Yash : ಯಶ್ ಅವ್ರ ಈ ಸ್ಫೂರ್ತಿದಾಯಕ ಮಾತುಗಳನ್ನು ಒಮ್ಮೆ ಕೇಳಿ: ನೀವು ಯಶಸ್ಸಿನ ಮೆಟ್ಟಲನ್ನು ಏರುವಿರಿ
Updated:Friday, June 3, 2022, 09:12[IST]

ರಾಕಿಂಗ್ ಸ್ಟಾರ್ ಯಶ್ ಇಂದು ಕನ್ನಡ ಇಂಡಸ್ಟ್ರಿಯನ್ನು ಮತ್ತೊಂದು ಲೆವೆಲ್ ಗೆ ತೆಗೆದುಕೊಂಡು ಹೋಗಿದ್ದಾರೆ. ಇಂಟರ್ ನ್ಯಾಷನಲ್ ಹೀರೋ ಆಗಿರುವ ಯಶ್, ಕೆಜಿಎಫ್ ಮೂಲಕ ತಮ್ಮ ವರ್ಚಸ್ಸನ್ನು ಡಬ;ಲ್ ಮಾಡಿಕೊಂಡಿರುವುದಲ್ಲದೇ, ಕನ್ನಡವನ್ನು ಉತ್ತುಂಗಕ್ಕೆ ತೆಗೆದು ಕೊಂಡು ಹೋಗಿದ್ದಾರೆ. ಕಾಲಿವುಡ್, ಬಾಲಿವುಡ್ ಮಾತ್ರವಲ್ಲದೇ, ಹಾಲಿವುಡ್ ಕೂಡ ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಆದರೆ ಯಶ್ ಅವರು ಈ ಹಿಂದೆಯೇ ಕನ್ನಡವನ್ನು ಬೇರೊಂದು ಲೆವೆಲ್ ಗೆ ಕೊಂಡೊಯ್ಯಬೇಕು ಎಂದಿದ್ದರು. ಇದೀಗ ಆ ಮಾತನ್ನು ನಿಜ ಮಾಡಿ ತೋರಿಸಿದ್ದಾರೆ.
ಎಲ್ಲೇ ಹೋದರೂ ಡೌನ್ ಟು ಅರ್ಥ್ ಆಗಿರುವ ಯಶ್ ಅವರು, ಎಲ್ಲಿಯೂ ಸ್ಟಾರ್ ಗಿರಿ ಯನ್ನು ತೋರಿಸುವುದಿಲ್ಲ. ಯಶ್ ಅವರ ಸರಳತೆಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರೂ ಇಂದಿಗೂ ಯಶ್ ಅವರು ಸಾಮಾನ್ಯ ನಟರಂತೆಯೇ ನಡೆದುಕೊಳ್ಳುತ್ತಾರೆ. ಕನ್ನಡ ಚಿತ್ರರಂಗ ಇನ್ನೊಂದು ಲೆವಲ್ ಗೆ ಹೋಗುತ್ತದೆ. ಇದು ಜಸ್ಟ್ ಬಿಗಿನಿಂಗ್ ಅಷ್ಟೇ ಎಂದು ಅದೊಂದು ದಿನ ವೇದಿಕೆಯಲ್ಲಿ ಹೇಳಿದ್ದರು. ಆ ಮಾತನ್ನು ಇಂದು ಯಶ್ ಅವರು ನಿಜ ಮಾಡಿದ್ದಾರೆ.
ಯಶ್ ಅವರು ಅಂದು ಆಡಿದ ಮಾತುಗಳನ್ನು ಕೇಳಿ ಹಲವರು ಇದು ಸಾಧ್ಯನಾ ಎಂದು ಮಾತನಾಡಿಕೊಂಡಿದ್ದರು. ಆದರೆ ಆ ಮಾತನ್ನು ಇಂದು ನಿಜ ಮಾಡಿದ್ದಾರೆ, ಇನ್ನು ಅವರ ಹಲವು ಸ್ಫೂರ್ತಿದಾಯಕ ಭಾಷಣಗಲಲ್ಲಿ ಈ ಮಾತನ್ನು ನೀವು ಕೇಳಲೇ ಬೇಕು.
ಒಂದು ಸಿನಿಮಾ ಹಿಟ್ ಮಾಡಬೇಕು ಎಂದು ಕೆಲಸ ಮಾಡಲಿಲ್ಲ ನಾನು. ನಮ್ಮ ಕನ್ನಡ ಇಂಡಸ್ಟ್ರಿಗೆ ಕೆಲಸ ಮಾಡಿದ್ದೇನೆ. ಕನ್ನಡ ಇಂಡಸ್ಟ್ರಿಯನ್ನ ನೆಕ್ಸ್ಟ್ ಲೆವಲ್ ಗೆ ತೆಗೆದುಕೊಂಡು ಹೋಗ್ಬೇಕು ಎಂದು ನಾನು ಕೆಲಸ ಮಾಡಿದ್ದೀನಿ. ಇದು ಜಸ್ಟ್ ಬಿಗಿನಿಂಗ್ ಅಷ್ಟೇ. ಇನ್ನೂ ಮುಂದೆ ಕಾದು ನೋಡಿ. ನಮ್ಮ ಕನ್ನಡ ಸಿನಿಮಾ ಇನ್ನೊಂದು ಮಟ್ಟಕ್ಕೆ ಹೋಗುತ್ತದೆ ಎಂದು ಹೆಮ್ಮೆಯಿಂದ ಹೇಳಿದ್ದರು. ( video credit :team yash fc )