Malashree : ಮಾಲಾಶ್ರೀ ಪತಿ ರಾಮು ಅವರಿಗೆ ಇದ್ದಕ್ಕಿದ್ದಂತೆ ಅಂದು ಆಗಿದ್ದೇನು..? ಎಲ್ಲಾ ನೆನೆದು ಕಣ್ಣೀರಿಟ್ಟ ಮಾಲಾಶ್ರೀ

By Infoflick Correspondent

Updated:Saturday, August 6, 2022, 16:27[IST]

Malashree : ಮಾಲಾಶ್ರೀ ಪತಿ ರಾಮು ಅವರಿಗೆ ಇದ್ದಕ್ಕಿದ್ದಂತೆ ಅಂದು ಆಗಿದ್ದೇನು..? ಎಲ್ಲಾ ನೆನೆದು ಕಣ್ಣೀರಿಟ್ಟ ಮಾಲಾಶ್ರೀ

ರಾಮು ಅವರು ಭಾರತೀಯ ಚಲನಚಿತ್ರ ನಿರ್ಮಾಪಕ ಮತ್ತು ವಿತರಕರು ಕನ್ನಡ ಚಿತ್ರರಂಗದಲ್ಲಿ ತಮ್ಮ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದರು. ರಾಮು ನಿರ್ಮಾಣದ ಕೆಲವು ಚಿತ್ರಗಳು ಎಕೆ 47, ಲಾಕಪ್ ಡೆತ್, ಕಲಾಸಿಪಾಳ್ಯ, ಗಂಗಾ ಸಾಗರ್ ಎಂದು ಹೇಳಲಾಗಿದೆ. ಕೋಟಿ ರಾಮು ಅವರು ಕೋವಿಡ್ 19 ಸಂಬಂಧಿತ ತೊಡಕುಗಳಿಂದ ನಿಧನರಾದರು ಎಂದು ತಿಳಿದುಬಂದಿತ್ತು. ಕಳೆದ ವರ್ಷ ಕರೋನಾ ವೇಳೆ ಎಪ್ರಿಲ್ 26ಕ್ಕೆ ಕೋಟಿ ರಾಮು ಅವರು ಸಾವನ್ನಪ್ಪಿದರು. ಹೌದು ಅಸಲಿಗೆ ರಾಮು ಅವರು ತುಂಬಾನೇ ಆರೋಗ್ಯ ವಿಚಾರವಾಗಿ ಎಚ್ಚರಿಕೆಯಿಂದ ಇರುತ್ತಿದ್ದರಂತೆ, ಅದರ ಭಾಗವಾಗಿ ನಟಿ ಮಾಲಾಶ್ರೀ ಅವರು ಕೆಲವೊಂದಿಷ್ಟು ವಿಚಾರಗಳನ್ನು ನಂತರದ ದಿನದಲ್ಲಿ ಹಂಚಿಕೊಂಡರು.

ರಾಮು ಅವರ ಆರೋಗ್ಯದಲ್ಲಿ ಏನಾದರೂ ಏರುಪೇರು ಆಗಿತ್ತಾ ಅಷ್ಟು ಫಿಟ್ ಆರೋಗ್ಯವಾಗಿದ್ದ ರಾಮು ಅವರು ಎಲ್ಲಿ ಎಡವಿದರೂ ಏನು ಮಿಸ್ಟೇಕ್ ಆಯ್ತು ಎಂದು ಒಬ್ಬ ಸಂದರ್ಶನಗಾರ್ತಿ ಮಾಲಾಶ್ರೀ ಅವರಿಗೆ ಸಂದರ್ಶನದಲ್ಲಿ ಪ್ರಶ್ನೆ ಮಾಡಿದ್ದರು. ಆಗ ಮಾಲಶ್ರೀ ಅವರು ಒಂದೊಂದೇ ವಿಚಾರ ಬಿಟ್ಟು ಕಣ್ಣೀರು ಹಾಕದ್ದಾರೆ. ರಾಮು ಆರೋಗ್ಯದಲ್ಲಿ ತುಂಬಾ ಎಚ್ಚರಿಕೆ ತೆಗೆದುಕೊಳ್ಳುತ್ತಿದ್ದರು. ಆದರೆ ಇತ್ತೀಚಿಗೆ ಸ್ಪೈಸಿ ಫುಡ್, ಆಯಿಲಿ ಪದಾರ್ಥಗಳನ್ನು ಹೆಚ್ಚು ತಿನ್ನಲು ಆರಂಭಿಸಿದ್ದರು. ಸಿನಿಮಾಗಳ ನಿರ್ಮಾಣ ವಿಚಾರವಾಗಿ ಅರ್ಜುನ್ ಗೌಡ ಸಮಯದಲ್ಲಿ ಹೆಚ್ಚು ಓಡಾಟ ನಡೆಸಿದ್ದ ರಾಮು ಮನೆಗೆ ಬಂದು ಸುಸ್ತ್ ಎಂದು ಮಲಗುತ್ತಿದ್ದರಂತೆ. ಅದನ್ನು ನಾನು ದೊಡ್ಡ ಮಟ್ಟಕ್ಕೆ ಎಚ್ಚರಿಕೆ ವಹಿಸಲಿಲ್ಲ ಎಂದ ಮಾಲಾಶ್ರೀ, ಹೆಚ್ಚು ಓಡಾಟ ಇರುತ್ತದೆ ಹಾಗಾಗಿ ಆಯಸ್ಸು ಆಗಿರುತ್ತದೆ ಎಂದು ಅಂದುಕೊಂಡಿದ್ದೆ ಎಂದರು.  

