ಅಂಬಿ ವಿಷ್ಣುವರ್ಧನ್ ಮನೆಗೆ ಬಂದು, ಗುಂಡು ತುಂಡು ಇಲ್ವಾ ಎಂದಾಗ, ವಿಷ್ಣು ಮಾಡಿದ್ದೇನು ಗೊತ್ತಾ.?

Updated: Monday, February 22, 2021, 20:12 [IST]

ನಮ್ಮ ಸ್ಯಾಂಡಲ್ವುಡ್ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಸ್ನೇಹದ ವಿಚಾರಕ್ಕೆ ಹೆಸರಾಗಿದ್ದ ಕುಚಿಕು ಗೆಳೆಯರು ಎಂದರೆ, ಅದು ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್. ಇವರಿಬ್ಬರು ಅದೆಷ್ಟು ಸ್ನೇಹ ಬಾಂಧವ್ಯ ಹೊಂದಿದ್ದರು ಎಂದು ಇಡೀ ಕರ್ನಾಟಕಕ್ಕೆ ಗೊತ್ತು. ಹಾಗೇನೇ ಸ್ವಲ್ಪವೂ ಗರ್ವ ಇಲ್ಲದೆ, ಇಬ್ಬರು ಸಹ ಬಹಳ ಸ್ನೇಹದಿಂದ ತುಂಬಾ ಸರಳತೆಯಿಂದಲೇ ಜೀವನ ಮಾಡಿದರು. ಇವರಿಬ್ಬರ ಸ್ನೇಹ ನೋಡಿ ಸ್ಯಾಂಡಲ್ವುಡ್ ಹೆಮ್ಮೆ ಪಡುತ್ತಿತ್ತು ಅಷ್ಟು ಗಟ್ಟಿಯಾಗಿ ಇವರ ಸ್ನೇಹ ಇತ್ತು. ಈಗ ಈ ಕುಚಿಕು ಗೆಳೆಯರು ಈಗ ಸ್ವರ್ಗದಲ್ಲಿದ್ದಾರೆ.  

ಒಂದು ದಿನ ನಟ ವಿಷ್ಣುವರ್ಧನ್ ಮನೆಗೆ ಬಂದ ನಟ ಅಂಬರೀಷ್ ಆಗ ನಡೆದಿರುವ ಒಂದು ಘಟನೆ ಏನು ಗೊತ್ತಾ?  ಮುಂದೆ ಓದಿ ತಿಳಿದುಕೊಳ್ಳಿ..ವಿಷ್ಣುವರ್ಧನ್ ಅವರು ಇದ್ದಾಗ ಸಂದರ್ಶನ ಒಂದರಲಿ ತಮ್ಮ ಹಾಗೂ ಅಂಬರೀಶ್ ಅವರ ಸ್ನೇಹದ ಬಗ್ಗೆ ಮಾತನಾಡಿದ್ದು 'ನನ್ನ ಮತ್ತು ಅಂಬಿ ಸ್ನೇಹದಲ್ಲಿ 30 ವರ್ಷಗಳಿಂದ ಇಂದಿನವರಿಗು ಒಂದು ಚಿಕ್ಕ ಬಿ-ರುಕು ಕೂಡ ಮೂಡಿಲ್ಲ. ನಮ್ಮ ನಡುವೆ ಯಾವುದೇ ಮನಸ್ತಾಪ ಬಂದಿಲ್ಲ, ಇಡೀ ಭಾರತ ಚಿತ್ರರಂಗದ ಸೂಪರ್ ಸ್ಟಾರ್ ಗಳಲ್ಲಿ, ಇಷ್ಟು ಅನ್ಯೋನ್ಯತೆ ಮತ್ತು ಪ್ರೀತಿಯಿಂದ ಇರುವುದು ನಾನು ಮತ್ತು ಅಂಬಿ ಮಾತ್ರ' ಎಂದು ಹೆಮ್ಮೆ ಪಟ್ಟುಕೊಂಡೇ ಸಾಹಸಸಿಂಹ ವಿಷ್ಣುವರ್ಧನ್ ಅವರು ಹೇಳಿದ್ದರು. ಇವರಿಬ್ಬರ ಸ್ನೇಹ ಎಷ್ಟು ಪ್ರೀತಿಯಿಂದ ಹಾಗೂ ಅನ್ಯೋನ್ಯತೆಯಿಂದ ಕೂಡಿತ್ತು ಎಂದರೆ, ಈ ಒಂದು ಉದಾಹರಣೆ ನೋಡಿ ಸಾಕು..  

