ಕನ್ನಡದ ನಟಿ ಕೃತಿ ಶೆಟ್ಟಿ ಸಿನಿಮಾವೊಂದಕ್ಕೆ ಅದೇಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ..? ಇಷ್ಟೊಂದಾ

By Infoflick Correspondent

Updated:Tuesday, July 26, 2022, 10:30[IST]

ಕನ್ನಡದ ನಟಿ ಕೃತಿ ಶೆಟ್ಟಿ ಸಿನಿಮಾವೊಂದಕ್ಕೆ ಅದೇಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ..? ಇಷ್ಟೊಂದಾ

ಕಲಾವಿದರ ಜೀವನ ಹಾಗೇನೆ, ಯಾವಾಗ ಯಾವ ಯಾವ ಕಲಾವಿದರು ಎಷ್ಟರ ಮಟ್ಟಕ್ಕೆ ಬೆಳೆಯುತ್ತಾರೆ ಎಂದು ನಾವು ಹೇಳಲಿಕ್ಕಾಗದು. ತುಂಬಾ ಪರಿಶ್ರಮ ಪಡಬೇಕು. ಚಿತ್ರರಂಗ ಎನ್ನುವುದು ಬಹಳ ಜನರಿಗೆ ಜೀವನ ಕಟ್ಟಿಕೊಟ್ಟಿದೆ. ನೋಡ ನೋಡುತ್ತಿದ್ದಂತೆಯೇ ದೊಡ್ಡ ಸ್ಟಾರ್ ನಟರನ್ನಾಗಿ ಮಾಡಿದೆ ಎನ್ನಬಹುದು. ಆದರೆ ಹೆಚ್ಚು ಯಶಸ್ವಿಯಾದ ನಟರಿಗಿಂತ ಸಿನಿಮಾರಂಗ ಅದೆಷ್ಟೋ ಕಲಾವಿದರನ್ನು ತೀರಾ ಪಾತಾಳಕ್ಕೆ ನೂಕಿದೆ. ಕಾರಣ ಅವರು ಅಂದುಕೊಂಡ ಈ ಸಿನಿ ಹಾದಿ ಒಳಗೆ ಅಥವಾ ಈ ಸಿನಿಮಾರಂಗದಲ್ಲಿ ಯಶಸ್ವಿಯಾಗದೆ, ಮಾಡಲು ಬೇರೆ ಕೆಲಸವೂ ಇಲ್ಲದೇನೇ, ಜೀವನವನ್ನೇ ನರಕ ಮಾಡಿಕೊಂಡವರು ಇದ್ದಾರೆ. ಕೆಲ ಕಲಾವಿದರು ಇದ್ದಾರೆ ನೋಡ ನೋಡುತ್ತಿದ್ದಂತೆ ರಾತ್ರೋರಾತ್ರಿ ದೊಡ್ಡ ಸ್ಟಾರ್ ಆಗಿ ಹೊರ ಬಂದವರು ಇದ್ದಾರೆ. ಹಾಗೆ ಅಪಾರ ಅಭಿಮಾನಿ ಬಳಗ ಗಳಿಸಿಕೊಂಡು ಯಶಸ್ವಿಯಾಗಿರುವವರು.   

ಹೌದು ಸ್ನೇಹಿತರೆ ನಟಿ ಕೃತಿ ಶೆಟ್ಟಿ ಈ ಹೆಸರನ್ನು ನೀವು ಕೇಳರುತ್ತೀರಿ. ಇವರು ಮೂಲತಃ ಕನ್ನಡದವರು ಎಂದು ಹೇಳಲಾಗುತ್ತಿದೆ. ಕೃತಿಶೆಟ್ಟಿ ಮಂಗಳೂರಿನವರು. ಇವರು ಸಣ್ಣವಯಸ್ಸಿನಲ್ಲಿಯೇ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡು, ಮಾಡಿದ ಮೂರ್ನಾಲ್ಕು ಸಿನಿಮಾಗಳ ನಡುವೆಯೇ ಅಪಾರ ಅಭಿಮಾನಿ ಬಳಗ ಗಳಿಸಿದ್ದಾರೆ. ನಟಿ ಕೃತಿ ಶೆಟ್ಟಿ ಅವರು ಉಪ್ಪೇನ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದವರು. ತದನಂತರ ನಾಗ ಚೈತನ್ಯ ಜೊತೆ ತೆರೆ ಹಂಚಿಕೊಂಡರು. ನಾನಿ ಜೊತೆಯೂ ತೆರೆ ಮೇಲೆ ಕಾಣಿಸಿದ ನಟಿ ಕೃತಿ ಶೆಟ್ಟಿ ಅವರ ಸಂಭಾವನೆ ವಿಚಾರ ಈಗ ಹೊರ ಬಂದಿದೆ.

ಹೌದು ನಟಿ ಕೃತಿ ಹುಟ್ಟಿದ್ದು 2003 ರಲ್ಲಿ. ಈಗ ಸಿನಿಮಾ ಒಂದಕ್ಕೆ ನಟಿಯಾಗಿ 70ರಿಂದ 80 ಲಕ್ಷ ಪಡೆಯುತ್ತಿದ್ದಾರಂತೆ. ಅತಿ ಚಿಕ್ಕ ವಯಸ್ಸಿಗೆ ಇಷ್ಟೊಂದು ಸಂಭಾವನೆ ಪಡೆಯುವ ನಟಿ ಕೃತಿ ಶೆಟ್ಟಿ ಅವರ ಅಭಿನಯ ನಿಜಕ್ಕೂ ಮೆಚ್ಚುವಂತದ್ದೆ ಬಿಡಿ ಎನ್ನಬಹುದು. ನೀವು ನಟಿಯ ಅಭಿಮಾನಿಯಾಗಿದ್ದಲ್ಲಿ ಸಂಭಾವನೆ ವಿಚಾರವಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿಗೆ ಸಂಭಾವನೆಯೂ ನಟಿ ಕೃತಿ ಶೆಟ್ಟಿ ಅವರಿಗೆ ದೊರಕಲಿ ಎಂದು ಶುಭ ಕೋರಿ ಧನ್ಯವಾದಗಳು...