ಅಷ್ಟಕ್ಕೂ ನಿರ್ದೇಶಕ ಪ್ರಶಾಂತ್ ನೀಲ್ ಯಾರು ಅಂತ ನಿಮಗೆ ಗೊತ್ತಾ..?

By Infoflick Correspondent

Updated:Friday, April 15, 2022, 07:56[IST]

ಅಷ್ಟಕ್ಕೂ ನಿರ್ದೇಶಕ ಪ್ರಶಾಂತ್ ನೀಲ್ ಯಾರು ಅಂತ ನಿಮಗೆ ಗೊತ್ತಾ..?

ಸ್ಯಾಂಡಲ್ ವುಡ್ ನ ಅತಿ ಹೆಚ್ಚು ಸುದ್ದಿಯಲ್ಲಿರುವ ಚಿತ್ರ ಕೆಜಿಎಫ್ 2. ಈ ಚಿತ್ರ ಇಂದು ಬಿಡುಗಡೆ ಯಾಗಿದ್ದು, ಯಾರು ಊಹೆ ಮಾಡದ ಹಾಗೆ, ಇಡೀ ಭಾರತ ಚಿತ್ರರಂಗ ಮಾತ್ರವಲ್ಲದೆ, ಇಡೀ ವಿಶ್ವವೇ ತಿರುಗಿ ನೋಡುವಂತಾಗಿದೆ. ಹಾಲಿವುಡ್ ಚಿತ್ರರಂಗದ ಜನರು ಕೂಡ ತಮ್ಮ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಕೆಜಿಎಫ್ 2 ಚಿತ್ರ ಮೂಡಿ ಬಂದಿದೆ. ಪ್ರಶಾಂತ್ ನೀಲ್ ಅವರ ನಿರ್ದೇಶನದ ಕೆಜಿಎಫ್ ಮೊದಲನೆ ಅಧ್ಯಾಯ ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಆಗಲೇ ಕೆಜಿಎಫ್ 2 ಚಿತ್ರ ಯಾವಾಗ ಬರುತ್ತದೆ ಎಂಬ ನಿರೀಕ್ಷೆ ಹುಟ್ಟು ಹಾಕಿದ್ದರು ಪ್ರಶಾಂತ್ ನೀಲ್. ಅಷ್ಟಕ್ಕೂ ಪ್ರಶಾಂತ್ ನೀಲ್ ಯಾರು..?   

ಇಡೀ ವಿಶ್ವವೇ ಕನ್ನಡ ಸಿನಿಮಾರಂಗದತ್ತ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ ಯಾರು ಗೊತ್ತಾ? ಭಾರತ ಸಿನಿಮಾರಂಗವೇ ಮೆಚ್ಚಿಕೊಂಡ ಈ ನಿರ್ದೇಶಕ ಎಲ್ಲಿಯವರು? ಇವರ ವಿದ್ಯಾಭ್ಯಾಸವೇನು? ಹೇಗೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಅಳಿಸಲಾಗದ ಸಾಮ್ರಾಜ್ಯ ಕಟ್ಟಿರುವ ಪ್ರಶಾಂತ್ ನೀಲ್ ನಮ್ಮ ಕನ್ನಡದವರೇ. 1980 ರ ಜೂನ್ 4ರಂದು ಹಾಸನ ಜಿಲ್ಲೆಯಲ್ಲಿ ಹುಟ್ಟಿ ಬೆಳೆದವರು. ಬಾಲ್ಯದಿಂದಲೂ ಪ್ರಶಾಂತ್ ನೀಲ್ ಅವರು ಬಡತನ ಕಂಡವರಲ್ಲ. ಯಾಕೆಂದರೆ ಪ್ರಶಾಂತ್ ನೀಲ್  ಅವರು ಸ್ಥಿತಿವಂತ ಕುಟುಂಬದಲ್ಲಿ ಜನಿಸಿ ಬೆಳೆದವರು.    

ಪ್ರಶಾಂತ್ ನೀಲ್ ಅವರು  ಶ್ರೀಮುರಳಿ ಅವರ ಪತ್ನಿಯ ಸಹೋದರ . ಓದಿನಲ್ಲೂ ಬಹಳಷ್ಟು ಜಾಣರಾಗಿದ್ದ ಇವರು ಎಂಬಿಎ ಪದವಿ ಪಡೆದಿದ್ದಾರೆ. ಇನ್ನು ಅತಿ ಹೆಚ್ಚು ಕನ್ನಡ ಸಿನಿಮಾಗಳನ್ನು ನೋಡದ ಪ್ರಶಾಂತ್ ನೀಲ್ ಅವರು ನಿರ್ದೇಶನದ ಕೋರ್ಸ್ ಅನ್ನು ಮಾಡುತ್ತಾರೆ. ನಂತರ ಆ ಹುಡುಗಿ ನೀನೇ ಎಂಬ ಚಿತ್ರವನ್ನ ಶ್ರೀಮುರಳಿ ಅವರಿಗಾಗಿ ಕಥೆ ಬರೆಯುತ್ತಾರೆ. ಇದು ಸೂಟ್ ಆಗಲ್ಲ ಅಂತ ಕೈ ಬಿಡುತ್ತಾರೆ. ನಂತರ ಉಗ್ರಂ ಚಿತ್ರವನ್ನು ನಿರ್ದೇಶಿಸುತ್ತಾರೆ. ಕನ್ನಡ ಸಿನಿರಂಗಕ್ಕೆ 2014 ರಲ್ಲಿ ಉಗ್ರಂ ಚಿತ್ರದ ಮೂಲಕ ಪರಿಚಿತರಾದರು. ನಂತರ ನಿರ್ದೇಶಿಸಿದ ಸಿನಿಮಾವೇ ಕೆಜಿಎಫ್.

( video credit ; B4u Kannada )