ಅಂಬರೀಶ್ ಅವರು ಈ ಹಿಂದೆ ಸಾಕಷ್ಟು ಬಾರಿ ನಮ್ಮ ವಿಷ್ಣುವರ್ಧನ್ ಅವರ ಮನೆಗೆ ಹೋಗಿ ಬಂದು ಮಾಡ್ತಿದ್ದರಂತೆ. ಆಗ ಮನೆಗೆ ಭೇಟಿ ಕೊಟ್ಟಾಗ ಬರಿ ಸಸ್ಯಾಹಾರಿ ಊಟವನ್ನೇ ಅಂಬರೀಶ್ ಮಾಡುತ್ತಿದ್ದರಂತೆ ಇದೆ ಹಿನ್ನೆಲೆಯಲ್ಲಿ ಒಂದು ದಿನ ಒಮ್ಮೆ ಅಂಬರೀಶ್ ವಿಷ್ಣು ಅವ್ರಿಗೆ 'ನಿಮ್ಮ ಮನೆಯಲ್ಲಿ ಗುoಡು ತುoಡು ಏನು ಸಿಗಲ್ವಾ..?'  ಅಂತ ಮಾತಿಗೆ ಕೇಳಿ ಬಿಟ್ಟರಂತೆ. ಆಗ ವಿಷ್ಣುವರ್ಧನ್ ಅವರು, ಸ್ನೇಹಿತನಿಗೋಸ್ಕರ ಮರು ದಿವಸವೇ ತಮ್ಮ ಮನೆಯಲ್ಲಿಯೇ ಒಂದು ಪುಟ್ಟ ಬಾರ್ ಕೌoಟರ್ ಅನ್ನು ಮಾಡಿಸಿಯೇ ಬಿಟ್ಟರಂತೆ. ಆದ್ರೆ ಸಾಹಸ ಸಿಂಹ ವಿಷ್ಣುವರ್ಧನ್ ಅವ್ರಿಗೆ ಎಣ್ಣೆ ಹೊಡೆಯುವ  ಅಭ್ಯಾಸವೆ ಇರಲಿಲ್ಲ ಎಂದು ತಿಳಿದುಬಂದಿದೆ. ಏನೇ ಇರಲಿ ನನ್ನ ಪ್ರೀತಿಯ ಸ್ನೇಹಿತ ಕೇಳಿದ ಅನ್ನೋ ಕಾರಣಕ್ಕೆ ತಮ್ಮ ಮನೆಯಲ್ಲಿಯೇ ವಿಷ್ಣು ಅಪ್ಪಾಜಿ ಅವರು,ಬಾರ್ ಕೌಂಟರ್ ಅನ್ನೇ ಓಪನ್ ಮಾಡಿಸಿ ಬಿಡುತ್ತಾರಂತೆ.  

ಈ ಮೇಲಿನ ಘಟನೆಯೇ ನಮ್ಮ ಅಂಬಿ ಹಾಗೂ ವಿಷ್ಣು ಅವರ ಘಾಡವಾದ ಸ್ನೇಹಕ್ಕೆ ಒಂದು ಸಾಕ್ಷಿಯಾಗಿದೆ. ಮತ್ತು 'ನಾನು ಸತ್ತಾಗ ನನ್ನ ಹೆಣವನ್ನ ಹೊರೋದಕ್ಕೆ ಪ್ರಪಂಚದ ಯಾವುದೆ ಮೂಲೆಯಲ್ಲಿದ್ದರು ಸಹ ಅಂಬಿ ಬರುತ್ತಾರೆ.' ಎಂದು ವಿಷ್ಣು ಅವರು ಹೇಳಿದ್ದರು. ಅದರ ಪ್ರಕಾರ ಕುಚಿಕು ಗೆಳೆಯ ಅಂಬರೀಶ್ ಅವರು, ನಟ ವಿಷ್ಣುವರ್ಧನ್ ನಿ*ಧನರಾದಾಗ ಎಲ್ಲಾ ಕಾರ್ಯವನ್ನ ನಮ್ಮ ಅಂಬರೀಶ್ ಅವರೇ ಮುಂದೆ ನಿಂತು ಗೆಳೆಯನ ಅoತ್ಯ ಸoಸ್ಕಾರ ಮಾಡಿದರು. ಇವರಿಬ್ಬರ ಸ್ನೇಹವೇ ಇಂದಿನ ಪೀಳಿಗೆಗೆ ಮಾದರಿಯಾಗಿದೆ.. ಇದೆ ರೀತಿಯ ಇನ್ನಷ್ಟು ಇಂಟೆರೆಸ್ಟಿಂಗ್ ಸುದ್ದಿಗಳನ್ನ ಓದಲು, ನಮ್ಮ ಪೇಜನ್ನು ಇಂದೇ ಲೈಕ್ ಮಾಡಿ. ನಮ್ಮ ಕನ್ನಡ ಚಿತ್ರಗಳ ಬಗ್ಗೆ ಕನ್ನಡ ನಟ ನಟಿಯರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ಮಾಹಿತಿಯನ್ನ ಶೇರ್ ಮಾಡಿ ಧನ್ಯವಾದಗಳು...