Manvita Kamath : ಟಗರು ಪುಟ್ಟಿ ಮಾನ್ವಿತಾ ಸಿನಿಮಾದಿಂದ ಇಷ್ಟು ದಿನ ದೂರ ಇದ್ದರೇಕೆ ? ವಿಶೇಷ ವ್ಯಕ್ತಿಗೆ ಮಾತು ಕೊಟ್ಟಿದ್ದರಂತೆ ಈ ನಟಿ !

By Infoflick Correspondent

Updated:Monday, July 11, 2022, 08:36[IST]

Manvita Kamath : ಟಗರು ಪುಟ್ಟಿ ಮಾನ್ವಿತಾ ಸಿನಿಮಾದಿಂದ ಇಷ್ಟು ದಿನ ದೂರ ಇದ್ದರೇಕೆ ? ವಿಶೇಷ ವ್ಯಕ್ತಿಗೆ ಮಾತು ಕೊಟ್ಟಿದ್ದರಂತೆ ಈ ನಟಿ !

ʼಟಗರುʼ ಸಿನಿಮಾ ಮೂಲಕ ಚಂದನವನದಲ್ಲಿ ಭಾರಿ ಹೆಸರು ಗಳಿಸಿದ ನಟಿ ಮಾನ್ವಿತಾ ಹರೀಶ್​ ಇದಾದ ಬಳಿಕ ಒಂದೆರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಆಮೇಲೆ ಮಾನ್ವಿತಾ ಹರೀಶ್​ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿರಲೇ ಇಲ್ಲ. ಟಗರು ಪುಟ್ಟಿ ಅಮ್ಮನಿಗೆ ಕೊಟ್ಟ ಮಾತಿನಂತೆ ತಾವು ಚಿತ್ರರಂಗದಿಂದ ದೂರ ಇದ್ದಿದ್ದಾಗಿ ಹೇಳಿಕೊಂಡಿದ್ದಾರೆ.ತಮ್ಮ ತಾಯಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ ನಟಿ ಮಾನ್ವಿತಾ ತಮ್ಮ ಅಭಿನಯದ ಜೊತೆ ಜೊತೆಗೆ ತಮ್ಮ ವಿದ್ಯಾಭ್ಯಾಸವನ್ನು ಕೂಡ ಮುಂದುವರೆಸಿದ್ದರು. ಈ ಬಗ್ಗೆ ಮಾನ್ವಿತಾ ಪೋಸ್ಟ್ ಹಂಚಿಕೊಂಡಿದ್ದಾರೆ ಹಾಗಿದ್ದರೆ ನಟಿ ಅಮ್ಮನಿಗೆ ಕೊಟ್ಟ ಮಾತೇನು,    

ಮಾನ್ವಿತಾ ಹರೀಶ್​ ಸ್ನಾತಕೋತ್ತರ ಪದವಿ ಪೂರೈಸಬೇಕು ಎನ್ನುವುದು ಅವರ ತಾಯಿಯ ಕನಸಾಗಿತ್ತು. ತಾಯಿಗೆ ಕೊಟ್ಟ ಮಾತಿನಂತೆ ಚಿತ್ರರಂಗದಿಂದ ದೂರ ಉಳಿದಿದ್ದ ನಟಿ ಮಾನ್ವಿತಾ ಇದೀಗ ತಮ್ಮ ಪದವಿಯನ್ನು ಡಿಸ್ಟಿಂಕ್ಷನ್​ ಅಂಕಗಳೊಂದಿಗೆ ಪಾಸ್​ ಆಗುವ ಮೂಲಕ ತಾಯಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಶೇರ್​ ಮಾಡಿರುವ ನಟಿ ಮಾನ್ವಿತಾ ಕಾಮತ್​, ನಾನು ನನ್ನ ಸ್ನಾತಕೋತ್ತರ ಪದವಿ ಪೂರೈಸಬೇಕು ಎಂಬ ನಿರ್ಧಾರವನ್ನು ಕೈಗೊಂಡ ಬಳಿಕ ನನ್ನ ಜೀವನದಲ್ಲಿ ಹಲವು ಏರಿಳಿತಗಳು ಸಂಭವಿಸಿದೆ, ಸಿನಿಮಾದಿಂದ ದೀರ್ಘ ವಿರಾಮವನ್ನು ಪಡೆದುಕೊಂಡು ನನ್ನ ಉಳಿತಾಯದ ಹಣದಲ್ಲಿ ಬದುಕುವುದು ಸುಲಭವಾಗಿರಲಿಲ್ಲ. ಆದರೆ ನಾನು ಇದನ್ನು ಮಾಡಲೇಬೇಕಿತ್ತು. ಯಾಕೆಂದರೆ ನಾನು ನನ್ನ ತಾಯಿಗೆ ಪ್ರಾಮಿಸ್​ ಮಾಡಿದ್ದೆ. ಇಂದು ಅದಕ್ಕೆಲ್ಲ ಬೆಲೆ ಸಿಕ್ಕಿದೆ. ನಾನು ಡಿಸ್ಟಿಂಕ್ಷನ್​​ನಲ್ಲಿ ಪಾಸ್​ ಆಗಿದ್ದೇನೆ. ಇನ್ಮುಂದೆ ನನ್ನ ಫೋಕಸ್​ ಏನಿದ್ದರೂ ಸಿನಿಮಾ ಎಂದು ಬರೆದುಕೊಂಡಿದ್ದಾರೆ.

ಮಾಸ್ ಕಮ್ಯೂನಿಕೇನ್‌ನಲ್ಲಿ ಮಾನ್ವಿತಾ ಕಾಮತ್ ಮಾಸ್ಟರ್ ಡಿಗ್ರಿ ಪಡೆದುಕೊಂಡಿದ್ದಾರೆ. ಜೈನ್ ಯೂನಿವರ್ಸಿಟಿಯಿಂದ ಮಾಸ್ ಕಮ್ಯುನಿಕೇಷನ್ ಸ್ನಾತಕೋತ್ತರ ಪದವಿಯನ್ನು ಮಾನ್ವಿತಾ ಪಡೆದುಕೊಂಡಿದ್ದಾರೆ. ಈ ವಿಚಾರವನ್ನು ನಟಿ ಹಂಚಿಕೊಳ್ಳುತ್ತಿದ್ದಂತೆಯೇ, ಶುಭಾಶಯಗಳು ಹರಿದು ಬಂದಿದೆ. ಅಭಿಮಾನಿಗಳ ಜೊತೆಗೆ ಕನ್ನಡ ಸಿನಿಮಾ ನಟಿಯರು ಕೂಡ ಮಾನ್ವಿತಾಗೆ ಶುಭ ಕೋರಿದ್ದಾರೆ.