V manohar : ವಿ ಮನೋಹರ್ ಅವರ ಪತ್ನಿಯ ಬಹುದಿನದ ಆಸೆ ಏನು..? ರಾಜ ರಾಣಿ 2 ವೇದಿಕೆ ಮೇಲೆ ಈಡೇರಿತು ನೋಡಿ

By Infoflick Correspondent

Updated:Friday, June 10, 2022, 15:58[IST]

V manohar :  ವಿ ಮನೋಹರ್ ಅವರ ಪತ್ನಿಯ ಬಹುದಿನದ ಆಸೆ ಏನು..? ರಾಜ ರಾಣಿ 2 ವೇದಿಕೆ ಮೇಲೆ ಈಡೇರಿತು ನೋಡಿ

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಮನರಂಜನೆ ನೀಡುವ ಸಕ್ಕತ್ ಕಾರ್ಯಕ್ರಮಗಳು ಪ್ರತಿವಾರ ಪ್ರೇಕ್ಷಕರನ್ನು ರಂಜಿಸುತ್ತಲೇ ಬರುತ್ತಿವೆ. ಹೌದು ಕಲರ್ಸ್ ಕನ್ನಡ ಜೀ ಕನ್ನಡ ಹೀಗೆ ಒಂದಕ್ಕಿಂತ ಒಂದು ಪೈಪೋಟಿ ಎಂಬಂತೆ ಹೆಚ್ಚು ಶೋ ಪ್ರಸಾರವಾಗುತ್ತಿವೆ. ಕನ್ನಡದ ಕಿರುತೆರೆಯಲ್ಲಿ ಪುಟ್ಟ ಮಕ್ಕಳ ಕಾರ್ಯಕ್ರಮ ಒಂದು ಕಡೆ ಆದ್ರೆ, ಡ್ಯಾನ್ಸ್ ಕಾರ್ಯಕ್ರಮ ಕೂಡ ಇನ್ನೊಂದು ಕಡೆ ಭರ್ಜರಿಯಾಗಿ ನಡೆಯುತ್ತಿದೆ ಎಂದು ಹೇಳಬಹುದು. ಸರಿಗಮಪ, ಡ್ರಾಮಾ ಜೂನಿಯರ್ಸ್, ಮತ್ತು ಕಾಮಿಡಿ ಕಿಲಾಡಿಗಳು, ರಾಜರಾಣಿ, ಗಿಚ್ಚಿ ಗಿಲಿ ಗಿಲಿ ಹೀಗೆ ಒಂದಕ್ಕಿಂತ ಒಂದು ಅದ್ಭುತವಾಗಿ ಪ್ರಸಾರವಾಗುತ್ತಿವೆ. ಈಗಾಗಲೇ ಕೆಲವು ಕಾರ್ಯಕ್ರಮಗಳು ಮೊದಲ ಹಂತವನ್ನು ಮುಗಿಸಿದ್ದು ಎರಡನೇ ಸೀಸನ್ ನ್ನು ಸಹ ಪ್ರಾರಂಭಿಸಿವೆ.

ಅದೇ ಸಾಲಿಗೆ ಇದೀಗ ಕಲರ್ಸ್ ಕನ್ನಡದ ಖ್ಯಾತ ರಿಯಾಲಿಟಿ ಶೋ ರಾಜ ರಾಣಿ ಸೀಸನ್-2 ಆರಂಭವಾಗುತ್ತಿದ್ದು, ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 7.30 ಕ್ಕೆ ಗ್ರಾಂಡ್ ಓಪನಿಂಗ್ ಆಗುತ್ತಿದೆಯಂತೆ. ಹೌದು ರಾಜ-ರಾಣಿ ಮೊದಲ ಸೀಸನ್ ನ ವಿನ್ನರ್ ಆಗಿ ಲಕ್ಷ್ಮಿ ಬಾರಮ್ಮ ಖ್ಯಾತಿ ನಟಿ ನೇಹಾ ಮತ್ತು ಚಂದನ್ ವಿಜೇತರಾಗಿ ಹೊರಹೊಮ್ಮಿದ್ದರು. ಇದೀಗ ರಾಜ-ರಾಣಿ ಸೀಸನ್ ಎರಡು ಆರಂಭವಾಗುತ್ತಿದೆ. ಪ್ರೇಕ್ಷಕರು ತುಂಬಾ ದಿನಗಳಿಂದ ಕಾಯುತ್ತಿದ್ದ ಈ ಕಾರ್ಯಕ್ರಮ ಮತ್ತೆ ರಂಗೇರಲು ಸಜ್ಜಾಗಿದೆ. ಹೌದು ರಿಯಲ್ ಜೋಡಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಕನ್ನಡ ಸಿನಿಮಾ ರಂಗದ ಖ್ಯಾತ ಸಂಗೀತ ನಿರ್ದೇಶಕ ವಿ ಮನೋಹರ್ ದಂಪತಿ ಕೂಡ ಆಗಮಿಸಿದ್ದಾರೆ. ಇದರ ಪ್ರಮೋ ವಿಡಿಯೋ ಇದೀಗ ಬಿಡುಗಡೆಯಾಗಿದೆ.  

ವಿ ಮನೋಹರ್ ಅವರು ಕನ್ನಡ ಚಿತ್ರರಂಗದಲ್ಲಿ ಹಂಸಲೇಖ ಅವರನ್ನು ಬಿಟ್ಟರೆ ಅತಿ ಹೆಚ್ಚು ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿರುವ ಖ್ಯಾತಿ ಇವರಿಗಿದೆ ಎನ್ನಬಹುದು. ಇವರ ಹೆಂಡತಿ ವೇಣಿ ಅವರು ಬಹಳ ದಿನಗಳಿಂದ ತನ್ನ ಪತಿ ವಿಚಾರವಾಗಿ ಒಂದು ಮಹದಾಸೆಯ ಹೊಂದಿದ್ದರಂತೆ. ಅದು ಈ ವೇದಿಕೆ ಮೂಲಕವೆ ಈಡೇರಿದೆ ಎಂದು ನಾವು ಹೇಳಬಹುದು. ಟಾಕಿಂಗ್ ಸ್ಟಾರ್ ನಟ ಸೃಜನ್ ಲೋಕೇಶ್ ಮತ್ತು ತಾರಾ ಅವರ ನೇತೃತ್ವದಲ್ಲಿ ಈ ರಾಜ ರಾಣಿ ಶೋ ಮತ್ತೆ ಆರಂಭವಾಗುತ್ತಿದ್ದು ವೇದಿಕೆ ಮೇಲೆ ವಿ ಮನೋಹರ್ ಅವರ ಪತ್ನಿ ವೇಣಿ ಅವರ ಆಸೆಯಂತೆ, ವಿ ಮನೋಹರ್ ಅವರಿಗೆ ತಲೆಗೆ ವಿಗ್ಗನ್ನು ಹಾಕಲಾಗಿದೆ. ಇಲ್ಲಿದೆ ನೋಡಿ ಆ ವಿಡಿಯೋ. ನೀವು ಕೂಡ ರಾಜ-ರಾಣಿ ಸೀಸನ್ 2 ಶೋಗೆ ಕಾಯುತ್ತಿದ್ದರೆ ತಪ್ಪದೇ ಈ ವಿಡಿಯೋ ನೋಡಿ. ಹಾಗೆ ನಿಮ್ಮ ಫೇವರೆಟ್ ಜೋಡಿ ಯಾವುದು ಎಂದು ಕಾಮೆಂಟ್ ಮಾಡಿ ಧನ್ಯವಾದಗಳು...