ನಿರೂಪಕಿ ಮಹಾಲಕ್ಷ್ಮಿ ಎರಡನೇ ಮದುವೆಗೂ ಮುನ್ನ ರವೀಂದರ್ ಗೆ ಈ‌ ಒಂದು ಷರತ್ತು ಹಾಕಿದ್ದರಂತೆ ! ಏನದು ನೋಡಿ ?

By Infoflick Correspondent

Updated:Sunday, September 11, 2022, 09:56[IST]

ನಿರೂಪಕಿ ಮಹಾಲಕ್ಷ್ಮಿ ಎರಡನೇ ಮದುವೆಗೂ ಮುನ್ನ ರವೀಂದರ್ ಗೆ ಈ‌ ಒಂದು ಷರತ್ತು ಹಾಕಿದ್ದರಂತೆ ! ಏನದು ನೋಡಿ ?

ಲಿಬ್ರಾ ಪ್ರೊಡಕ್ಷನ್ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರು ಕೆಲವು ದಿನಗಳ ಹಿಂದೆ ಕಿರುತೆರೆ ನಟಿ ಮಹಾಲಕ್ಷ್ಮಿ ಅವರನ್ನು ವಿವಾಹವಾಗಿದ್ದಾರೆ. ಇಬ್ಬರಿಗೂ ಇದು 2ನೇ ಮದುವೆಯಾಗಿದೆ. ಮದುವೆಗೂ ಮುನ್ನ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರಿಗೆ ಮಹಾಲಕ್ಷ್ಮೀ ಹಾಕಿದ ಷರತ್ತು ಇದೀಗ ಬಹಿರಂಗವಾಗಿದೆ.

ಮಹಾಲಕ್ಷ್ಮಿ ಈ ಹಿಂದೆ ಅನಿಲ್ ಎಂಬಾತನನ್ನು ಮದುವೆಯಾಗಿದ್ದು, ಒಬ್ಬ ಮಗನಿದ್ದಾನೆ. ನಂತರ ಇಬ್ಬರೂ ಬೇರ್ಪಟ್ಟರು. ಈ ನಡುವೆ ಮಹಾಲಕ್ಷ್ಮಿ ಮತ್ತು ರವೀಂದರ್ ಇಬ್ಬರೂ ಕೆಲ ದಿನಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.   

ಸಂದರ್ಶನದಲ್ಲಿ ರವೀಂದರ್ ಚಂದ್ರಶೇಖರನ್ ತನ್ನನ್ನು ಮದುವೆಯಾಗಲು ಮಹಾಲಕ್ಷ್ಮಿ ಹಾಕಿದ್ದ ಷರತ್ತಿನ ಬಗ್ಗೆ ತಿಳಿಸಿದ್ದಾರೆ. ಈಗಾಗಲೇ 8 ವರ್ಷದ ಮಗು ಇರೋ ಮಹಾಲಕ್ಷ್ಮಿ ನನಗೆ ಮತ್ತೊಂದು ಮಗು ಬೇಕು ಎಂದು ಕೇಳಿದ್ದರಂತೆ. ನನಗೆ ಮಗು ಬೇಕೇ ಬೇಕು ಎಂದು ಒಪ್ಪಿಕೊಂಡ್ರೆ ಮಾತ್ರ ಮದುವೆಯಾಗೋದಾಗಿ ರವೀಂದ್ರಗೆ ಮಹಾಲಕ್ಷ್ಮಿ ಷರತ್ತು ಹಾಕಿದ್ದರಂತೆ ಇದಕ್ಕೆ ರವೀಂದರ್ ಕೂಡಲೇ ಷರತ್ತನ್ನು ಒಪ್ಪಿಕೊಂಡಿದ್ದಾರೆ.

ಇದೀಗ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ರವೀಂದರ್, ಜೀವನದಲ್ಲಿ ನಿರಾಸೆಯಾಗಿದ್ದ ನನಗೆ ದೇವರು  ನನಗಾಗಿ  ನಿನ್ನನ್ನು ಕಳುಹಿಸಿದ್ದಾನೆ ಎಂದು ಬರೆದುಕೊಂಡಿದ್ದಾರೆ.