KP Aravind , Divya Uruduga: ಕೊನೆಗೂ ಅರವಿಂದ್ ದಿವ್ಯಾ ಜೋಡಿ ಮದುವೆ ಬಗ್ಗೆ ಸಿಕ್ತು ಬಿಗ್ ಅಪ್ಡೇಟ್..! ಇವರ ಮದುವೆ ಎಲ್ಲಿ ಗೊತ್ತೇ..?
Updated:Friday, April 29, 2022, 11:14[IST]

ಕನ್ನಡ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಆಗಿದ್ದ ಬಿಗ್ ಬಾಸ್ ಕಾರ್ಯಕ್ರಮ ಈಗಾಗಲೇ ಅಪಾರ ಅಭಿಮಾನಿಗಳ ಬಳಗ ಗಿಟ್ಟಿಸಿಕೊಂಡಿದೆ. ಕೆಲವೊಂದಿಷ್ಟು ಚಟುವಟಿಕೆಗಳ ಮೂಲಕ ಸೆಲೆಬ್ರಿಟಿಗಳನ್ನು ಬಿಗ್ ಬಾಸ್ ಮನೆ ಒಳಗೆ ಎಂಟ್ರಿ ಕೊಡಿಸಿ ನಂತರ ಅವರ ಕೈಯಿಂದ ಕೆಲ ಚಟುವಟಿಕೆಗಳನ್ನು ಮಾಡಿಸಿ, ಅಲ್ಲಿಯ ನಿಯಮಕ್ಕೆ ಒಳಗಾಗುವಂತೆ ಮಾಡಿ ಆಟದ ಗತ್ತು ಏನು ಎಂಬುದಾಗಿ ತೋರಿಸುತ್ತದೆ. ಜೊತೆಗೆ ಸಿನಿರಂಗದಲ್ಲಿ ತೆರೆಯಮೇಲೆ ಬಣ್ಣ ಹಚ್ಚುವುದು ಎಲ್ಲರೂ ನೋಡಿರುತ್ತೇವೆ. ಆದರೆ ತೆರೆಯ ಹಿಂದೆ ಅವರ ವೈಯಕ್ತಿಕ ವಿಚಾರಗಳು ಹೇಗಿರುತ್ತವೆ, ಜನರ ಜೊತೆ ಅವರು ಯಾವ ರೀತಿ ಒಡನಾಟ ಇಟ್ಟುಕೊಂಡಿರುತ್ತಾರೆ. ಅವರ ಗುಣಗಳು ಎಂತಹದ್ದು ಎಂಬುದಾಗಿ ತಿಳಿ ಪಡಿಸಲು ಈ ಬಿಗ್ ಬಾಸ್ ಶೋ ಮುಂಚೂಣಿಯಲ್ಲಿರುತ್ತದೆ ಎನ್ನಬಹುದು.
ಹೌದು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಂದು ಹೋದವರಲ್ಲಿ ಕೆಲವರಲ್ಲಿ ಪ್ರೀತಿ ಮಾಡಿ ಸುದ್ದಿ ಆದ್ರೆ, ಇನ್ನೂ ಕೆಲವರಲ್ಲಿ ಹೆಚ್ಚು ಸ್ನೇಹ ಹುಟ್ಟಿದೆ. ಬಿಗ್ಬಾಸ್ ಮನೆಗೆ ಬಂದು ಹೋದ ಚಂದನ್ ಮತ್ತು ನಿವೇದಿತಾ ಮದುವೆ ಆಗಿದ್ದಾರೆ. ಈ ರೀತಿ ಇದೀಗ ಇನ್ನೊಂದು ಜೋಡಿ ಹಸೆಮಣೆಗೆ ಏರಲಿದೆಯಂತೆ. ಹೌದು ಬಿಗ್ಬಾಸ್ ಮನೆಯಲ್ಲಿ ದಿವ್ಯ ಉರುಡುಗ ಅರವಿಂದ್ ಜೋಡಿ ತುಂಬಾನೇ ಸದ್ದು ಮಾಡಿತ್ತು. ಇವರಿಬ್ಬರ ನಡುವೆ ಆರಂಭದಲ್ಲಿ ಸ್ನೇಹವಿದ್ದು ನಂತರ ಪ್ರೀತಿಗೆ ತಿರುಗಿತ್ತು ಎನ್ನುವ ಮಾತುಗಳು ಕೇಳಿಬಂದಿದ್ದವು. ಅದರಂತೆ ಇದೀಗ ದಿವ್ಯ ಹಾಗೂ ಅರವಿಂದ್ ಅವರು ಇಷ್ಟರಲ್ಲೇ ಮದುವೆಯಾಗುವ ಬಿಗ್ ಅಪ್ಡೇಟ್ ಸಿಕ್ಕಿದ್ದು, ಇವರ ಮದುವೆಯೂ ಇಷ್ಟರಲ್ಲೇ ಬಿಗ್ಬಾಸ್ ಮನೆಯಲ್ಲಿಯೇ ಆಗುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಹೌದು ಇವರ ಮನೆಯವರು ಇವರಿಬ್ಬರ ಮದುವೆಯನ್ನ ವಿಭಿನ್ನವಾಗಿ ಮಾಡುವ ಪ್ಲಾನ್ ಮಾಡಿದ್ದಾರಂತೆ. ಹೌದು ಆಯೋಜಕರ ನಡುವೆ ಮಾತನಾಡಿ ಬಿಗ್ಬಾಸ್ ಮನೆಯಲ್ಲೇ ಮದುವೆ ಮಾಡಲಿಕ್ಕೆ ಮಾತುಕತೆಯನ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಹೌದು ಬಿಗ್ಬಾಸ್ ಸೀಸನ್ 8 ರ ಎಲ್ಲಾ ಸ್ಪರ್ಧಿಗಳು ಇವರಿಬ್ಬರ ಮದುವೆಗೆ ಕಾತುರದಿಂದ ಹೆಚ್ಚು ಕಾಯುತ್ತಿದ್ದಾರೆ. ಹಾಗೆ ಇವರ ಮದುವೆ ಬಿಗ್ ಮನೆಯಲ್ಲಿ ಆಗಿದ್ದೆ ಆದ್ರೆ ಇದೊಂದ್ ಮದುವೆ ಕಲರ್ಫುಲ್ ಆಗಿರೋದು ಸತ್ಯ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.