KGF 2: 1000 ಕೋಟಿ ಕಲೆಕ್ಷನ್ ಮಾಡಿರುವ ಕೆಜಿಎಫ್ 2 ಅದೆಷ್ಟು ಕಷ್ಟ ಪಟ್ಟಿತ್ತು ಗೊತ್ತಾ..? ಇದು ಕನ್ನಡಿಗರ ಶಕ್ತಿ ಅಂದ್ರೆ..!

By Infoflick Correspondent

Updated:Sunday, May 1, 2022, 21:57[IST]

KGF 2: 1000 ಕೋಟಿ ಕಲೆಕ್ಷನ್ ಮಾಡಿರುವ ಕೆಜಿಎಫ್ 2 ಅದೆಷ್ಟು ಕಷ್ಟ ಪಟ್ಟಿತ್ತು ಗೊತ್ತಾ..? ಇದು ಕನ್ನಡಿಗರ ಶಕ್ತಿ ಅಂದ್ರೆ..!

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಕೇವಲ ಮೂರು ಸಿನಿಮಾದಲ್ಲಿ ಇಡೀ ವಿಶ್ವಕ್ಕೆ ಚಿರಪರಿಚಿತವಾದ ನಿರ್ದೇಶಕ ಆಗಿ ಹೊರ ಹೊಮ್ಮಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಇದೀಗ ಹೆಚ್ಚು ಸುದ್ದಿಯಲ್ಲಿದ್ದಾರೆ ಎನ್ನಬಹುದು. ಈ ಪ್ರಶಾಂತ್ ನೀಲ್ ಅವರ ನಿರ್ದೇಶನಕ್ಕೆ ಕೆಜಿಎಫ್ ಚಾಪ್ಟರ್ ಟು ನೋಡಿದ ಪ್ರತಿಯೊಬ್ಬರೂ ಚಪ್ಪಾಳೆ ಹೊಡೆಯುತ್ತಿದ್ದಾರೆ. ಹಾಗೆ ಸಿನಿಮಾದ ಕಥೆ, ಮೇಕಿಂಗ್, ಡೈರೆಕ್ಷನ್ ಎಲಿವೇಶನ್ ಎಲ್ಲವನ್ನ ನೋಡಿದ ಕೆಜಿಎಫ್ ಸಿನಿ ಪ್ರೇಕ್ಷಕರು ಎಲಿವೇಶನ್ ಕಾ ಬಾಪ್ ಎಂದು ಪ್ರಶಾಂತ್ ನೀಲ್ ಅವರನ್ನ ಇದೀಗ ಕರೆಯುತ್ತಿದ್ದಾರೆ. ಚಿತ್ರತಂಡ ಈಗಾಗಲೇ ಗೆದ್ದು ಬೀಗುತ್ತಿದೆ ಎನ್ನಬಹುದು. ಇದು ನಮ್ಮ ಕನ್ನಡದ ಸಿನಿಮಾ ಎನ್ನುತ್ತಲೇ ಕ ನಿಜಕ್ಕೂ ಹೆಮ್ಮೆ ಅನ್ನಿಸುತ್ತದೆ.  

ನಮ್ಮ ಕನ್ನಡದ ಸಿನಿಮಾ ಹೀಗೆ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತದೆ ಎಂದರೆ ಯಾರಿಗೆ ತಾನೇ ಹೆಮ್ಮೆಯಾಗುವುದಿಲ್ಲ ಹೇಳಿ. ಕನ್ನಡ ಚಿತ್ರ ಕೆಜಿಎಫ್ ಭಾಗ-2 ಬಿಡುಗಡೆಯಾದ 14 ದಿನದಲ್ಲಿ ಎಲ್ಲಾ ಭಾಷೆಯಲ್ಲಿ ಸೇರಿ ಒಟ್ಟು ಸಾವಿರ ಕೋಟಿ ಕಲೆಕ್ಷನ್ ಮಾಡಿದೆ. ಹಾಗೇನೇ ಇನ್ನೂ ಕೂಡ ಯಶಸ್ಸಿನ ಉತ್ತುಂಗ ಏರುತ್ತ ಮುನ್ನುಗ್ಗುತ್ತಿದೆ. ಹೌದು ಕೆಜಿಎಫ್ ಭಾಗ ಎರಡರಲ್ಲಿ ಎಲ್ಲರೂ ತುಂಬಾ ಅತ್ಯದ್ಭುತವಾಗಿ ಅಭಿನಯ ಮಾಡಿ ಸಿನಿಮಾ ಗೆಲ್ಲುವಂತೆ ಮಾಡಿದ್ದಾರೆ. ರಾಕಿ ಬಾಯ್,  ಅದಿರನ ಪಾತ್ರದಲ್ಲಿ ಕಾಣಿಸಿಕೊಂಡ ಸಂಜಯ್ ದತ್, ಹಾಗೆ ರವೀನ ಟಂಡನ್ ಎಲ್ಲರೂ ಕೂಡ ತುಂಬಾ ಅತ್ಯದ್ಭುತವಾಗಿ ಅಭಿನಯ ಮಾಡಿದ್ದಾರೆ ಎನ್ನಬಹುದು. ಹೌದು ನಿರ್ದೇಶಕ ಪ್ರಶಾಂತ್ ನೀಲ್ ಅವರ ಕೈಚಳಕಕ್ಕೆ ಶಭಾಷ್ ಎಂದು ನಾವು ಕರೆಯಲೆಬೇಕು. ಅಷ್ಟು ಅದ್ಭುತವಾಗಿ ನಿರ್ದೇಶನವನ್ನು ಮಾಡಿದ್ದಾರೆ.

ಡಿಓಪಿ ಭುವನ್ ಗೌಡ, ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರು ಕೂಡ ಪ್ರಸಂಸೆ ಪಡುವ ಹಾಗೆ ಕೆಲಸ ಮಾಡಿದ್ದಾರೆ ಡಎನ್ನಲಾಗಿದೆ. ಈ ಕೆಜಿಎಫ್ ಸಿನಿಮಾ ಒಂದು ಹಾಲಿವುಡ್ ರೇಂಜಿನಲ್ಲಿ ಮೂಡಿಬಂದಿದ್ದು, ಕ್ಯಾಮರಾವರ್ಕ್ ಹಾಗೂ ಕೊನೆಯ ಕ್ಲೈಮ್ಯಾಕ್ಸ್ ಶೂಟಿಂಗ್ ಜೊತೆಗೆ ಕೆಲವೊಂದಿಷ್ಟು ಸಾಹಸಮಯ ದೃಶ್ಯಗಳ ಯಾವ ರೀತಿ ಶೂಟ್  ಮಾಡಿದ್ದಾರೆ ಗೊತ್ತಾ..? ಇಲ್ಲಿದೆ ನೋಡಿ ಅದೇ ಮೇಕಿಂಗ್ ವಿಡಿಯೋ. ಈ ವಿಡಿಯೋ ನೀವು ನೋಡಿದ್ದೆ ಆದರೆ ಮೈ ರೋಮಾಂಚನ ಆಗುತ್ತದೆ. ಈ ವಿಡಿಯೋ ಪೂರ್ತಿಯಾಗಿ ನೋಡಿ. ಎಷ್ಟು ಕಷ್ಟಪಟ್ಟು ಕೆಜಿಎಫ್ 2 ಸಿನಿಮಾ ಮಾಡಿದ್ದಾರೆಂದು ನಿಮಗೆ ಗೊತ್ತಾಗುತ್ತದೆ. ಧನ್ಯವಾದಗಳು...