ನಂತರದ ದಿನದಲ್ಲಿ ಜ್ವರ ಬಿಟ್ಟು ಬಿಟ್ಟು ಬಂದಿದ್ದು ರಾಮು ಅವರಿಗೆ, ನಮ್ಮ ಫ್ಯಾಮಿಲಿ ಡಾಕ್ಟರ್ ಗೆ ಮೊದಲು ಸುದ್ದಿ ಮುಟ್ಟಿಸಿದೆವು. ಆಗ ಅವರು ಚೆಕಪ್ ಮಾಡಿ ಮೊದಲು ಕೋವಿಡ್ ಟೆಸ್ಟ್ ಮಾಡಲು ಹೇಳಿದರು. ಕೋವಿಡ್ ಸಹ ರಾಮು ಅವರಿಗೆ ಪಾಸಿಟಿವ್ ಆಗಿಯೇ ಬಂದಿತು. ನಂತರ ಆಸ್ಪತ್ರೆಗೆ ದಾಖಲಿಸುವಂತೆ ಹೇಳಿದರು. ಆಸ್ಪತ್ರೆಗೆ ಸೇರಿಸಿ ಕೆಲವೇ ಕೆಲವು ದಿನಗಳಲ್ಲಿ ಇಲ್ಲ ಮೇಡಂ ರಾಮು ಅವರ ಉಸಿರಾಟದ ತೊಂದರೆ ಹೆಚ್ಚಾಗುತ್ತಿದೆ ಅವರನ್ನು ಈಗಲೇ ಐಸಿಯುಗೆ ಸೇರಿಸಬೇಕು ಎಂದಿದ್ದರಂತೆ. ಆಗ ನಟಿ ಮಾಲಾಶ್ರೀ ಅವರಿಗೆ ಫೋನ್ ಮಾಡಿದ ರಾಮು ಅವರು ಅಮ್ಮು ನನಗೆ ತುಂಬಾ ಭಯ ಆಗುತ್ತಿದೆ, ನಿಜಕ್ಕೂ ಏನಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ ಎಂದು ಹೇಳಿದರಂತೆ.

ಆಗ ಮಾಲಾಶ್ರೀ ಅವರು ನೀವು ಅದನ್ನು ಜಯಸಬೇಕು ಧೈರ್ಯವಾಗಿರಿ ನಾನು ಬರುತ್ತೇನೆ ಎಂದು ಹೇಳಿದರಂತೆ. ನೀನು ಬೇಗ ಬಾ ಎಂದ ರಾಮು ಅವರು ನಾನು ಅಂದು ಬೇಗ ಹೋಗಿದ್ದರೆ ಮನೆಗೆ ಕರೆದುಕೊಂಡು ಹೋಗು ಅಮ್ಮು ಎನ್ನುತ್ತಿದ್ದರು ನನಗೆ ಎಂದು ಮಾಲಾಶ್ರೀ ಹೇಳಿದ್ದಾರೆ. ಹಾಗೆ  ನಾನು ಅಲ್ಲಿಗೆ ಅಂದು ಅವರ ಬಳಿ ಹೋಗಿದ್ದರೆ ಮನೆಗೆ ನನ್ನ ಕರೆದುಕೊಂಡು ಹೋಗು ಎನ್ನುತ್ತಿದ್ದರು. ಹಾಗಾಗಿ ನಾನು ಅವರ ಬಳಿ ಹೋಗಲಿಲ್ಲ. ನಂತರದಲ್ಲಿ ಪಿಪಿಟಿ ಕಿಟ್ ಹಾಕಿಕೊಂಡು ಅವರನ್ನು ನೋಡಬೇಕು ಎನ್ನುವ ಹಂತದಲ್ಲಿ ಆಗಲೇ ಡಾಕ್ಟರ್ ಇಲ್ಲ ಮೇಡಂ ರಾಮು ಅವರ ಉಸಿರಾಟ ಕ್ಷೀಣಿಸುತ್ತಿದೆ ಎಂದು ಐಸಿಯುನಿಂದ ಹೇಳಿದರು. ನಂತರದ ಎರಡೇ ದಿನದಲ್ಲಿ ರಾಮು ಅವರು ಇಲ್ಲವಾದರು, ನಿಜಕ್ಕೂ ನನಗೆ ಅಂದು ಏನು ತೋಚಲೇ ಇಲ್ಲ ಎಂದು ಗಂಡನ ನೆನೆದು ಕಣ್ಣೀರು ಹಾಕಿದ್ದಾರೆ ಮಾಲಾಶ್ರೀ. ಹಾಗೆ ಎರಡು ತಿಂಗಳು ರಾಮು ಏನಾದರೂ ಮತ್ತೆ ಬರುತ್ತಾರೆಯೇ ಎಂದು ಅವರ ದಾರಿಯನ್ನು ಎದುರು ನೋಡುವಂತೆ ನನಗೆ ಆಗಿತ್ತು, ಆಸ್ಪತ್ರೆಯಿಂದ ನಾನು ತಪ್ಪಿಸಿಕೊಂಡೆ ಅಮ್ಮ ಎಂದು ಮತ್ತೆ ಹೇಳಿಕೊಂಡು ನನ್ನೆದುರಿಗೆ ಬರುತ್ತಾರೆ ಎಂದುಕೊಂಡೇ ಹೆಚ್ಚು ನಾನು ಯೋಚನೆ ಮಾಡುವಂತಾಯಿತು ಎಂದು ಕಣ್ಣೀರು ಹಾಕಿ ಮಾಲಾಶ್ರೀ ಈ ಎಲ್ಲಾ ವಿಚಾರ ತಿಳಿಸಿದ್ದಾರೆ..