ಬಿಗ್ಬಾಸ್ ಲೋಕೇಶ್ ಅಂದು ಯಾಕೆ ಪೇಪರ್ ಆಯ್ದು, ಭಿಕ್ಷೆ ಬೇಡಿದ್ದರು ಗೊತ್ತಾ..? ಕಣ್ಣೀರು ತರಿಸುತ್ತೆ ಈ ಸ್ಟೋರಿ

By Infoflick Correspondent

Updated:Tuesday, August 9, 2022, 11:52[IST]

ಬಿಗ್ಬಾಸ್ ಲೋಕೇಶ್ ಅಂದು ಯಾಕೆ ಪೇಪರ್ ಆಯ್ದು, ಭಿಕ್ಷೆ ಬೇಡಿದ್ದರು ಗೊತ್ತಾ..? ಕಣ್ಣೀರು ತರಿಸುತ್ತೆ ಈ ಸ್ಟೋರಿ

ಯಾರ ಜೀವನ ಯಾವಾಗ ಹೇಗೆ ಬದಲಾಗುತ್ತದೆ ಎಂದು ನಾವು ಏನನ್ನು ಹೇಳಲು ಸಾಧ್ಯವಿಲ್ಲ, ಈ ಜೀವನವೇ ಒಂದು ಚಕ್ರ ಇದ್ದಂತೆ. ಇಂದು ಏನು ಇಲ್ಲದವ ನಾಳೆ ಕೋಟ್ಯಾಧಿಪತಿ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಅವನ ಪರಿಶ್ರಮದ ಹಿಂದೆ ಪ್ರತಿಫಲ ಕೂಡ ಇದ್ದೇ ಇರುತ್ತದೆ ಎನ್ನುವುದಕ್ಕೆ ಈಗಾಗಲೇ ಸಾಕಷ್ಟು ಜನರು ಕಲಾವಿದರು ನಿದರ್ಶನಕ್ಕೆ ಒಳಗಾಗಿದ್ದಾರೆ. ತುಮಕೂರು ಜಿಲ್ಲೆ ಶಿವಗಂಗೆಯ ನಟ ಲೋಕೇಶ್ ಅವರ ಬಗ್ಗೆ ನಿಮಗೆಷ್ಟು ಗೊತ್ತು. ಕಾಮಿಡಿ ಕಿಲಾಡಿಗಳು ಎಂಬ ವೇದಿಕೆ ಮೂಲಕ ನಟ ಲೋಕೇಶ್ ಅವರು ಕನ್ನಡಿಗರ ಮನೆ ಮಾತಾಗಿದ್ದರು. ಈಗ ಬಿಗ್ಬಾಸ್ ನಲ್ಲಿ ಕಾಣಿಸಿಕೊಂಡಿರುವ ನಟ ಲೋಕೇಶ್ ಅವರ ಬಾಲ್ಯ ಜೀವನ ಆದೆಷ್ಟು ಕಷ್ಟಕರ ಮುಳ್ಳಿನ ಹಾದಿಯಾಗಿತ್ತು ಎಂದರೆ, ನಿಜಕ್ಕೂ ಅವರು ಹೇಳಿದ್ದು ಎಲ್ಲವನ್ನು ಕೇಳಿದಾಗ ಕಣ್ಣಂಚಲಿ ನೀರು ಬಂದವು.

ಸುದೀಪ್ ಅವರ ಮುಂದೆ ನಟ ಲೋಕೇಶ್ ಅವರು ನಾನು ನಡೆದುಕೊಂಡ ಬಂದ ದಾರಿ ತುಂಬಾನೇ ಕಠಿಣವಾಗಿತ್ತು ಸರ್, ನಮ್ಮ ತಂದೆಗೆ ಮೊದಲನೇ ಹೆಂಡತಿ ತೀರಿ ಹೋದರು. ನಮ್ಮಪ್ಪನ ಎರಡನೆ ಹೆಂಡತಿಯ ಮಗ ನಾನೆ. ಅಂದು ನಾನು ಹುಟ್ಟಿದ ಬಳಿಕವೇ ನನ್ನ ತಾಯಿ ಬುದ್ಧಿಭ್ರಮಣೆ ಆಗಿದ್ದನ್ನು ಖಂಡಿಸಿ ನನ್ನ ತಂದೆ ಇಬ್ಬರನ್ನು ಹೊರಗಟ್ಟಿದ್ದರು. ಎಂಟನೇ ವರ್ಷದಲ್ಲಿದ್ದಾಗಲೇ ನಾನು ಬೆಂಗಳೂರಿಗೆ ಬಂದೇ, ಕಬ್ಬನ್ ಪಾರ್ಕ್, ಲಾಲ್ಬಾಗ್ನಲ್ಲಿ ಪೇಪರ್ ಆಯಿದುಕೊಂಡು ಭಿಕ್ಷೆ ಬೇಡಿದ್ದೇನೆ, ಲಾಲ್ ಬಾಗ್ ರಸ್ತೆಗಳಲ್ಲಿ ಕೂಡ ಕಸಗುಡಿಸಿ ತುಂಬಾ ಕಷ್ಟ ಪಟ್ಟಿದ್ದೇನೆ ಸರ್, ಹಾಗೆ ರೇಲ್ವೆ ಸ್ಟೇಶನ್ ಅಲ್ಲೂ ಸಹ ಕಸ ಹೊಡೆದಿದ್ದೇನೆ, ನಾನು ಇಂದು ಇಲ್ಲಿಗೆ ಬಂದಿದ್ದೇನೆ ಎಂದರೆ ಅದಕ್ಕೆ ಡಾನ್ ಬಾಸ್ಕೋ ಸಂಸ್ಥೆಯೇ ಕಾರಣ. ಅವರು ನನ್ನನ್ನು ಕರೆದುಕೊಂಡು ಹೋಗಿ ನೋಡಿಕೊಂಡರು. 

