ಆ ಡೈರೆಕ್ಟರ್‌ ಜೊತೆಗೆ ಕಷ್ಟಪಟ್ಟು ಒಂದು ವಾರ ಕಳೆದ ನಟಿ ಕೃತಿ ಶೆಟ್ಟಿ

By Infoflick Correspondent

Updated:Wednesday, July 20, 2022, 15:16[IST]

ಆ ಡೈರೆಕ್ಟರ್‌ ಜೊತೆಗೆ ಕಷ್ಟಪಟ್ಟು ಒಂದು ವಾರ ಕಳೆದ ನಟಿ ಕೃತಿ ಶೆಟ್ಟಿ

ನಟಿ ಕೃತಿ ಶೆಟ್ಟಿ ಈಗ ಟಾಲಿವುಡ್‌ ನ ಟಾಪ್‌ ಹೀರೋಯಿನ್‌ ಗಳಲ್ಲಿ ಒಬ್ಬರು. ಕನ್ನಡತಿಯಾಗಿರುವ ಕೃತಿ ಶೆಟ್ಟಿ ಅವರ ಕೈಯಲ್ಲಿ ಈಗ ಸಾಲು ಸಾಲು ಚಿತ್ರಗಳಿವೆ. ತುಳು ನಾಡಿದ ಚೆಲುವೆ ಮುದ್ದಾದ ಲುಕ್​ನಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿರುವ ಕೃತಿ ಶೆಟ್ಟಿ ಅವರು, ಡೈರೆಕ್ಟರ್‌ ಜೊತೆಗೆ ಎಣಗಿದ ಸಂಕಷ್ಟವನ್ನೂ ಹೇಳಿಕೊಂಡಿದ್ದಾರೆ. ದಿ ವಾರಿಯರ್‌ ಚಿತ್ರದ ಪ್ರಚಾರದ ವೇಳೆ, ತಮ್ಮ ನೋವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. 

ನಟ ರಾಮ್ ಅಭಿನಯದ 'ದಿ ವಾರಿಯರ್' ಚಿತ್ರ ನಾಳೆ ರಿಲೀಸ್‌ ಆಗಲಿದೆ. ಈ ಸಿನಿಮಾವನ್ನು ತಮಿಳು ನಿರ್ದೇಶಕ ಲಿಂಗುಸ್ವಾಮಿ ನಿರ್ದೇಶಿಸಿದ್ದಾರೆ. ತುಳು ನಾಡಿನ ಬೆಡಗಿ ಕೃತಿಗೆ ತೆಲುಗು ಭಾಷೆಯನ್ನು ಅಚ್ಚುಕಟ್ಟಾಗಿ ಮಾತನಾಡಬಲ್ಲರು. ಆದರೆ ತಮಿಳು ಭಾಷೆಯನ್ನು ಇನ್ನೂ ಈಗಷ್ಟೇ ಕಲಿಯುತ್ತಿದ್ದಾರೆ. ಅಷ್ಟರಲ್ಲಿ ಎಡವಟ್ಟೊಂದು ಆಗಿದೆ.    

ನಿರ್ದೇಶಕ ಲಿಂಗುಸ್ವಾಮಿ ಅವರು ತಮಿಳನ್ನು ತೆಲುಗು ಟೋನ್‌ ನಲ್ಲಿ ಮಾತನಾಡಿದ್ದಾರೆ. ಇದರಿಂದ ಪೇಚಿಗೆ ಸಿಲುಕಿದ ಕೃತಿ ಅವರು ಕಣ್ಣೀರಿಟ್ಟಿದ್ದಾರೆ.  

ಲಿಂಗುಸ್ವಾಮಿ ಅವರ ಭಾಷೆ ಅರ್ಥವಾಗದ ಕಾರಣ ಕೃತಿ ಶೆಟ್ಟಿ ಅವರಿಗೆ ನಟ ರಾಮ್‌ ಅವರು ಸಹಾಯ ಮಾಡಿದ್ದಾರಂತೆ. ಲಿಂಗುಸ್ವಾಮಿ ಅವರ ಮಾತುಗಳನ್ನು ಕೃತಿ ಅವರಿಗೆ ಅರ್ಥ ಮಾಡಿಸಿದ್ದಾರೆ. ಈ ಬಗ್ಗ ಮಾತನಾಡಿರುವ ಕೃತಿ ಅವರು, ನಿರ್ದೇಶಕರ ಜೊತೆ ಒಂದು ವಾರ ಕಷ್ಟಪಡಬೇಕಾಯಿತು. ಆದರೆ ನಟ ರಾಮ್‌ ಅವರು ಸಹಾಯ ಮಾಡಿದರು. ಬಳಿಕ ಲಿಂಗು ಸ್ವಾಮಿ ಅವರ ಭಾಷೆಗೆ ಒಗ್ಗಿಕೊಂಡೆ. ಅಲ್ಲಿಯವರೆಗೂ ತುಂಬಾನೇ ಕಷ್ಟವಾಯ್ತು ಎಂದು ಹೇಳಿದ್ದಾರೆ. 

ಉಪ್ಪೇನ ಚಿತ್ರದ ಮೂಲಕ ಕೃತಿ ಶೆಟ್ಟಿ  ಟಾಲಿವುಡ್‌ ಗೆ ಎಂಟ್ರಿಕೊಟ್ಟರು. ಶ್ಯಾಮ್ ಸಿಂಗಾರಾಯ್ ಚಿತ್ರದಲ್ಲಿ ಕೃತಿ ಅವರ ನಟನೆಗೆ ಉತ್ತಮ ಪ್ರತಿಕ್ರಿಯೆಗಳು ಬಂದಿದ್ದವು. ಅಲ್ಲದೇ, ಬಂಗಾರ್ರಾಜು ಚಿತ್ರದಲ್ಲಿ ನಟಿಸಿದ್ದರು. ಇನ್ನು ಕೃತಿ ಶೆಟ್ಟಿ ಅವರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಕೂಡ, ಸೋಶಿಯಲ್‌ ಮೀಡಿಯಾದಲ್ಲಿ ಸಕತ್‌ ಆಕ್ಟೀವ್‌ ಆಗಿರುತ್ತಾರೆ. ಇವರು ಅಪ್‌ ಲೋಡ್‌ ಮಾಡುವ ಫೋಟೋಗಳಿಗೆ ಉತ್ತಮ ಪ್ರತಿಕ್ರಿಯೆಗಳು ಬರುತ್ತಿರುತ್ತವೆ.