ಕ್ರೇಜಿಸ್ಟಾರ್‌ ಮಗನ ಮದುವೆಯ ಲಗ್ನಪತ್ರಿಕೆ ಬೆಲೆ ಎಷ್ಟು ಗೊತ್ತಾ..?

By Infoflick Correspondent

Updated:Monday, August 1, 2022, 22:45[IST]

ಕ್ರೇಜಿಸ್ಟಾರ್‌ ಮಗನ ಮದುವೆಯ ಲಗ್ನಪತ್ರಿಕೆ ಬೆಲೆ ಎಷ್ಟು ಗೊತ್ತಾ..?

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುತ್ರನ ಮದುವೆಯ ದಿನ ಹತ್ತಿರವಾಗುತ್ತಿದೆ. ರವಿಚಂದ್ರನ್‌ ಅವರ ಮನೆಯಲ್ಲಿ  ಮದುವೆ ಸಂಭ್ರಮ ಜೋರಾಗಿದೆ. ರವಿಚಂದ್ರನ್ ಅವರ ಹಿರಿಯ ಮಗ ಮನೋರಂಜನ್ ಅವರ ಮದುವೆ ಇದೇ ತಿಂಗಳು ನಡೆಯಲಿದೆ. ಸಂಗೀತಾ ದೀಪಕ್ ಎಂಬುವರ ಜೊತೆಗೆ ಪ್ರಿನ್ಸ್ ಮನೋರಂಜನ್ ಸಪ್ತಪದಿ ತುಳಿಯಲಿದ್ದಾರೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್ನಲ್ಲಿರುವ ವೈಟ್ ಪೆಟಲ್ಸ್ನಲ್ಲಿ ಆಗಸ್ಟ್ 20 ಹಾಗೂ 21 ರಂದು ಮದುವೆ ನಡೆಯಲಿದೆ. ಗ್ರ್ಯಾಂಡ್‌ ಆಗಿ ಮನೋಂಜನ್‌ ಅವರ ಮದುವೆ ಮಹೋತ್ಸವವನ್ನು ನಡೆಸಲು ಕುಟುಂಬ ತೀರ್ಮಾನಿಸಿದೆ. ಇನ್ನು ಮನೋರಂಜನ್‌ ಅವರ ಮದುವೆಯ ಇನ್ವಿಟೇಷನ್‌ ಬೆಲೆ ಎಷ್ಟು ಗೊತ್ತಾ..?    

ಇನ್ನು ಮನೋರಂಜನ್‌ ಅವರು ಕೂಡ ತಂದೆಯಂತೆಯೇ ಸ್ಯಾಂಡಲ್‌ ವುಡ್‌ ನಲ್ಲಿ ಸಕ್ರಿಯರಾಗಿದ್ದಾರೆ. ಸಾಹೇಬ ಚಿತ್ರದ ಮೂಲಕ ಸ್ಯಾಂಡಲ್‌ ವುಡ್‌ ಗೆ ಎಂಟ್ರಿಕೊಟ್ಟರು. ಬಳಿಕ ಬೃಹಸ್ಪತಿ ಚಿತ್ರದಲ್ಲಿ ನಟಿಸಿದರು. ಇತ್ತೀಚೆಗಷ್ಟೇ ಮನೋರಂಜನ್‌ ಅವರು ನಟಿಸಿದ ಮುಗಿಲ್‌ ಪೇಟೆ ಹಾಗೂ ಪ್ರಾರಂಭ ಚಿತ್ರ ಕೂಡ ಬಿಡುಗಡೆಯಾಗಿದೆ. ಇವನ್ನು ಹೊರತುಪಡಿಸಿ, ಮನೋರಂಜನ್‌ ಅವರು ವೆಲೈಯಿಲೈ ಪಟ್ಟಧಾರಿ ಸಿನಿಮಾದಲ್ಲೂ ನಟಿಸಿದ್ದಾರೆ. ಈಗಷ್ಟೇ ಸ್ಯಾಂಡಲ್‌ ವುಡ್ ಗೆ ಪಾದಾರ್ಪಣೆ ಮಾಡಿರುವ ಮನೋರಂಜನ್‌ ಅವರು ಉತ್ತಮ ಬ್ರೇಕ್‌ ಗಾಗಿ ಎದುರು ನೋಡುತ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಅಡಿಯಲ್ಲೇ ಕೆಲಸ ಮಾಡಲಿದ್ದಾರೆ. 

ಇನ್ನು 2019ರಲ್ಲಿ ರವಿಚಂದ್ರನ್ ಅವರ ಮಗಳು ಗೀತಾಂಜಲಿ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದರು. ಮಗಳ ಮದುವೆಗೆ ರಜನಿಕಾಂತ್ ಸೇರಿದಂತೆ ಹಲವು ತಾರೆಯರು ಭಾಗಿಯಾಗಿದ್ದರು. ಇದೀಗ ಮಗನ ಮದುವೆಯನ್ನು ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಿದ್ದಾರೆ. ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಮನೋರಂಜನ್‌ ಮದುವೆಯ ಇನ್ವಿಟೇಷನ್‌ ನದ್ದೇ ಸದ್ದು. ಈ ಮದುವೆ ಲಗ್ನಪತ್ರಿಕೆ ಸಿಕ್ಕಾಪಟ್ಟೆ ಕಾಸ್ಟ್ಲಿಯಾಗಿದ್ದು, ಬರೋಬ್ಬರಿ ೩೦೦೦ ರೂ.ಯಂತೆ. ಒಂದು ಇನ್ವಿಟೇಷನ್‌ ಗೆ ಮೂರು ಸಾವಿರ ರೂಪಾಯಿ ಬೆಲೆಬಾಳುತ್ತದೆ. ಇಷ್ಟು ದೊಡ್ಡ ಮೊತ್ತದ ಇನ್ವಿಟೇಷನ್‌ ಅನ್ನು ಮಗನ ಮದುವೆಗೆ ಪ್ರಿಂಟ್‌ ಮಾಡಿಸಲಾಗಿದ್ದು, ಲಗ್ನಪತ್ರಿಕೆಗೆ ಇಷ್ಟು ಹಣ ಖರ್ಚು ಮಾಡಿರುವಾಗ ಇನ್ನು ಮದುವೆ ಇನ್ನೆಷ್ಟು ಅದ್ಧೂರಿಯಾಗಿ ಮಾಡುತ್ತಾರೆ ಎಂದು ಜನ ಆಶ್ಚರ್ಯ ಪಟ್ಟಿದ್ದಾರೆ.