ಪತಿ-ಮಾವನ ವಿರುದ್ಧ ದೂರು ನೀಡಿ ಸುದ್ದಿಯಾಗಿರುವ ಚೈತ್ರಾ ಹಳ್ಳಿಕೇರಿ ಬಗ್ಗೆ ನಿಮಗೆಷ್ಟು ಗೊತ್ತು.?

By Infoflick Correspondent

Updated:Friday, May 27, 2022, 14:00[IST]

ಪತಿ-ಮಾವನ ವಿರುದ್ಧ ದೂರು ನೀಡಿ ಸುದ್ದಿಯಾಗಿರುವ ಚೈತ್ರಾ ಹಳ್ಳಿಕೇರಿ ಬಗ್ಗೆ ನಿಮಗೆಷ್ಟು ಗೊತ್ತು.?


ಚೈತ್ರಾ ಹಳ್ಳಿಕೇರಿ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾಗಳಲ್ಲಿ ನಟಿಸಿದ್ದಲ್ಲದೇ, ಧಾರಾವಾಹಿಯನ್ನು ನಿರ್ಮಾಣ ಮಾಡಿದ್ದಾರೆ. ಹೀಗಿದ್ದರೂ ಹಲವರಿಗೆ ಚೈತ್ರಾ ಹಳ್ಳಿಕೇರಿ ಯಾರು ಎಂಬುದು ಗೊತ್ತಿಲ್ಲ. ಯಾಕೆಂದರೆ, ಚೈತ್ರಾ ಅವರು ಸಿನಿಮಾ ರಂಗದಿಂದ ದೂರಾಗಿ ಹಲವು ಕಾಲವಾಗಿದೆ. ಹಾಗಾಗಿ ತುಂಬಾ ಜನರಿಗೆ ಚೈತ್ರಾ ಹಳ್ಳಿಕೇರಿ ಬಗ್ಗೆ ಗೊತ್ತಿಲ್ಲ. ಆದರೆ ಕಳೆದೆರಡು ವರ್ಷಗಳ ಹಿಂದೆಯೂ ಹೀಗೆ ಮಾಧ್ಯಮದ ಮುಂದೆ ಬಂದು ತಮ್ಮ ಪತಿಯ ವಿರುದ್ಧ ದೂರು ನೀಡಿದ್ದರು. ಬಳಿಕ ಒಂದಾಗಿ ಬಾಳುವುದಾಗಿ ಹೇಳಿದ್ದರು. 

 

ಆದರೆ ಇದೀಗ ಮತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಚೈತ್ರಾ ಹಳ್ಳಿಕೇರಿ ಅವರು ತಮ್ಮ ಪತಿ ಹಾಗೂ ಮಾವನ ಮೇಲೆ ದೂರು ನೀಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ, ತಮಗಾದ ಅನ್ಯಾಯದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಪತಿ ಹಾಗೂ ಮಾವ ಸೇರಿಕೊಂಡು ಸುಮಾರು 20 ಲಕ್ಷ ಮೌಲ್ಯದ ಚಿನ್ನವನ್ನು ಚೈತ್ರಾ ಅವರಿಗೆ ತಿಳಿಯದಂತೆ ಅಡವಿಟ್ಟು, ಹಣ ಪಡೆದಿದ್ದಾರಂತೆ. ಇದರ ಜೊತೆಗೆ ಚೈತ್ರಾ ಅವರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಯನ್ನೂ ತೆರೆದಿದ್ದು, ಅದರಿಂದ ಲೋನ್ ಪಡೆದು ಮೋಸ ಮಾಡಿದ್ದಾರಂತೆ. 

ನನಗೆ ದೈಹಿಕವಾಗಿ ಹಿಂಸೆ ಕೊಡುವುದರ ಜೊತೆಗೆ ಹೀಗೆ ಮೋಸ ಕೂಡ ಮಾಡುತ್ತಿದ್ದಾರೆ. ಇನ್ನು ನಾನು ಇವರ ಜೊತೆಗೆ ಬಾಳುವುದಕ್ಕಾಗುವುದಿಲ್ಲ. ನನಗೆ ಇಬ್ಬರು ಮಕ್ಕಳಿದ್ದು, ನನ್ನ ಸಂಸಾರಕ್ಕಾಗಿ ನಾನು ಏನೆಲ್ಲಾ ಮಾಡಿದ್ದೇನೆ ಆದರೂ, ಇವರು ನನಗೆ ಹಿಂಸೆ ಕೊಡುತ್ತಿದ್ದಾರೆ. ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಮದುವೆಯಾಗಿ ನಾನು ಮೋಸ ಹೋಗಿದ್ದೇನೆ. ಇನ್ನು ನಾನು ನನ್ನ ಬದುಕನ್ನು ನೋಡಿಕೊಳ್ಳಲೇಬೇಕು. ಚಿತ್ರರಂಗ ಬಯಸಿದರೆ, ನಾನು ಮತ್ತೆ ನಟಿಸುತ್ತೇನೆ ಎಂದು ಚೈತ್ರಾ ಹಳ್ಳಿಕೇರಿ ಅವರು ಹೇಳಿದ್ದಾರೆ. 

ಚೈತ್ರಾ ಹಳ್ಳೀಕೇರಿ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ವೆಲ್ ಡನ್ ಚಿತ್ರದ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ಚೈತ್ರಾ ಹಳ್ಳಿಕೇರಿ, ನಂತರದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಗೌಡ್ರು,  ಖುಷಿ, ಪಾರ್ಥ, ಶಿಷ್ಯ, ಗುನ್ನ, ಶ್ರೀ ದಾನಮ್ಮ ದೇವಿ ಸೇರಿದಂತೆ ಹಲವು ಚಿತ್ರಗಳಿಗೆ ಬಣ್ಣ ಹಚ್ಚಿದರು. ನಂತರ ಕಿನ್ನರಿ ಧಾರಾವಾಹಿಯನ್ನು ನಿರ್ಮಾಣ ಕೂಡ ಮಾಡಿದರು. ಇದೆಲ್ಲದರ ಜೊತೆಗೆ ಅಡುಗೆ ಕಾರ್ಯಕ್ರಮವನ್ನು ಸಹ ಮಾಡಿದ್ದರು. ಇದೀಗ ಮತ್ತೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮನಸ್ಸು ಮಾಡಿದ್ದಾರೆ.