ಗಿಚ್ಚಿಗಿಲಿಗಿಲಿಯಿಂದ ಹೊರನಡೆದ ಮಂಜು ಮತ್ತು ರಿನಾ! ಹೊಸ ನಿರೂಪಕರ ಎಂಟ್ರಿ ಹೇಗಿದೆ ?
Updated:Sunday, May 15, 2022, 10:43[IST]

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಕಿರುತೆರೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. 'ಗಿಚ್ಚಿ ಗಿಲಿಗಿಲಿ' ಶೋನಲ್ಲಿ 'ಬಿಗ್ ಬಾಸ್ ಕನ್ನಡ ಸೀಸನ್ 8' ವಿಜೇತ ಮಂಜು ಪಾವಗಡ, ರೀನಾ ಡಿಸೋಜ ಅವರು ನಿರೂಪಕರಾಗಿದ್ದರು. ಆದರೆ ಇವರಿಬ್ಬರು ಏಕಕಾಲಕ್ಕೆ ಈ ಶೋನಿಂದ ಹೊರಬಂದಿದ್ದಾರೆ.
ಗಿಚ್ಚಿಗಿಲಿಗಿಲಿ ಶೋ ಮೂಲಕ ರೀನಾ ಮೊದಲ ಬಾರಿಗೆ ಮನರಂಜನಾ ವಾಹಿನಿ ಕಡೆ ಮುಖ ಮಾಡಿದ್ದರು. ಆದರೆ ರೀನಾ ನಿರೂಪಣೆಗೆ ಇಲ್ಲಿ ಹೇಳಿಕೊಳ್ಳುವಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಅಲ್ಲದೆ ಮಂಜು ಪಾವಗಡ ಅವರೇ ಹೆಚ್ಚು ವೇದಿಕೆ ಆಕ್ರಮಿಸಿಕೊಳ್ಳುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಈ ನಡುವೆ ಇಬ್ಬರು ದಿಢೀರ್ ಶೋನಿಂದ ಹೊರ ನಡೆದಿರುವುದು ಪ್ರೇಕ್ಷಕರಲ್ಲಿ ಪ್ರಶ್ನೆ ಮೂಡಿದೆ.
ಮಂಜು ಪಾವಗಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ರೀನಾ ಡಿಸೋಜಾ ಸ್ಟಾರ್ ಸ್ಪೋರ್ಟ್ ನಲ್ಲಿ ಬ್ಯುಸಿಯಾಗಿದ್ದಾರೆ ಹಾಗಾಗಿ ಶೋ ಅರ್ಧದಲ್ಲಿಯೇ ಇಬ್ಬರೂ ಹೊರ ನಡೆದಿದ್ದಾರೆ ಎನ್ನಲಾಗುತ್ತಿದೆ. ಇವರಿಬ್ಬರ ಜಾಗಕ್ಕೆ ಮತ್ತೋರ್ವ ನಿರೂಪಕ ಎಂಟ್ರಿ ಕೊಟ್ಟಿದ್ದಾರೆ. ನಿರಂಜನ್ ದೇಶಪಾಂಡೆ ಇನ್ಮುಂದೆ ಈ ಶೋ ನಡೆಸಿಕೊಡಲಿದ್ದಾರೆ.
ಇದೇ ಶೋನಲ್ಲಿ ನಿರಂಜನ್ ಪತ್ನಿ ಯಶಸ್ವಿನಿ ಸ್ಪರ್ಧಿಯಾಗಿ ಭಾಗಿಯಾಗಿದ್ದಾರೆ. ಹಾಗಾಗಿ ಜಡ್ಜ ಸ್ಥಾನದಲ್ಲಿ ಕುಳಿತಿರುವ ಸೃಜನ್ ಲೋಕೇಶ್ ಮತ್ತು ಶ್ರುತಿ ಇಬ್ಬರು ನಿರಂಜನ್ ಕಾಲೆಳೆಯುತ್ತಾರೆ. ಈ ಬಗ್ಗೆ ಮಾತನಾಡಿದ ನಿರಂಜನ್ ಈ ಶೋ ಮುಗಿಯುವ ವರೆಗೂ ನಾನು ಸಿಂಗಲ್ ನನಗೂ ಯಶಸ್ವಿನಿಗೂ ಯಾವುದೇ ಸಂಬಂಧವಿಲ್ಲ. ಹೆಂಡತಿ ಸ್ಕೀಟ್ ಎಂದು ಸುಮ್ಮ ಸುಮ್ಮನೆ ನಗುವುದಿಲ್ಲ. ತಾರತಮ್ಯ ಮಾಡುಬವುದಿಲ್ಲ ಎಂದು ನಿರಂಜನ್ ಹೇಳಿದ್ದಾರೆ.
ಗಿಚ್ಚಿಗಿಲಿಗಿಲಿ ಶೊ ಈಗಾಗಲೇ ಭರ್ಜರಿ ಕಾಮಿಡಿಯಿಂದ ತುಂಬಿದ್ದು ನಿರೂಪಕರಾಗಿ ನಿರಂಜನ್ ಬಂದಿದ್ದು ಕಾಮಿಡಿ ಧಮಾಕಾ ಹೆಚ್ಚಾಗಲಿದೆ . ನಿರಂಜನ್ ಸೃಜನ್ ಇಬ್ಬರ ಜೊಡಿ ಹಾಸ್ಯರಸವನ್ನು ಹೆಚ್ಚಿಸಲಿದೆ ಎಂದು ವೀಕ್ಷಕರು ನಿರೀಕ್ಷಿಸಿದ್ದಾರೆ.