಿ ಕಾಣಿಸಿಕೊಂಡಿಲ್ಲ.

 

ಕಲರ್ಸ್​ ಕನ್ನಡ' ವಾಹಿನಿಯಲ್ಲಿ 'ರಾಜಾ ರಾಣಿ 2' ಕಾರ್ಯಕ್ರಮ ಆರಂಭ ಆಗಿದೆ. ಈ ಶೋಗೆ ನಟಿ ಜಾನ್ವಿ ರಾಯಲ ಅವರು ನಿರೂಪಕಿಯಾಗಿದ್ದಾರೆ. ನಟಿ ಜಾನ್ವಿ ರಾಯಲ 'ರಾಜಾ ರಾಣಿ 2' ಶೋ ನಡೆಸಿಕೊಡುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಜಾನ್ವಿ ರಾಯಲ ಯಾರು ? ಇಲ್ಲಿದೆ ಅವರ ಕುರಿತಾದ ಮಾಹಿತಿ ಡಾ.ಜಾನ್ವಿ ರಾಯಲ ವೃತ್ತಿಯಲ್ಲಿ ಡೆಂಟಿಸ್ಟ್. ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಡಾ.ಜಾನ್ವಿ ರಾಯಲ ಉದ್ಯಮಿ ಕೂಡ ಹೌದು. ಅಂದ್ಹಾಗೆ, 2018ರ ಮಿಸ್ ಕರ್ನಾಟಕ ಕಿರೀಟ ತೊಟ್ಟವರು ಡಾ.ಜಾನ್ವಿ ರಾಯಲ.    

ದಂತ ವೈದ್ಯೆ ಆಗಿರುವ ಜಾನ್ವಿ ರಾಯಲ ಅವರಿಗೆ ನಟನೆ ಮೇಲೆ ಹೆಚ್ಚು ಆಸಕ್ತಿ. ಅವರು ನಟಿಸಿದ 'ಫೋರ್​ ವಾಲ್ಸ್​' ಸಿನಿಮಾ ಈ ವರ್ಷ ತೆರೆಕಂಡಿತು. ಅದರಲ್ಲಿ ಖ್ಯಾತ ನಟ ಅಚ್ಯುತ್​ ಕುಮಾರ್​ ಜೊತೆ ಮಗಳ ಪಾತ್ರದಲ್ಲಿ ಅಭಿನಯಿಸುವ ಮೂಲಕ ಅವರು ಮೆಚ್ಚುಗೆ ಪಡೆದುಕೊಂಡರು. 

ಕಿರುತೆರೆಯ ಹಿಟ್ ಶೋ ‘ರಾಜಾ ರಾಣಿ - 2’ ಕಾರ್ಯಕ್ರಮದ ನಿರೂಪಣೆ ಮಾಡುತ್ತಿರುವುದು ನನಗೆ ತುಂಬಾ ಸಂತಸ ತಂದಿದೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಬೆಂಬಲ ನನಗಿರಲಿ’’ ಎಂದು ಡಾ.ಜಾನ್ವಿ ರಾಯಲ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.  ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ, ಹಾಗೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.... ( video credit ; kannada updates )