ನಿನ್ನೆ ಅಪಘಾತಕ್ಕಿಡಾದ ಸಮನ್ವಿಯ ಕೊನೆ ವಿಡಿಯೋ ವೈರಲ್..! ನಿಜಕ್ಕೂ ಕಣ್ಣೀರು ತರಿಸುತ್ತಿದೆ..!!

By Infoflick Correspondent

Updated:Friday, January 14, 2022, 09:56[IST]

ನಿನ್ನೆ ಅಪಘಾತಕ್ಕಿಡಾದ ಸಮನ್ವಿಯ ಕೊನೆ ವಿಡಿಯೋ ವೈರಲ್..! ನಿಜಕ್ಕೂ ಕಣ್ಣೀರು ತರಿಸುತ್ತಿದೆ..!!

ಕನ್ನಡ ಕಿರುತೆರೆಯ ಖ್ಯಾತ ರಿಯಲಿಟಿ ಶೋ ಆಗಿದ್ದ ಕಲರ್ಸ್ ಕನ್ನಡದ ನಮ್ಮಮ್ಮ ಸೂಪರ್ಸ್ಟಾರ್ ಖ್ಯಾತಿ ಪುಟ್ಟ ಕಲಾವಿದೆ ಸಮನ್ವಿ ಎಂಬ ಆರು ವರ್ಷದ ಹುಡುಗಿ ನಿನ್ನೆಯಷ್ಟೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಹೌದು ತಾಯಿ ಖ್ಯಾತ ಕಿರುತೆರೆ ಕಲಾವಿದೆ ಅಮೃತ ನಾಯ್ಡು ಜೊತೆ ದ್ವಿಚಕ್ರ ವಾಹನದಲ್ಲಿ ಕೋಣನಕುಂಟೆ ರಸ್ತೆಯಲ್ಲಿ ಬರುತ್ತಿದ್ದ ವೇಳೆ ಎದುರಿಗೆ ಬಂದ ಜವರಾಯ ಟಿಪ್ಪರ್ ಲಾರಿಯೊಂದು ಇವರ ಗಾಡಿಗೆ ಗುದ್ದಿ ಹೋಗಿದೆ, ಸ್ಥಳದಲ್ಲಿ ಸಮನ್ವಿ ಸಾವನ್ನಪ್ಪಿದ್ದು ಇವರ ತಾಯಿ ಸ್ಥಿತಿ ಕೂಡ ಗಂಭೀರವಾಗಿದೆ ಎಂದು ನಿನ್ನೆ ತಿಳಿದುಬಂದಿತ್ತು. ಹೌದು ಸಮನ್ವಿ ಸಾವನ್ನಪ್ಪಿದ್ದಾಳೆ ಎನ್ನುವ ವಿಷಯ ಇಡೀ ರಾಜ್ಯಕ್ಕೆ ಕೇಳುತ್ತಿದ್ದಂತೆ, ನಿಜಕ್ಕೂ ದೇವರು ಇದ್ದಾನೆಯೇ, ದೇವರ ಮೇಲೆ ನಂಬಿಕೆ ಕಡಿಮೆಯಾಗುತ್ತಿದೆ ಎಂಬ ಮಾತುಗಳು ಹೆಚ್ಚು ಕೇಳಿಬಂದವು. 

ದೇವರು ನಿಜಕ್ಕೂ ತುಂಬಾ ಕ್ರೂರಿ ಅನಿಸುತ್ತಿದೆ. ಆ ಆರು ವರ್ಷದ ಪುಟ್ಟ ಮಗು ಆಡಿಕೊಂಡು, ನಲಿದಾಡಿಕೊಂಡು ಎಲ್ಲರ ಜೊತೆ ತುಂಬಾ ಅನ್ಯೂನ್ಯವಾಗಿತ್ತು. ಆದರೆ ದೇವರು ಆ ಪುಟ್ಟ ಮಗುವನ್ನು ಇಷ್ಟು ಬೇಗನೆ ಕರೆದುಕೊಂಡು ಎಲ್ಲರಿಗೂ ನೋವು ನೀಡಿ ಬಿಟ್ಟ. ಸಮನ್ವಿ ಸಾವಿನ ಸುದ್ದಿ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಷ್ಟಕ್ಕೂ ಸಮನ್ವಿ ಶೂಟಿಂಗ್ ಸೆಟ್ಟಿನಲ್ಲಿ, ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದ ನಡುವೆ ಯಾವ ರೀತಿ ಆಕ್ಟಿವ್ ಇರುತ್ತಿದ್ದಳು ಗೊತ್ತಾ.? ಅವಳ ಕೊನೆ ವಿಡಿಯೋ ಈಗ ವೈರಲ್ ಆಗುತ್ತಿದೆ. ನಿಜಕ್ಕೂ ಕಣ್ಣೀರು ತರಿಸುವಂತಿದೆ. ಹೌದು ಇಲ್ಲಿದೆ ನೋಡಿ ವಿಡಿಯೋ ಸಮನ್ವಿ ಆತ್ಮಕ್ಕೆ ಶಾಂತಿ ಸಿಗಲಿ...

VIDEO CREDIT : Rathi tv kannada