ಜೀವನದಲ್ಲಿ ಮಹತ್ವದ ನಿರ್ಧಾರ ಮಾಡಿದ ಕನಸಿನ ರಾಣಿ ಮಾಲಾಶ್ರೀ : ಏನದು ನೋಡಿ
Updated:Friday, May 6, 2022, 12:45[IST]

ನಟಿ ಮಾಲಾಶ್ರೀ ಪತಿ, ಖ್ಯಾತ ನಿರ್ಮಾಪಕ ಕೋಟಿ ರಾಮು ಅವರು ಕೊರೊನಾ ಸೋಂಕಿನಿಂದ ಕಳೆದ ವರ್ಷ ಏಪ್ರಿಲ್ 26 ನಿಧನರಾದರು. ಕೋಟಿ ರಾಮು ಅವರಿಗೆ ತಮ್ಮ ಮಕ್ಕಳು ಹಾಗೂ ಹೆಂಡತಿ ಎಂದರೆ ಪಂಚಪ್ರಾಣ. ಹಾಗೆಯೇ ನಟಿ ಮಾಲಾಶ್ರೀ ಅವರಿಗೆ ಕೂಡ ಪತಿ ರಾಮು ಅವರೇ ಎಲ್ಲವೂ ಆಗಿದ್ದರು. ಪ್ರಜ್ವಲ್ ದೇವರಾಜ್ ನಟನೆಯ ಅರ್ಜುನ್ ಗೌಡ ಸಿನಿಮಾ ಡಿಸೆಂಬರ್ 31ರಂದು ರಿಲೀಸ್ ಆಯ್ತು. ಸಿನಿಮಾ ರಿಲೀಸ್ ನ ಜವಾಬ್ದಾರಿಯನ್ನು ನಟಿ ಮಾಲಾಶ್ರೀ ಅವರು ಹೊತ್ತಿದ್ದರು.
30ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿರುವ ರಾಮು ಅವರಿಗೆ ಪತ್ನಿ ಮಾಲಾಶ್ರೀಗಾಗಿ ಇನ್ನೆರಡು ಸಿನಿಮಾ ನಿರ್ಮಾಣ ಮಾಡಬೇಕು. ತಾವೇ ಅದರ ನಿರ್ದೇಶನ ಮಾಡಬೇಕು ಎಂಬ ಆಸೆ ಹೊಂದಿದ್ದರು. ಅಲ್ಲದೇ, ತಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉತ್ತಮ ಜೀವನ ಸಾಗಿಸಬೇಕು ಎಂಬ ಆಸೆ ರಾಮು ಅವರದ್ದಾಗಿತ್ತು. ರಾಮು ಅವರು ಇಹಲೋಕ ತ್ಯಜಿಸಿ ಒಂದು ವರ್ಷವಾಗಿದೆ. ಕನ್ನಡ ಸಿನಿಮಾ ರಂಗದಲ್ಲಿ ಬಿಗ್ ಬಜೆಟ್ ಸಿನಿಮಾಗಳ ನಿರ್ಮಾಣದಿಂದಲೇ ಕೋಟಿ ರಾಮು ಎಂದು ಹೆಸರು ಪಡೆದಿದ್ದರು.
ಇಷ್ಟು ದಿನ ಪತಿಯ ಅಗಲಿಕೆ, ಮಕ್ಕಳ ಜವಾಬ್ದಾರಿಗಳನ್ನು ಹೊತ್ತು ಬದುಕಿನ ಬಂಡಿ ಸಾಗಿಸುತ್ತಿದ್ದ ಮಾಲಾಶ್ರೀ ಅವರು ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಅದೇನು ಎಂದು ಕೇಳಿದರೆ ನೀವೆಲ್ಲಾ ಖುಷಿ ಪಡುತ್ತೀರಾ. ನಾಯಕಿಯರು ಸಾಮಾನ್ಯವಾಗಿ ತಮ್ಮ ನಟನೆಯ ಪಾತ್ರಗಳನ್ನು ಬದಲಿಸುತ್ತಾರೆ. ಕಾಲಕ್ಕೆ ತಕ್ಕಂತೆ ನಾಯಕಿ, ಪೋಷಕಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅಲ್ಲದೇ, ಕೇವಲ ಸಿನಿಮಾಗಳಿಗೆ ಮೀಸಲಿರದೇ, ಧಾರಾವಾಹಿಗಳಲ್ಲೂ ನಟಿಸುತ್ತಾರೆ.
ಇದೆಲ್ಲಾ ಈಗ ಯಾಕೆ ಹೇಳುತ್ತಿದ್ದೀನಿ ಅಂದರೆ, ಅದಕ್ಕೆ ಕಾರಣ ಮಾಲಾಶ್ರೀ ಅವರು. ಮಾಲಾಶ್ರೀ ಅವರು ಈಗ ಮತ್ತೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ ಒಂದರಲ್ಲಿ ನಟಿಸುತ್ತಿದ್ದು, ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಸಿನಿಮಾದಲ್ಲಿ ಮಾಲಾಶ್ರೀ ಅವರೇ ನಾಯಕಿ-ನಾಯಕ ಎರಡೂ ಆಗಿದ್ದಾರೆ. ಡಾಕ್ಟರ್ ಪಾತ್ರಕ್ಕೆ ಮಾಲಾಶ್ರೀ ಅವರು ಬಣ್ಣ ಹಚ್ಚಿದ್ದು, ಅದಾಗಲೀ ಸಿನಿಮಾ ಶೂಟಿಂಗ್ ಕೂಡ ಶುರುವಾಗಿದೆ.