Manoranjan Ravichandran : ಮೊದಲಬಾರಿಗೆ ಭಾವಿ ಪತ್ನಿಯ ಬಗ್ಗೆ ಮಾತನಾಡಿದ ಮನೋರಂಜನ್ ರವಿಚಂದ್ರನ್ ಹೇಳಿದ್ದೇನು

By Infoflick Correspondent

Updated:Thursday, August 18, 2022, 14:17[IST]

Manoranjan Ravichandran : ಮೊದಲಬಾರಿಗೆ ಭಾವಿ ಪತ್ನಿಯ ಬಗ್ಗೆ ಮಾತನಾಡಿದ ಮನೋರಂಜನ್ ರವಿಚಂದ್ರನ್ ಹೇಳಿದ್ದೇನು

ರವಿಚಂದ್ರನ್ ಇದೀಗ ಹಿರಿಯ ಮಗ ಮನೋರಂಜನ್ ಮದುವೆ ತಯಾರಿ ನಡೆಸುತ್ತಿದ್ದಾರೆ. ಗುರುಹಿರಿಯರು ನೋಡಿ ನಿಶ್ಚಯಿಸಿರುವ ಹುಡುಗಿಯೊಂದಿಗೆ ಇದೇ ತಿಂಗಳು 21, 22 ಹಾಗೂ 23ರಂದು ಮನೋರಂಜನ್ ಹಸೆ ಮಣೆ ಏರುತ್ತಿದ್ದಾರೆ. ಮನೋರಂಜನ್ ಮದುವೆಯ ಕುರಿತು ಹಾಗು ಭಾವಿ ಪತ್ನಿಯ ಕುರಿತು ಇದೇ ಮೊದಲ ಭಾರಿಗೆ ರವಿಚಂದ್ರನ್ ಪುತ್ರ ಮನೋರಂಜನ್ ಮಾತನಾಡಿದ್ದಾರೆ.ಸ್ವಲ್ಪ ದಿನಗಳಿಂದ ನನ್ನ ತಾಯಿ ನನಗೆ ಹುಡುಗಿ ಹುಡುಕುತ್ತಿದ್ದರು. ಸಂಗೀತಾ ಪ್ರಪೋಸಲ್ ಬಂದಾಗ ಅದನ್ನು ಮುಂದುವರೆಸಬಹುದು ಎಂದು ನಿರ್ಧರಿಸಿದರು, ಮೊದಲು ಅಪ್ಪ- ಅಮ್ಮ ಸಂಗೀತಾ ಅವರನ್ನು ಭೇಟಿಯಾದರು, ನಂತರ ಸಂಗೀತಾ ಮತ್ತು ನಾನು ಭೇಟಿಯಾದೆವು ಎಲ್ಲವೂ ಓಕೆಯಾಯಿತು". ಎಂದಿದ್ದಾರೆ ಮನೋರಂಜನ್.

ಸಂಗೀತಾ ತುಂಬಾ ಪ್ರೊಫೆಷನಲ್ ತನಗೆ ಇಷ್ಟವಾದುದ್ದನ್ನು ಮಾಡುತ್ತಾಳೆ ಎಂದು ಭಾವಿ ಪತ್ನಿಯ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದರು. ನಾನು ಸರಳ ವ್ಯಕ್ತಿಯನ್ನು ಬಯಸಿದ್ದೆ ಮತ್ತು ಸಂಗೀತಾ ಅದನ್ನು ಸಾಕಾರಗೊಳಿಸಿದ್ದಾಳೆ. ಅವಳು ನನ್ನ ಮೇಲೆ ಇಟ್ಟಿರುವ ನಂಬಿಕೆ ನನಗೆ ತುಂಬಾ ಇಷ್ಟ ಆಯ್ತು. ನನ್ನ ಪರ ನಿಲ್ಲುತ್ತಾಳೆ ಎನ್ನುವ ನಂಬಿಕೆ ಇದೆ." ಎಂದಿದ್ದಾರೆ.

 "ನನ್ನ ತಂಗಿ ವಿವಾಹವು ಅದ್ಧೂರಿಯಾಗಿತ್ತು, ಏಕೆಂದರೆ ಹುಡುಗಿಯ ಕಡೆಯಿಂದ ನಾವು ಅದನ್ನು ಆ ರೀತಿಯಲ್ಲಿ ಮಾಡಲು ನಿರ್ಧರಿಸಿದ್ದೇವೆ. ಆದರೆ ಸಂಗೀತಾ ಅವರ ಕುಟುಂಬವು ಚಲನಚಿತ್ರಗಳಿಂದ ದೂರವಿದೆ ಮತ್ತು ಕಡಿಮೆ-ಪ್ರೊಫೈಲ್ ಮದುವೆಯನ್ನು ಬಯಸುತ್ತಿದ್ದಾರೆ. ಆದ್ದರಿಂದ ನಾವು ಅವರ ಆಶಯಗಳನ್ನು ಗೌರವಿಸಲು ಬಯಸುತ್ತೇವೆ" ಎಂದು ಹೇಳಿಕೊಂಡಿದ್ದಾರೆ ಮನೋರಂಜನ್.