ಬಿಟ್ಯಾಕ್ ಮೂಲಕ ಕನ್ನಡಕ್ಕೆ ಬಂದ ಕಣ್ಣೆ ಅದಿರಿಂದಿ ಖ್ಯಾತಿಯ ಮಂಗ್ಲಿ..! ಯಾವ ಚಿತ್ರಕ್ಕೆ ಗೊತ್ತಾ..?

Updated: Friday, April 9, 2021, 19:53 [IST]

ರಾಬರ್ಟ್ ಚಿತ್ರಕ್ಕೆ ದರ್ಶನ್ ನಟನೆಯ ಜೊತೆಗೆ ಹೆಸರು ತಂದುಕೊಟ್ಟಿದ್ದು ಕಣ್ಣೇ ಅದಿರಿಂದಿ ಹಾಡು. ಈ ಹಾಡಿನ ಮೂಲಕ ರಾತ್ರಿ ಬೆಳಗಾಗೋದರಲ್ಲಿ ಪ್ರೇಕ್ಷಕರ ಮನಗೆದ್ದ ಗಾಯಕಿ ಮಂಗ್ಲಿ ಈಗ ಬಿಟ್ಯಾಕ್ ಬಂದೇ ಎನ್ನುತ್ತ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.ರಾಬರ್ಟ್ ತೆಲುಗು ಚಿತ್ರ ರಿಲೀಸ್ ಆಗಿ ಬರೋ ಹೊತ್ತಿಗೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ ಕಣ್ಣೇ ಅದಿರಿಂದಿ ಹಾಡು ಇನ್ನಿಲ್ಲದ ಪ್ರಸಿದ್ಧಿ ಗಳಿಸಿತು. ಎಲ್ಲಿ ನೋಡಿದರೋ ಕಣ್ಣೇ ಅದಿರಿಂದಿ ಹಾಡಿನ ಸದ್ದು ಕೇಳತೊಡಗಿತ್ತು. ಇಂತಹದೊಂದು ಬ್ಯೂಟಿಫುಲ್ ಹಾಡನ್ನು ತಮ್ಮ ಮೆಲೋಡಿಯಸ್ ಧ್ವನಿಯ ಮೂಲಕ ಕಟ್ಟಿಕೊಟ್ಟ ಗಾಯಕಿ ಮಂಗ್ಲಿ ಪ್ರೇಕ್ಷಕರನ್ನು ರಂಜಿಸಿ ಆವರಿಸಿಕೊಂಡು ಬಿಟ್ಟಿದ್ದರು.    

 

ಕಿರುತೆರೆಯ ಸಕತ್ ಫೇಮಸ್ ನಟಿ ಅನುಶ್ರೀ ಮದುವೆ..! ಮದುವೆಯಾಗುತ್ತಿರುವ ಹುಡುಗ ಯಾರ್ ಗೊತ್ತಾ..?

ಇದೀಗ ತೆಲುಗಿನಿಂದ  ಈ ಮೋಡಿ ಮಾಡೋ ಗಾಯಕಿ ಕನ್ನಡಕ್ಕೆ ಕಾಲಿಟ್ಟಿದ್ದು, ಕರಿಯಾ ಅಯ್ ಲವ್ ಯೂ ಚಿತ್ರದ ಮೂಲಕ ಬಿಟ್ ಬಂದ ಹಳ್ಳಿಯಿಂದ ಬಿಟ್ಯಾಕೆ ಬಂದೆ ಎಂಬ ಗ್ರಾಮೀಣ ಸೊಗಡಿನ ಹಾಡಿಗೆ ಮಂಗ್ಲಿ ಧ್ವನಿಯಾಗಿದ್ದಾರೆ. ಹಂಸಲೇಖ ಶಿಷ್ಯ ಲೋಕೇಶ್ ಸಂಗೀತ ಸಂಯೋಜಿಸಿದ  ಈ ಹಾಡಿಗೆ ಮಂಗ್ಲಿ ಜೊತೆಗೆ ನವೀನ್ ಸಜ್ಜು ಧ್ವನಿ ಸೇರಿಸಿದ್ದಾರೆ. ಕರಿಯಾ ಆಯ್ ಲವ್ ಯೂ ಚಲನ ಚಿತ್ರದ ನಾಯಕ ಮಂಜುನಾಥ್ ಮಂಗ್ಲಿಯನ್ನು ಕನ್ನಡ ಚಿತ್ರರಂಗಕ್ಕೆ ಕರೆತಂದಿದ್ದು, ಈಗಾಗಲೇ ಹಾಡಿನ ರೆಕಾರ್ಡಿಂಗ್ ಮುಗಿದಿದೆ. ರಾಹುಕಾಲ್ ನಿರ್ದೇಶಿಸಿದ್ದ ತಿಪ್ಪೇಶ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕರಿಯಾ ಅಯ್ ಲವ್ ಯೂ ಸಂಪೂರ್ಣ ಹೊಸ ರೀತಿಯ ಸಿನಿಮಾ.     

ಹಳ್ಳಿಗಾಡಿನ ಪ್ರೇಮ ಕತೆ ಹೊಂದಿರುವ  ಈ ಸಿನಿಮಾದಲ್ಲಿ ಮಂಜುನಾಥ ನಾಯಕರಾಗಿ ಅಭಿನಯಿಸಿದ್ದು, ಶಕುಂತಲಾ ನಾಯಕಿಯಾಗಿದ್ದಾರೆ. ಹೊಸಬರ ಸಿನಿಮಾದ ಮೂಲಕ ಕಂಚಿನಕಂಠದ ಗಾಯಕಿ ಮಂಗ್ಲಿ ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಕನ್ನಡಿಗರು ಕನ್ನಡಹಾಡನ್ನು ಗಾಯಕಿ ಮಂಗ್ಲಿ ಧ್ವನಿಯಲ್ಲಿ ಎಷ್ಟು ಇಷ್ಟಪಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.