Prashanth Neel : ಯಾರಿಗೂ ತಿಳಿಯದ KGF ನಿರ್ದೇಶಕ ಪ್ರಶಾಂತ್ ನೀಲ್ ನಡೆದುಬಂದ ಜೀವನದ ಹಾದಿ ಹೇಗಿತ್ತು ಗೊತ್ತಾ.?

By Infoflick Correspondent

Updated:Tuesday, June 7, 2022, 08:56[IST]

Prashanth Neel : ಯಾರಿಗೂ ತಿಳಿಯದ KGF ನಿರ್ದೇಶಕ ಪ್ರಶಾಂತ್ ನೀಲ್ ನಡೆದುಬಂದ ಜೀವನದ ಹಾದಿ ಹೇಗಿತ್ತು ಗೊತ್ತಾ.?

ಸ್ಯಾಂಡಲ್ ವುಡ್ ನ ಅತಿ ಹೆಚ್ಚು ಸುದ್ದಿ ಮಾಡಿದ ಚಿತ್ರ ಕೆಜಿಎಫ್ 2. ಈ ಚಿತ್ರ ಯಾರು ಊಹೆ ಮಾಡದ ಹಾಗೆ, ಇಡೀ ಭಾರತ ಚಿತ್ರರಂಗ ಮಾತ್ರವಲ್ಲದೆ, ಇಡೀ ವಿಶ್ವವೇ ತಿರುಗಿ ನೋಡುವಂತಾಗಿದೆ. ಹಾಲಿವುಡ್ ಚಿತ್ರರಂಗದ ಜನರು ಕೂಡ ತಮ್ಮ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಕೆಜಿಎಫ್ 2 ಚಿತ್ರ ಮೂಡಿ ಬಂದಿದೆ. ಪ್ರಶಾಂತ್ ನೀಲ್ ಅವರ ನಿರ್ದೇಶನದ ಕೆಜಿಎಫ್ ಮೊದಲನೆ ಅಧ್ಯಾಯ ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಆಗಲೇ ಕೆಜಿಎಫ್ 2 ಚಿತ್ರ ಯಾವಾಗ ಬರುತ್ತದೆ ಎಂಬ ನಿರೀಕ್ಷೆ ಹುಟ್ಟು ಹಾಕಿದ್ದರು ಪ್ರಶಾಂತ್ ನೀಲ್. ಅಷ್ಟಕ್ಕೂ ಪ್ರಶಾಂತ್ ನೀಲ್ ಯಾರು..?  

ಇಡೀ ವಿಶ್ವವೇ ಕನ್ನಡ ಸಿನಿಮಾರಂಗದತ್ತ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ ಯಾರು ಗೊತ್ತಾ? ಭಾರತ ಸಿನಿಮಾರಂಗವೇ ಮೆಚ್ಚಿಕೊಂಡ ಈ ನಿರ್ದೇಶಕ ಎಲ್ಲಿಯವರು? ಇವರ ವಿದ್ಯಾಭ್ಯಾಸವೇನು? ಹೇಗೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಅಳಿಸಲಾಗದ ಸಾಮ್ರಾಜ್ಯ ಕಟ್ಟಿರುವ ಪ್ರಶಾಂತ್ ನೀಲ್ ನಮ್ಮ ಕನ್ನಡದವರೇ. 1980 ರ ಜೂನ್ 4ರಂದು ಹಾಸನ ಜಿಲ್ಲೆಯಲ್ಲಿ ಹುಟ್ಟಿ ಬೆಳೆದವರು. ಬಾಲ್ಯದಿಂದಲೂ ಪ್ರಶಾಂತ್ ನೀಲ್ ಅವರು ಬಡತನ ಕಂಡವರಲ್ಲ. ಯಾಕೆಂದರೆ ಪ್ರಶಾಂತ್ ನೀಲ್ ಅವರು ಸ್ಥಿತಿವಂತ ಕುಟುಂಬದಲ್ಲಿ ಜನಿಸಿ ಬೆಳೆದವರು. 

ಓದಿನಲ್ಲೂ ಬಹಳಷ್ಟು ಜಾಣರಾಗಿದ್ದ ಇವರು ಎಂಬಿಎ ಪದವಿ ಪಡೆದಿದ್ದಾರೆ. ಇನ್ನು ಅತಿ ಹೆಚ್ಚು ಕನ್ನಡ ಸಿನಿಮಾಗಳನ್ನು ನೋಡದ ಪ್ರಶಾಂತ್ ನೀಲ್ ಅವರು ನಿರ್ದೇಶನದ ಕೋರ್ಸ್ ಅನ್ನು ಮಾಡುತ್ತಾರೆ. ನಂತರ ಆ ಹುಡುಗಿ ನೀನೇ ಎಂಬ ಚಿತ್ರವನ್ನ ಶ್ರೀಮುರಳಿ ಅವರಿಗಾಗಿ ಕಥೆ ಬರೆಯುತ್ತಾರೆ. ಇದು ಸೂಟ್ ಆಗಲ್ಲ ಅಂತ ಕೈ ಬಿಡುತ್ತಾರೆ. ನಂತರ ಉಗ್ರಂ ಚಿತ್ರವನ್ನು ನಿರ್ದೇಶಿಸುತ್ತಾರೆ. ಕನ್ನಡ ಸಿನಿರಂಗಕ್ಕೆ 2014 ರಲ್ಲಿ ಉಗ್ರಂ ಚಿತ್ರದ ಮೂಲಕ ಪರಿಚಿತರಾದರು. ನಂತರ ನಿರ್ದೇಶಿಸಿದ ಸಿನಿಮಾವೇ ಕೆಜಿಎಫ್.

<