ಅಪ್ಪು ಅವರಂತೆಯೇ ಇರುವ ಅವಳಿ ಮಕ್ಕಳ ಬಗ್ಗೆ ದೃತಿ ಹೇಳಿದ್ದೇನು ಗೊತ್ತಾ..? ಕಣ್ಣೀರಿಟ್ಟ ಅಶ್ವಿನಿ ವಿಡಿಯೋ..!

By Infoflick Correspondent

Updated:Wednesday, April 13, 2022, 14:17[IST]

ಅಪ್ಪು ಅವರಂತೆಯೇ ಇರುವ ಅವಳಿ ಮಕ್ಕಳ ಬಗ್ಗೆ ದೃತಿ ಹೇಳಿದ್ದೇನು ಗೊತ್ತಾ..? ಕಣ್ಣೀರಿಟ್ಟ ಅಶ್ವಿನಿ ವಿಡಿಯೋ..!

ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈಗಾಗಲೇ ನಮ್ಮಿಂದ ದೈಹಿಕವಾಗಿ ದೂರವಾಗಿ ಐದು ತಿಂಗಳು ಕಳೆದಿದೆ. ಈಗಲೂ ಕೂಡ ನಟ ಪುನೀತ್ ಅವರ ನೆನಪುಗಳು ಸದಾ ಹೆಚ್ಚು ಕಾಡುತ್ತಿದೆ ಎಂದು ಹೇಳಬಹುದು. ಪುನೀತ್ ಅವರ ಒಳ್ಳೆ ಕೆಲಸಗಳು, ಅವರ ಮಾಡಿರುವಂತಹ ಸಮಾಜಸೇವೆ, ಇಡೀ ಸಿನಿಮಾರಂಗಕ್ಕೆ ಅವರು ಕೊಟ್ಟ ಕೊಡುಗೆ ಅಷ್ಟಿಷ್ಟಲ್ಲ. ಪುನೀತ್ ಅವರು ಡ್ಯಾನ್ಸ್ ಮಾಡಲು ನಿಂತರೆ ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯೇ ನಿಂತು ತಿರುಗಿ ನೋಡುವಂತಿರುತ್ತಿತ್ತು. ಅಷ್ಟರಮಟ್ಟಿಗೆ ಪುನೀತ್ ಡ್ಯಾನ್ಸ್ ಮಾಡುತ್ತಿದ್ದರು. ಕರ್ನಾಟಕದ ಮೈಕಲ್ ಜಾಕ್ಸನ್ ಎಂದೇ ಅವರನ್ನ ಕರೆಯುತ್ತಿದ್ದರು. ಪುನೀತ್ ರಾಜಕುಮಾರ್ ಅವರ ಅಗಲಿಕೆ ಆದ ಬಳಿಕ ಒಂದೊಂದೇ ವಿಚಾರಗಳು ಈಗೀಗ ಎಲ್ಲರಿಗೂ ತಿಳಿದಿವೆ. 

ಅವರ ಕೆಲವೊಂದಿಷ್ಟು ಫೋಟೋಗಳು ವೈರಲ್ ಆಗುತ್ತಿವೆ. ಪುನೀತ್ ಅವರಂತೆ, ಪುನೀತ್ ಅವರನ್ನೇ ಹೋಲುವ ಎರಡು ಮುದ್ದಾದ ಮಕ್ಕಳ ಫೋಟೋಗಳು ಸಹ ಕಳೆದ ವಾರದಿಂದ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿವೆ. ಎರಡು ಅವಳಿ ಜವಳಿ ಮಕ್ಕಳುಗಳು ತೆಟ್ ಸಣ್ಣ ವಯಸ್ಸಿನಲ್ಲಿ ಅಪ್ಪು ಇದ್ದ ಹಾಗೇನೇ ಇದ್ದಾವೆ. ಈ ಎರಡು ಮಕ್ಕಳ ಫೋಟೋಗಳು ವೈರಲ್ ಆಗುತ್ತಿದ್ದಂತೆ ಪುನೀತ್ ಅವರ ಹಿರಿಯ ಮಗಳು ದೃತಿ ವಿದೇಶದಲ್ಲಿದ್ದು ಅವರ ಗಮನಕ್ಕೂ ಕೂಡ ಬಂದಿದೆ ಎನ್ನಲಾಗುತ್ತಿದೆ. ಬಳಿಕ ಮಕ್ಕಳ ಫೋಟೋಗಳನ್ನು ನೋಡಿ ಖುಷಿ ಪಟ್ಟಿದ್ದು, ಅಪ್ಪನ ರೀತಿ ಇರುವ ಈ ಮುದ್ದು ಮಕ್ಕಳು ಎಷ್ಟು ಚೆನ್ನಾಗಿದ್ದಾರೆ ಎಂದು ಹಾಡಿ ಹೊಗಳಿದ್ದಾರಂತೆ.     

ಬಳಿಕ ಅವರ ತಾಯಿಗೆ ಫೋನ್ ಮಾಡಿರುವ ದೃತಿ ಅವರು ಮಕ್ಕಳ ಬಗ್ಗೆ ಕುರಿತು ಹಾಗೂ ಅಪ್ಪು ಕುರಿತು ಕೆಲವೊಂದು ಅನಿಸಿಕೆಗಳನ್ನು ಸಹ ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅಸಲಿಗೆ ದೃತಿ ಈ ಬಗ್ಗೆ ಹೇಳಿದ್ದೇನು ಗೊತ್ತಾ..? ಈ ಲೇಖನದ ಕೊನೆಯಲ್ಲಿರುವ ವಿಡಿಯೋವನ್ನು ಪೂರ್ತಿಯಾಗಿ ನೋಡಿ.  ನಿಜಕ್ಕೂ ದೃತಿ ಹೇಳಿರುವ ಮಾತುಗಳು ನಿಮ್ಮ ಕಣ್ಣಂಚಲ್ಲಿ ನೀರು ತರಿಸುತ್ತವೆ. ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೇನೇ ವಿಡಿಯೋವನ್ನು ಶೇರ್ ಮಾಡಿ...(video credit ;kannada taja suddi )