ನಟಿ ರಜಿನಿ ಅವರು ಜೀವನದಲ್ಲಿ ಪಟ್ಟ ಕಷ್ಟಗಳೇನು ಗೊತ್ತಾ..?

By Infoflick Correspondent

Updated:Thursday, June 16, 2022, 10:10[IST]

ನಟಿ ರಜಿನಿ ಅವರು ಜೀವನದಲ್ಲಿ ಪಟ್ಟ ಕಷ್ಟಗಳೇನು ಗೊತ್ತಾ..?

ನಟಿ ರಜಿನಿ ಅವರು ಅಮೃತವರ್ಷಿಣಿ ಧಾರಾವಾಹಿ ಮೂಲಕವೇ ಫೇಮಸ್ ಆದವರು. ಇಂದಿಗೂ ಇವರನ್ನು ಅಮೃತ ಎಂದೇ ಜನ ಗುರುತಿಸುತ್ತಾರೆ. ಅಷ್ಟರಮಟ್ಟಿಗೆ ಆ ಧಾರಾವಾಹಿಯಲ್ಲಿ ರಜಿನಿ ನಟಿಸಿದ್ದರು. ಇನ್ನು ಇದಾದ ಬಳಿಕ ಹಲವು ಧಾರಾವಾಹಿಗಳಲ್ಲಿ ನಟಿಸಿದ ರಜನಿ ಅವರು, ಮೊದಲು ಆರ್ಕೆಸ್ಟ್ರಾಗಳಲ್ಲಿ ಹಾಡು ಹೇಳುತ್ತಿದ್ದರಂತೆ. ರಾತ್ರಿ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಹೋಗಲು ಕಷ್ಟಪಡುತ್ತಿದ್ದರಂತೆ. ಕೈಯಲ್ಲಿ ಹಣವಿಲ್ಲದೇ, ಮನೆಗೆ ನಡೆದುಕೊಂಡೇ ಹೋಗುತ್ತಿದ್ದರಂತೆ. ಅದು ಹೇಗೋ ಒಂದು ದಿನ ಸೀರಿಯಲ್ ಗೆ ಾಯ್ಕೆಯಾಗಿ ಬಣ್ಣದ ಲೋಕಕ್ಕೆ ಬಂದರು.


ಇನ್ನು ರಜನಿ ಅವರಿಗೆ ತಮ್ಮ ಸಂಬಂಧಿಕರಲ್ಲಿ ಅಷ್ಟು ಮರಿಯಾದೆ ಇರಲಿಲ್ಲವಂತೆ. ಇವರಾ ಎನ್ನುತ್ತಿದ್ದರಂತೆ. ಅದೇ ಈಗ ರಜನಿ ಬಂದಳು ಎಂದು ನಗು ನಗುತಾ ಮಾತನಾಡಿಸುತ್ತಾರಂತೆ. ಕೇವಲ ನಟನೆ ಮಾಡಿದ್ದಲ್ಲದೇ, ಅಮೃತಾ ಅವರು ಹಲವು ಕಾರ್ಯಕ್ರಮಗಳನ್ನು ನಿರೂಪಣೆ ಕೂಡ ಮಾಡಿದ್ದಾರೆ. ನಂತರ ಅವಕಾಶಗಳು ಸಿಗದೇ ವಂಚಿತರಾಗಿದ್ದ ರಜಿನಿ ಅವರು, ಸಿರಿಕನ್ನಡ ಚಾನೆಲ್ ನಲ್ಲಿ ಕಾರ್ಯಕ್ರಮ ಒಂದನ್ನು ನಡೆಸಿಕೊಡುತ್ತಿದ್ದರು. ಇದೀಗ ಮತ್ತೆ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಏಜೆ ಮೊದಲ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


ಅಷ್ಟೇ ಅಲ್ಲದೇ, ಸಿನಿಮಾಗಳಲ್ಲೂ ಮಿಂಚುತ್ತಿರುವ ರಜಿನಿ ಅವರು, ಅಸುರನ ಕೈಯಲ್ಲಿ ಪಾರಿಜಾತ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಶುಭಪೂಂಜಾ ನಟನೆಯ ಅಂಬುಜ ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ಜೊತೆಗೆ ಡವ್ ಮಂಜ ಎಂಬ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಇನ್ನೂ ಸಾಲು ಸಾಲು ಸಿನಿಮಾಗಳಲ್ಲಿ ರಜಿನಿ ಅವರು ನಟಿಸಿದ್ದಾರೆ. ಇದೀಗ ಸ್ಟಾರ್ ಸುವರ್ಣದ ಧಾರಾವಾಹಿ ಒಂದಕ್ಕೆ ಹಳ್ಳಿ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇನ್ನೂ ಧಾರಾವಾಹಿ ಶುರುವಾಗಿಲ್ಲ. ಒಂದು ಕಾಲದಲ್ಲಿ ತಿರಸ್ಕೃತಗೊಂಡಿದ್ದ ರಜಿನಿ ಅವರಿಗೆ ಈಗ ಎಲ್ಲೆಡೆ ಮನ್ನಣೆ ಸಿಗುತ್ತಿದೆ.