ಕೋವಿಡ್19 ವೈರಸ್ : ಆತಂಕಕಾರಿ ಸ್ಪೋಟಕ ಭವಿಷ್ಯ ನುಡಿದ ಕೋಡಿಶ್ರೀ ಸ್ವಾಮೀಜಿ ಹೇಳಿದ್ದೇನು ?

By Infoflick Correspondent

Updated:Sunday, June 12, 2022, 07:21[IST]

ಕೋವಿಡ್19 ವೈರಸ್ : ಆತಂಕಕಾರಿ ಸ್ಪೋಟಕ ಭವಿಷ್ಯ ನುಡಿದ ಕೋಡಿಶ್ರೀ ಸ್ವಾಮೀಜಿ ಹೇಳಿದ್ದೇನು ?

ಹಾಸನ ಜಿಲ್ಲೆಯ ಹಾರನಹಳ್ಳಿ ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ರಾಜಕೀಯ ಹಾಗು ಮಳೆ ಮತ್ತು ಕೊರೊನಾ ಕುರಿತು ಸ್ಪೋಟಕ ಭವಿಷ್ಯವನ್ನು ಹೇಳಿದ್ದಾರೆ.

ಮಳೆ ಕೆಂಡಾಮಂಡಲವಾಗಲಿದೆ. ಮಲೆನಾಡು ಬಯಲಾಗತ್ತೆ, ಬಯಲು ಮಲೆನಾಡಗತ್ತೆ ಎಂದು ಹೇಳಿದ್ದೆ. ಇದೀಗ ಆದೇ ರೀತಿಯಾಗ್ತಿದೆ. ಮುಂಗಾರು ಮಳೆ ಇನ್ನೂ ಹೆಚ್ಚಾಗೋ ಲಕ್ಷಣ ಕಾಣ್ತಾ ಇದೆ. ಅಲ್ಲದೇ ಈ ಬಾರಿ ಹಿಂಗಾರು ಮಳೆ ಅಕಾಲಿಕವಾಗಿ ಹೆಚ್ಚು ಸುರಿಯಲಿದೆ. ಮಳೆ ಹಾವಳಿ ಜಾಸ್ತಿಯಾಗೋದ್ರಿಂದ ದೊಡ್ಡ ದೊಡ್ಡ ನಗರಗಳಿಗೆ ತೊಂದರೆಯಾಗ್ತದೆ' ಎಂದು ಮಳೆ ಕುರಿತು ಭವಿಷ್ಯ ನುಡಿದಿದ್ದಾರೆ.

ರಾಜಕೀಯ ವಿಷಯವಾಗಿಯೂ ಮಾತಾಡಿರುವ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು, 'ರಾಜಕೀಯ ಅಸ್ತಿರವಾಗ್ತದೆ. ಗುಂಪು ಆಗ್ತಾವೆಂದು ಈಗಾಗಲೇ ಹೇಳಿರೋದು ಇದೀಗ ನಡೆಯುತ್ತಿದೆ.. ಒಟ್ಟಾರೆ ರಾಜಕೀಯವೇ ಗುಂಪು ಗುಂಪಾಗಲಿದೆ. ಇದು ಯಾರ ಮೇಲೆ ಪರಿಣಾಮ ಬೀರಲಿದೆ ಅನ್ನೋದು ಹೇಳೋಕೆ ಆಗಲ್ಲ. ಕೇವಲ ಭಾರತವಲ್ಲ‌, ಪ್ರಪಂಚದಲ್ಲಿ ಅವಘಡ ಈಗ ಪ್ರಾರಂಭವಾಗಿದೆ. ಪೈಗಂಬರರನ್ನ ಅವಹೇಳನ‌ ಮಾಡಿರೋ ವಿಚಾರದಿಂದ ಇದೀಗ ಜಗತ್ತಿನದ್ಯಂತ ಗಲಾಟೆ ಶುರುವಾಗಿದೆ. ಮುಂದೆ ಇದರಿಂದ ದೊಡ್ಡ ಮಟ್ಟದ ಅಪಾಯ ಇದೆ' ಎಂದು ಅವರು ಹೇಳಿದರು.

ನಾನು 3 ತಿಂಗಳ ಹಿಂದೆಯೆ ಹೇಳಿದ್ದೆ. ಏನೆಂದರೆ ಮತ್ತೆ ಕೊವಿಡ್ ಬರುತ್ತೆ ಅಂತಾ ಹೇಳಿದ್ದೆ. ಒಂದೂವರೆ ವರ್ಷದ ನಂತರ ಸಂಪೂರ್ಣವಾಗಿ ಜಗತ್ತಿನಿಂದ ಬಿಡುಗಡೆ ಆಗುತ್ತೆ.  ಕೋವಿಡ್ ಗಾಳಿಯ ಮೂಲಕವೂ ಬರಬಹುದು. ಉಸಿರಾಟದ ತೊಂದರೆಯಾಗಿ ಪ್ರಾಣ ಹಾನಿಯಾಗಹುದು. ಈ ಬಗ್ಗೆ ಮುಂಜಾಗ್ರತೆ ವಹಿಸಿಬೇಕು' ಎಂದು  ಹೇಳಿಕೆ ನೀಡಿದ್ದಾರೆ.