Darshan : ದರ್ಶನ್ ಮುಂದಿನ 56ನೆ ಸಿನಿಮಾಗೆ ನಟಿ ಇವರೇ ಫಿಕ್ಸ್..! ಯಾರು ನೋಡಿ ?

By Infoflick Correspondent

Updated:Friday, August 5, 2022, 12:17[IST]

Darshan : ದರ್ಶನ್ ಮುಂದಿನ 56ನೆ ಸಿನಿಮಾಗೆ ನಟಿ ಇವರೇ ಫಿಕ್ಸ್..! ಯಾರು ನೋಡಿ ?

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ 56ನೇ ಸಿನಿಮಾ ಇಂದು ಲಾಂಚ್ ಆಗಲಿದ್ದು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸಿನಿಮಾದ ಟೈಟಲ್ ಮತ್ತು ದರ್ಶನ್ ಅವರಿಗೆ ಯಾರು ನಾಯಕಿ ಆಗಲಿದ್ದಾರೆ ಎಂದು ಚಿತ್ರತಂಡ ಬಹಿರಂಗಪಡಿಸಿದೆ. ಹೌದು ದರ್ಶನ್ ಅವರ ಈ 56ನೇ ಸಿನಿಮಾಗೆ ರಾಕ್ ಲೈನ್ ವೆಂಕಟೇಶ್ ಅವರು ಬಂಡವಾಳ ಹೂಡಿದ್ದಾರೆ. ಜೊತೆಗೆ ತರುಣ್ ಸುಧೀರ್ ಅವರ ನಿರ್ದೇಶನ ಸಿನಿಮಾಕ್ಕೆ ಇದ್ದು ಇದು ಇನ್ನೊಂದು ದೊಡ್ಡ ಮೈಲುಗಲ್ಲು ಸಿನಿಮಾ ಎನ್ನಲಾಗಿ ತಿಳಿದು ಬಂದಿದೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿ ಅವರ ಮುಂದಿನ ಚಿತ್ರಕ್ಕೆ ಯಾರು ಎಂಬುದಾಗಿ ಕೆಲವು ದಿನಗಳಿಂದ ತುಂಬಾ ಚರ್ಚೆ ಆಗುತ್ತಿತ್ತು ಬೇರೆ ಬೇರೆ ನಾಯಕಿಯರ ಹೆಸರು ಹೆಚ್ಚಾಗಿಯೇ ಮುಂಚೂಣಿಯಲ್ಲಿತ್ತು.  

ಆದರೆ ಇದೀಗ ತಿಳಿದು ಬಂದಿರುವ ಮಾಹಿತಿ ಪ್ರಕಾರ ನಟ ದರ್ಶನ್ ಅವರ 56ನೇ ಸಿನಿಮಾಗೆ ನಾಯಕಿಯಾಗಿ ಕನ್ನಡ ಚಿತ್ರರಂಗದ ಕನಸಿನ ರಾಣಿ ನಟಿ ಮಾಲಾಶ್ರೀ ಅವರ ಪುತ್ರಿ ಅವರು ನಟಿಯಾಗಿ ಎಂಟ್ರಿ ನೀಡಿದ್ದಾರೆ. ಕೆಲ ದಿನಗಳಿಂದ ನಟಿ ಮಾಲಾಶ್ರೀ ಅವರ ಪುತ್ರಿ ಅನನ್ಯ ರಾಮು ಅವರನ್ನು ಸಿನಿಮಾರಂಗಕ್ಕೆ ಪರಿಚಯ ಮಾಡಬೇಕು ಎಂದು ಸಾಕಷ್ಟು ನಿರ್ದೇಶಕರು ಹೆಚ್ಚು ಬಾರಿ ವೇದಿಕೆ ಮೇಲೆ ಹೇಳಿಕೊಂಡರು. ಆದರೆ ಯಾರು, ಯಾರ ಜೊತೆ, ಯಾವ ಸಿನಿಮಾದಲ್ಲಿ ಎಂದು ಇಲ್ಲಿಯವರೆಗೆ ತಿಳಿದು ಬಂದಿರಲಿಲ್ಲ. ಆದರೆ ಇಂದು ಡಿ ಬಾಸ್ ಅವರಿಗೆ ರಾಮು ಅವರ ಪುತ್ರಿ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ. ಚಿತ್ರರಂಗಕ್ಕೆ ಪರಿಚಯ ಆಗುತ್ತಿರುವ ನಟಿ ಮಾಲಾಶ್ರೀ ಅವರ ಪುತ್ರಿ ನಿಜವಾದ ಹೆಸರು ಅನನ್ಯ ರಾಮು, ಆದರೆ ಚಿತ್ರರಂಗಕ್ಕೆ ಪರಿಚಯ ಆಗುತ್ತಿರುವುದು ರಾಧನ ರಾಮ್ ಎಂದು ಟಹೇಳಲಾಗಿದೆ.

ಹೌದು ಈಗಾಗಲೇ ಪೂಜೆಯನ್ನು ಆರಂಭಿಸಿರುವ ಇಡೀ ಚಿತ್ರತಂಡ ದರ್ಶನ್ ಅವರ ಮುಂದಿನ ಸಿನಿಮಾವಾದ ಈ ಚಿತ್ರದ ಒಂದು ಪೋಸ್ಟರ್ ಕೊಡ ಲಾಂಚ್ ಮಾಡಲಿದೆ ಎಂದು ಹೇಳಲಾಗುತ್ತಿದೆ. ಹಾಗೆ ಚಿತ್ರತಂಡ ಸಿನಿಮಾಗೆ ಕಾಟೇರ ಮತ್ತು ಚೌಡಯ್ಯ ಎಂಬುದಾಗಿ ಎರಡು ಹೆಸರನ್ನು ಆಯ್ಕೆ ಮಾಡಿಕೊಂಡಿತ್ತು, ಇದರಲ್ಲಿ ಕಾಟೇರ ಬಹುತೇಕ ಕಾಯಂ ಆಗಿದೆಯಂತೆ. ನೀವು ಕೂಡ ದರ್ಶನ್ ಅವರ 56ನೇ ಚಿತ್ರಕ್ಕೆ ಶುಭ ಕೋರಿ, ಹಾಗೆ ಚಿತ್ರಕ್ಕೆ ನಾಯಕಿಯಾಗಿ ಸೆಲೆಕ್ಟ್ ಆಗಿರುವ ಮಾಲಾಶ್ರೀ ಅವರ ಪುತ್ರಿ ಅನನ್ಯ ರಾಮು ಅವರಿಗೆ ಒಳ್ಳೆಯದಾಗಲಿ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು... ( video credit : cini buzz )

Darshan : ದರ್ಶನ್ ಮುಂದಿನ 56ನೆ ಸಿನಿಮಾಗೆ ನಟಿ ಇವರೇ ಫಿಕ್ಸ್..! ಯಾರು ನೋಡಿ ?