ಮನೋರಂಜನ್ ಮದುವೆಯಾಗಿರುವ ಹುಡುಗಿ ಯಾರು ಗೊತ್ತಾ..?

By Infoflick Correspondent

Updated:Monday, August 22, 2022, 16:49[IST]

ಮನೋರಂಜನ್ ಮದುವೆಯಾಗಿರುವ ಹುಡುಗಿ ಯಾರು ಗೊತ್ತಾ..?

ಸಾಹೇಬ ಚಿತ್ರದ ಮೂಲಕ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗ ಮನೋರಂಜನ್ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟರು. ಬಳಿಕ ಬೃಹಸ್ಪತಿ ಚಿತ್ರದಲ್ಲಿ ನಟಿಸಿದರು. ಇತ್ತೀಚೆಗಷ್ಟೇ ಮನೋರಂಜನ್ ಅವರು ನಟಿಸಿದ ಮುಗಿಲ್ ಪೇಟೆ ಹಾಗೂ ಪ್ರಾರಂಭ ಚಿತ್ರ ಕೂಡ ಬಿಡುಗಡೆಯಾಗಿದೆ. ಇವನ್ನು ಹೊರತುಪಡಿಸಿ, ಮನೋರಂಜನ್ ಅವರು ವೆಲೈಯಿಲೈ ಪಟ್ಟಧಾರಿ ಸಿನಿಮಾದಲ್ಲೂ ನಟಿಸಿದ್ದಾರೆ. ಈಗಷ್ಟೇ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿರುವ ಮನೋರಂಜನ್ ಅವರು ಉತ್ತಮ ಬ್ರೇಕ್ ಗಾಗಿ ಎದುರು ನೋಡುತ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಡಿಯಲ್ಲೇ ಕೆಲಸ ಮಾಡಲಿದ್ದಾರೆ. ಈ ನಡುವೆಯೇ ಮನೋರಂಜನ್ ಅವರು ಹೊಸ ಜೀವನಕ್ಕೆ ನಾಂದಿ ಹಾಡಿದ್ದಾರೆ. 

ನಿನ್ನೆಯಷ್ಟೇ ಮನೋರಂಜನ್ ಅವರ ವಿವಾಹ ನೆರವೇರಿದೆ. ಸಂಗೀತಾ ಎಂಬಾಕೆಯನ್ನು ಮನೋರಂಜನ್ ಅವರು ವಿವಾಹವಾಗಿದ್ದಾರೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿರುವ ವೈಟ್ ಪೆಟಲ್ ನಲ್ಲಿ ಆಗಸ್ಟ್ 20 ಹಾಗೂ 21 ರಂದು ಮದುವೆ ನಡೆಯಿತು. ಮದುವೆಯನ್ನು ಸಿಂಪಲ್ ಆಗಿ ಮಾಡಿದ್ದರು. ಆದರೆ, ಸೆಲಬ್ರಿಟಿಗಳು ಆಗಮಿಸಿದ್ದರು. ಈ ಮದುವೆಯ ಲಗ್ನಪತ್ರಿಕೆ ಸಿಕ್ಕಾಪಟ್ಟೆ ಕಾಸ್ಟ್ಲಿಯಾಗಿದ್ದು, ಬರೋಬ್ಬರಿ 3000 ರೂ.ಯಂತೆ. ಮದುವೆಗೆ ನಟ ಜಗ್ಗೇಶ್, ಶಿವರಾಜ್ ಕುಮಾರ್, ಸುದೀಪ್, ರಮೇಶ್, ರಾಘವೇಂದ್ರ ರಾಜ್ ಕುಮಾರ್  ಸೇರಿದಂತೆ ಸೆಲಬ್ರಿಟಿಗಳು ಬಂದು ಶುಭಹಾರೈಸಿದ್ದರು. 

ಇನ್ನು ಮನೋರಂಜನ್ ಅವರು ಮ ದುವೆಯಾದ ಹುಡುಗಿ ಯಾರು ಎಂಬ ಕುತೂಹಲ ಸೃಷ್ಟಿಯಾಗಿದೆ. ಮನೋರಂಜನ್ ಅವರು ಸಂಗೀತಾ ರನ್ನು ಪ್ರೀತಿಸಿ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದು ಸುಳ್ಳು ಮನೋರಂಜನ್ ಅವರು ಮನೆಯಲ್ಲಿ ತೋರಿಸಿದ ಹುಡುಗಿಯನ್ನೇ ಮದುವೆಯಾಗಿದ್ದಾರೆ. ಮನೋರಂಜನ್ ಅವರಿಗೆ ಮದುವೆ ಮಾಡುವ ಪ್ರಸ್ತಾಪ ಮಾಡಿದಾಗ, ಮನೆಯಲ್ಲಿ ತೋರಿಸಿದ ಹುಡುಗಿಯನ್ನೇ ಮದುವೆಯಾಗುತ್ತೇನೆ ಎಂದು ಹೇಳಿದ್ದರಂತೆ. ಹಾಗಾಗಿ ರವಿಚಂದ್ರನ್ ಅವರ ದೂರದ ಸಂಬಂಧಿಕರ ಮಗಳನ್ನು ಮನೆಗೆ ತುಂಬಿಸಿಕೊಂಡಿದ್ದಾರೆ.