ಪ್ರೇಕ್ಷಕರನ್ನು ಮನರಂಜಿಸುತ್ತಿರುವ ಜೋಡಿ ನಂ.1 ಟಿಆರ್’ಪಿ ರೇಟಿಂಗ್ ಎಷ್ಟಿದೆ ಗೊತ್ತಾ..?

By Infoflick Correspondent

Updated:Sunday, June 26, 2022, 23:44[IST]

ಪ್ರೇಕ್ಷಕರನ್ನು ಮನರಂಜಿಸುತ್ತಿರುವ  ಜೋಡಿ ನಂ.1 ಟಿಆರ್’ಪಿ ರೇಟಿಂಗ್ ಎಷ್ಟಿದೆ ಗೊತ್ತಾ..?

ಜೀ ಕನ್ನಡ ವಾಹಿನಿ ಈಗ ಹೊಸ ರಿಯಾಲಿಟಿ ಶೋ ಅನ್ನು ಪ್ರಾರಂಭಿಸಿದೆ. ಅದಾಗಲೇ ಕಾರ್ಯಕ್ರಮ ಪ್ರಸಾರವಾಗಿದ್ದು, ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ಸು ಕಂಡಿದೆ. ಇದರ ಪ್ರೋಮೋ ನೋಡಿಯೇ ಕುತೂಹಲಗೊಂಡಿದ್ದ ಪ್ರೇಕ್ಷಕರಿಗೆ ಈಗ ಅವರ ಸಂತಸ ದುಪ್ಪಟ್ಟಾಗಿದೆ. ಜೋಡಿ ಹಕ್ಕಿಗಳ ಮುದ್ದಾಟ, ಗುದ್ದಾಟದ ಶೋ ಜೋಡಿ ನಂ.1 ಹಿಟ್ ಆಗಿದೆ. ರಿಯಲ್ ಜೋಡಿಗಳ ಬ್ಯೂಟಿಫುಲ್ ಬಾಂಧವ್ಯವನ್ನು ತೋರಿಸುವ ಪ್ರೇಮದ ಹಬ್ಬ ಜೋಡಿ ನಂ.1 ಶೋನಲ್ಲಿ ವಿಶೇಷವಾಗಿ ಅನುಶ್ರೀ ಹಾಗೂ ಅರ್ಜುನ್ ಜನ್ಯ ಗೆಸ್ಟ್ ಆಗಿ ಕಾಣಿಸಿಕೋಮಡಿದ್ದರು.  

ಪ್ರತೀ ಶನಿವಾರ ಹಾಗೂ ಭಾನುವಾರ ಸಂಜೆ 6.30ಕ್ಕೆ ಜೋಡಿ ನಂ.1 ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ. ಈ ರಿಯಾಲಿಟಿ ಶೋ ನಲ್ಲಿ ಹಿರಿಯ ನಟ ಅಭಿಜೀತ್ ಹಾಗೂ ಅವರ ಪತ್ನಿ ಭಾಗವಹಿಸುತ್ತಿದ್ದಾರೆ. ಇನ್ನು ಮತ್ತೊಂದು ಹಿರಿಯ ಜೋಡಿ ಹಾಗೂ ಕಾಮಿಡಿ ಕಿಂಗ್ ಎನಿಸಿಕೊಂಡಿರುವ ಕೃಷ್ಣೇಗೌಡ ಮೇಸ್ಟ್ರು ಹಾಗೂ ಪತ್ನಿ ಇರಲಿದ್ದಾರೆ. ಇವರನ್ನು ಹೊರತು ಪಡಿಸಿ, ಸರಿಗಮಪದಿಂದ ಗುರುತಿಸಿಕೊಂಡ ಕಂಬದ ರಂಗಯ್ಯ ಹಾಗೂ ಪತ್ನಿ, ಇತ್ತೀಚೆಗಷ್ಟೇ ಮದುವೆಯಾದ ನಿನಾದ್ ಹರ್ತ್ಸಾ ಹಾಗೂ ರಮ್ಯಾ, ಗೋವಿಂದೇ ಗೌಡ ಹಾಗೂ ದಿವ್ಯಾ, ನಟ ಸಂತೋಷ್ ಹಾಗೂ ಪತ್ನಿ, ಮಿತ್ರಾ ಹಾಗೂ ಪತ್ನಿ. ಕೊನೆಯದಾಗಿ ನಟಿ ನೇಹಾ ಪಾಟೀಲ್ ಹಾಗೂ ಅವರ ಪತಿ ಕಾಣಿಸಿಕೊಂಡಿದ್ದಾರೆ. 

ಸದ್ಯ ರಿಯಾಲಿಟಿ ಶೋಗೆ ನಟಿ ಮಾಳವಿಕಾ ಅವಿನಾಶ್ ಹಾಗೂ ನಟ ನೆನಪಿರಲಿ ಪ್ರೇಮ್ ಜಡ್ಜ್ ಆಗಿದ್ದಾರೆ. ನಟಿ, ನಿರೂಪಕಿ ಶ್ವೇತಾ ಚೆಂಗಪ್ಪಾ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದು, ಶೋ ಅದ್ಧೂರಿಯಾಗಿದೆ. ಈಗಾಗಲೇ ಪ್ರಸಾರವಾಗಿರುವ ಎಪಿಸೋಡ್ ಗಳು ಸೂಪರ್ ಆಗಿದ್ದು, ಇದರ ಮೊದಲ ಎಪಿಸೋಡ್ ನ ಟಿಆರ್ ಪಿ ರೇಟಿಂಗ್ ಅತಿ ಹೆಚ್ಚು ಅಂಕಗಳನ್ನು ಪಡೆದಿದೆ. ಈ ಬಗ್ಗೆ ಶ್ವೇತಾ ಚೆಂಗಪ್ಪಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಸಂತಸವನ್ನು ವ್ಯಕ್ತಪಡಿಸಿದ್ದಾರೆ.