ಕ್ರೇಜಿಸ್ಟಾರ್ ರವಿಚಂದ್ರನ್ ಮಗನ ಮದುವೆಯ ಕರೆಯೋಲೆ ಹೀಗಿದೆ

By Infoflick Correspondent

Updated:Saturday, July 30, 2022, 16:20[IST]

ಕ್ರೇಜಿಸ್ಟಾರ್ ರವಿಚಂದ್ರನ್ ಮಗನ ಮದುವೆಯ ಕರೆಯೋಲೆ ಹೀಗಿದೆ

ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮದಿವೆ ಸಂಭ್ರಮ ಭರ್ಜರಿಯಾಗಿದೆ‌. ಪ್ರೇಮಲೋಕದ ನಾಯಕನ ಹಿರಿಯ ಮಗ ಮನೋರಂಜನ್ ಮದುಮಗನಾಗಿದ್ದಾನೆ. ಮನೋರಂಜನ್‌ ಮದುವೆಗೆ ರವಿಚಂದ್ರನ್ ಕುಟುಂಬದವರು ಸಕಲ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಮದುವೆಯ ಕುರಿತು ಅಧಿಕೃತ ಮಾಹಿತಿ ರವಿಚಂದ್ರನ್ ಕುಟುಂಬದಿಂದ ದೊರೆತಿಲ್ಲ ಆದರೆ ರವಿಚಂದ್ರನ್ ಮಗ ಮನೋರಂಜನ್ ಮದುವೆ ಆಮಂತ್ರಣ ಪತ್ರಿಕೆ ಫೋಟೊ ವೈರಲ್ ಆಗಿದೆ. ಮಗನ ಮದುವೆ ಪತ್ರಿಕೆ ವಿಶೇಷವಾಗಿ ಮಾಡಿಸಿದ್ದಾರೆ ರವಿಚಂದ್ರನ್.    

ವೈರಲ್ ಆಗಿರುವ ಈ ಮದುವೆ ಆಮಂತ್ರಣಪತ್ರಿಕೆ ಹಲವು ವಿಶೇಷತೆಗಳಿಂದ ಕೂಡಿದೆ. ಪತ್ರಿಕೆಯಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಮಿಂಚಿದ್ದಾರೆ. ಹೃದಯದ ಸಿಂಹಾಸನ ಇರುವ ವಿನ್ಯಾಸದ ಮೇಲೆ ರವಿಚಂದ್ರನ್ ಕುಳಿತಿದ್ದಾರೆ. ಕ್ರೇಜಿಸ್ಟಾರ್ ವಿಭಿನ್ನ ಫೋಟೋವನ್ನು ಇಲ್ಲಿ ಕೆತ್ತಲಾಗಿದೆ. ಸಿಂಹಾಸದನ ಮೇಲೆ ರವಿಚಂದ್ರನ್ ಕುಳಿತರೆ, ಹೃದಯದ ವಿನ್ಯಾಸದಲ್ಲಿ ಮದುಮಗ-ಮದುಮಗಳ ಹೆಸರು ಮತ್ತು ಮದುವೆಯ ಬಗ್ಗೆ ಮಾಹಿತಿ ಇದೆ. ಈ ಪತ್ರಿಕೆಯ ಪ್ರಕಾರ ಆಗಸ್ಟ್ 20 ಮತ್ತು 21ರಂದು ಮದುವೆ ನಡೆಯಲಿದೆ.

ಮೂಲಗಳ ಪ್ರಕಾರ ಮನೋರಂಜನ್ ವೈದ್ಯಕೀಯ ಹಿನ್ನೆಲೆ ಇರುವ ಸಂಗೀತಾ ದೀಪಕ್ ಅವರನ್ನು ವಿವಾಹವಾಗುತ್ತಿದ್ದು, ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ಸ್‌ನಲ್ಲಿ ಮದುವೆ ಅದ್ದೂರಿಯಾಗಿ ನಡೆಯಲಿದೆ. ಪ್ಯಾಲೆಸ್ ಗ್ರೌಂಡ್ಸ್‌ನ ವೈಟ್‌ ಪೆಟಲ್ಸ್‌ನಲ್ಲಿ ಆಗಸ್ಟ್ 21 ಹಾಗೂ 22ರಂದು ಮದುವೆ ನರೆವೇರಲಿದೆ.  ಈಗಾಗಲೇ ಮದುವೆ ಪತ್ರಿಕೆಯನ್ನು ಗಣ್ಯರಿಗೆ ತಲುಪಿಸುವ ಕಾರ್ಯ ಕೂಡ ಶುರುವಾಗಿದೆ.