Naresh : ನರೇಶ್ ಮೊದಲೆರಡು ಪತ್ನಿಯರು ಯಾರು ಅವರ ಹಿನ್ನಲೆ ಏನು ? ಇಲ್ಲಿದೆ ಆಶ್ಚರ್ಯಕರ ಮಾಹಿತಿ

By Infoflick Correspondent

Updated:Saturday, July 9, 2022, 06:37[IST]

Naresh :  ನರೇಶ್ ಮೊದಲೆರಡು ಪತ್ನಿಯರು ಯಾರು ಅವರ ಹಿನ್ನಲೆ ಏನು ? ಇಲ್ಲಿದೆ ಆಶ್ಚರ್ಯಕರ ಮಾಹಿತಿ

ಹಿರಿಯ ನಟ ನರೇಶ್ ಅವರ ಮದುವೆ ಜನರಲ್ಲಿ ಹಾಟ್ ಟಾಪಿಕ್ ಆಗಿದೆ. ಅವರು ಈಗಾಗಲೇ ಮೂರು ಮದುವೆಯಾಗಿದ್ದಾರೆ.ನರೇಶ್ ಅವರ ಮೂವರು ಪತ್ನಿಯರು ಯಾರು? ಈಗ ಅವರಿಗೆ ಎಷ್ಟು ಮಕ್ಕಳಿದ್ದಾರೆ ಎಂಬುದು ಇಲ್ಲಿದೆ.

ನರೇಶ್ ಈ ಹಿಂದೆ ಹಿರಿಯ ಸಿನಿಮಾಟೋಗ್ರಾಫರ್ ಶ್ರೀನು ಅವರ ಮಗಳನ್ನು ಮದುವೆಯಾಗಿದ್ದರು. ಚಿತ್ರರಂಗದಲ್ಲಿ ನಾಯಕನಾಗಿ ಪರಿಚಯವಾದ ಕೂಡಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರಿಗೂ ಒಬ್ಬ ಮಗನಿದ್ದಾನೆ. ಅವರ ಹೆಸರು ನವೀನ್ ವಿಜಯ್ ಕೃಷ್ಣ. ಮಗ ಹುಟ್ಟಿದ ಸಮಯದಲ್ಲೇ ನರೇಶ್ ಮೊದಲ ಪತ್ನಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ಕಾರಣಕ್ಕೆ ನರೇಶ್ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದರು ಎಂದು ವರದಿಯಾಗಿದೆ. ನವೀನ್ ವಿಜಯ್ ಕೃಷ್ಣ ಅವರು  ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಎರಡು ಮತ್ತು ಮೂರು ಚಿತ್ರಗಳಲ್ಲಿ ನಟಿಸಿದ್ದಾರೆ. 

ಮೊದಲನೇ ಪತ್ನಿಯಿಂದ ವಿಚ್ಛೇದನ ಪಡೆದ ಬಳಿಕ ನರೇಶ್ ಅವರು ಪ್ರಸಿದ್ಧ ಬರಹಗಾರ ದೇವುಲಪಲ್ಲಿ ಕೃಷ್ಣ ಶಾಸ್ತ್ರಿ ಅವರ ಮೊಮ್ಮಗಳು ರೇಖಾ ಸುಪ್ರಿಯಾ ಅವರನ್ನು ವಿವಾಹವಾದರು. ಇಬ್ಬರಿಗೂ ಗಂಡು ಮಗು ಜನಿಸಿದ ನಂತರ ನರೇಶ್ ಆಕೆಯಿಂದ ದೂರವಾಗಿದ್ದಾರೆ. ಗುರು ಹಿರಿಯರು ಒಪ್ಪಿಗೆ ಮೇರೆಗೆ 2ನೇ ಮದುವೆ ಆಗಿತ್ತು. ಈ ಮದುವೆ ಕೂಡ ಹೆಚ್ಚು ಉಳಿಯಲಿಲ್ಲ. ಇಬ್ಬರೂ ಒಟ್ಟಿಗೆ ಇರಲು ಸಾಧ್ಯವಾಗಿರಲಿಲ್ಲ. ಈಗ ಇಬ್ಬರೂ ಬೇರೆ ಬೇರೆಯಾಗಿದ್ದರೂ, ಇನ್ನೂ ಎನ್‌ಜಿಒಗಾಗಿ ಒಟ್ಟಿಗೆ ಕೆಲಸ ಮಾಡುತ್ತಾರೆ.

ನರೇಶ್ ತಾಯಿ ವಿಜಯ ನಿರ್ಮಲಾ ಅವರೊಂದಿಗೆ ಕರ್ನಾಟಕ ಮೂಲದ ರಮ್ಯಾ ರಘುಪತಿ ಸಹಾಯರಾಗಿ ಸೇರಿಕೊಂಡಿದ್ದರು. ಈ ವೇಳೆ ನರೇಶ್‌ ಹಾಗೂ ರಮ್ಯಾ ರಘುಪತಿಯವರ ನಡುವೆ ಪ್ರೀತಿ ಹುಟ್ಟಿತ್ತು ಎನ್ನಲಾಗಿದೆ. ರಮ್ಯಾ ರಘಪತಿ ಅವರು ಮಾಜಿ ಕಾಂಗ್ರೆಸ್ ಸಚಿವ ರಘುವೀರಾ ರೆಡ್ಡಿ ಅವರ ಸಹೋದರನ ಮಗಳು. ನರೇಶ್‌ಗೆ ಆಗ ಸುಮಾರು 50 ವರ್ಷ. ರಮ್ಯಾಗೆ 30 ವರ್ಷದ ಆಸು-ಪಾಸಿನಲ್ಲಿದ್ದರು. ರಮ್ಯಾ ಮನೆಯಲ್ಲಿ ವಿರೋಧವಿದ್ದರೂ, ನರೇಶ್ ಅವರನ್ನು ವಿವಾಹವಾದರು ಎನ್ನಲಾಗಿತ್ತು. ಇವರಿಗೂ ಒಬ್ಬ ಮಗನಿದ್ದಾನೆ.