ನನಗೆ ಬಾಯಿ ಬಿಡದೆನೆ ನಟನೆ ಮಾಡುವುದು ತುಂಬಾ ಇಷ್ಟ. ಚಾರ್ಲಿ ಚಾಪ್ಲಿನ್ ತರ ನಟನೆ ಮಾಡುವುದು ಇಷ್ಟ ಮೂಕನಾಗಿ ನಟನೆ ಮಾಡೋದು ಇಷ್ಟ, ಡೈಲಾಗ್ ಇಲ್ಲದೆ ನಟಿಸೋದು ಇಷ್ಟ ಎಂದಾಗ ಸುದೀಪ್ ಅವರು ನೀವು ಒಂದು ದಿನದ ಮಟ್ಟಿಗೆ ಬಿಗ್ಬಾಸ್ ಮನೆಯಲ್ಲಿ ಮೂಕನಾಗಿ ಇರಬೇಕು ಎಂದರು, ಅದರಂತೆ ಎಲ್ಲರೂ ಕೂಡ ಸ್ಪರ್ಧಿಗಳು ಲೋಕೇಶ್ ಮೂಕರೆ ಇರಬಹುದು ಎಂದು ನಂಬಿದ್ದು ನೀವು ನೋಡಿದ್ದೀರಾ. ಹೌದು ನಟ ಲೋಕೇಶ್ ಅವರು ತುಂಬಾನೇ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಪೇಂಟರ್, ನಟನೆ, ಮಿಮಿಕ್ರಿ ಮಾಡುವುದು ಅವರಿಷ್ಟವಂತೆ. ನನಗೆ ಯಾವ ಕ್ಯಾರೆಕ್ಟರ್ ಕೊಟ್ಟರು ಕೂಡ ನಾನು ಅಭಿನಯ ಮಾಡಲಿಕ್ಕೆ ಸಿದ್ದ ಸರ್, ಆದರೆ ಪೇಮೆಂಟ್ ಇರಬೇಕು ಅಷ್ಟೇ, ಇಂಟರ್ ಓದುವಾಗ ನನ್ನ ಪತ್ನಿ ಸಿಕ್ಕಳು, ಮಕ್ಕಳು ಎಂದರೆ ನನಗೆ ಅತೀವ ಪ್ರೀತಿ. ನಟನೆಗೆ ಪೇಮೆಂಟ್ ಇರಬೇಕು, ಕಾರಣ ನಾವು ಜೀವನ ಮಾಡುತ್ತಿರುವುದು ಅಭಿನಯದಿಂದಲೇ, ಪೇಮೆಂಟ್ ಬಂದ್ರೆ ಅಲ್ವಾ ನಮಗೆ ಜೀವನ ಸಾಗಿಸುವುದಕ್ಕಾತ್ತದೆ ಎಂದು ಹೇಳಿಕೊಂಡಿದ್ದಾರೆ..

ಎನೆ ಇರಲಿ ನಟ ಲೋಕೇಶ್ ಅವರು ಕಾಮಿಡಿ ಕಿಲಾಡಿಗಳು ಮೂಲಕ ಜನಪ್ರಿಯತೆ ಪಡೆದಿರುವ ನಟ. ಇನ್ನೂ ಎತ್ತರಕ್ಕೆ ಬಿಗ್ ಬಾಸ್ ಮೂಲಕ ಬೆಳೆಯಲಿ ಎಂದು ಎಲ್ಲರೂ ಸಹ ಶುಭಕೋರಿ ಧನ್ಯವಾದಗಳು..