ವಂಶಿಕಾನಿಂದ ದುಡ್ಡು ಮಾಡ್ಕೊತಿದ್ದೀರಾ‌ ಎಂಬ ಚುಚ್ಚು ಮಾತುಗಳಿಗೆ ಮಾತಿನ ಚಾಟಿ ಬೀಸಿದ ಮಾಸ್ಟರ್ ಆನಂದ

By Infoflick Correspondent

Updated:Tuesday, June 28, 2022, 08:59[IST]

ವಂಶಿಕಾನಿಂದ ದುಡ್ಡು ಮಾಡ್ಕೊತಿದ್ದೀರಾ‌ ಎಂಬ ಚುಚ್ಚು ಮಾತುಗಳಿಗೆ ಮಾತಿನ ಚಾಟಿ ಬೀಸಿದ ಮಾಸ್ಟರ್ ಆನಂದ

ವಂಶಿಕಾ ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ಒಳ್ಳೆಯ ಕಲಾವಿದಳಾಗಿ ಬೆಳೆಯುತ್ತ ಇದ್ದಾಳೆ. ಮಾಸ್ಟರ್ ಆನಂದ ಮಗಳು ವನ್ಶಿಕಾ ಅಂಜನಿ ಕಶ್ಯಪ್ ಅಪ್ಪನ ಹಾದಿಯಲ್ಲೇ ಜನಪ್ರಿಯತೆ ಪಡೆಯುತ್ತಿದ್ದಾಳೆ.

ವಂಶಿಕಾ ನಟನೆಯನ್ನು ನೋಡಿ ಎಲ್ಲರೂ ನಿಜಕ್ಕೂ ಬೆರಗಾಗಿ ಹೋಗಿದ್ದಾರೆ. ಎಲ್ಲರೂ  ಈ ರೀತಿಯ ನಟನೆ ಮಾಡೋದಕ್ಕೆ ದೈವಿಶಕ್ತಿ ಇರಲೇಬೇಕು. ವಂಶಿಕಾ ಒಬ್ಬ ಬ್ಲೆಸ್ಡ್​ ಚೈಲ್ಡ್ ಅಂತಾ ಮನಸಾರೆ ಹಾಡಿ ಹೊಗಳಿದ್ದಾರೆ. 

ವಂಶಿಕಾ ಹಾಗೂ ಅವಳ ತಾಯಿ ಯಶಸ್ವಿನಿ ಕಿರುತೆರೆಯ ಜನಪ್ರಿಯ ಶೋ 'ನಮ್ಮಮ್ಮ ಸೂಪರ್‌ಸ್ಟಾರ್'  ಮೂಲಕ ಜನಪ್ರಿಯರಾದವರು. ಕೆಲ ಜನರು ವಂಶಿಕಾ ನಟನೆ ನೋಡಿ ಮೆಚ್ಚುಗೆ ಸೂಚಿಸಿದೆ ಇನ್ನು ಕೆಲವರು  ಟಿಆರ್‌ಪಿ ಗೋಸ್ಕರ ಚಾನೆಲ್‌ನವರು ಮಗುವಿನ ಭವಿಷ್ಯದ ಮೇಲೆ ಆಟ ಆಡ್ತಾ ಇದ್ದಾರೆ, ಹೆತ್ತವರೂ ದುಡ್ಡಿಗೋಸ್ಕರ ಹೀಗೆಲ್ಲ ಮಕ್ಕಳಿಂದ ನಟನೆ ಮಾಡಿಸ್ತಿದ್ದಾರೆ ಅನ್ನೋ ಮಾತುಗಳೂ ಕೇಳಿಬಂದವು.

ಈ ಎಲ್ಲಾ ಕೊಂಕು ಮಾತುಗಳಿಗೆ ಆನಂದ ಮಾತಿನ ಚಾಟಿ ಬೀಸಿದ್ದಾರೆ. ಮಕ್ಕಳು ದೊಡ್ಡೋರ ಕಾಮಿಡಿ ಸೀನ್‌ಗಳಲ್ಲಿ, ಡ್ರಾಮಾಗಳಲ್ಲಿ ಕಾಣಿಸಿಕೊಳ್ಳೋದು ಅವರ ಮೇಲೆ ದುಷ್ಪರಿಣಾಮ ಬೀರುತ್ತೆ ಅನ್ನೋದಾದ್ರೆ ನಾನು ಅಂಥ ಪಾತ್ರಗಳನ್ನು ಮಾಡಿಕೊಂಡೇ ಬಂದವನು. 

ಗೌರಿ ಗಣೇಶ ಚಿತ್ರದಲ್ಲಿ ತಂದೆ ಮಗನ ಸಂಬಂಧದ ಸೂಕ್ಷ್ಮಗಳಿದ್ದವು. ಅಂಥಾ ಪಾತ್ರಗಳನ್ನೆಲ್ಲ ನಿರ್ವಹಿಸಿದ ನಾನೆಲ್ಲಿ ಹಾಳಾದೆ, ಒಳ್ಳೆಯ ಬದುಕನ್ನೇ ಬದುಕ್ತಿದ್ದೀನಲ್ಲಾ, ಮಕ್ಕಳ ತಲೆಯಲ್ಲಿ ಇದೆಲ್ಲ ನಿಲ್ಲೋದಿಲ್ಲ. ಅವರು ಅವರಾಗಿಯೇ ಇರ್ತಾರೆ. ಮಗಳು ವನ್ಶಿಕಾಳನ್ನು ನೋಡಿದಾಗ ನನಗೆ ನನ್ನ ಬಾಲ್ಯವನ್ನೇ ಕನ್ನಡಿಯಲ್ಲಿ ನೋಡಿದ ಹಾಗಾಗಿದೆ' ಎಂದಿದ್ದಾರೆ.

VIDEO CREDIT : THIRD EYE

ಆದರೆ ಮಟ್ಟಿನ ಜನಪ್ರಿಯತೆ ಮಗಳು ವನ್ಶಿಕಾ ತಲೆಗೆ ಏರದಂತೆ ಬೆಳೆಸುವ ದೊಡ್ಡ ಜವಾಬ್ದಾರಿ ತನ್ನ ಹಾಗೂ ಪತ್ನಿ ಯಶಸ್ವಿನಿ ಮೇಲಿರೋದನ್ನು ಆನಂದ್ ಒಪ್ಪಿಕೊಳ್ತಾರೆ. ಅದನ್ನ ಚಾಲೆಂಚಾಗಿ ತಗೊಂಡು ಮಗಳನ್ನು ಚೆನ್ನಾಗಿ ಬೆಳೆಸೋದೇ ಸದ್ಯಕ್ಕೆ ಅವರ ಗುರಿಯಂತೆ.

ಮಗಳ ನಟನೆಯ ಕಲಿಕೆಗೆ ಸಹಾಯ ಮಾಡುತ್ತಿರುವ ಕಲಾವಿದ ಶಿವು ಅವರಿಗೆ ಹಾಗು ಆನಂದ ತಮ್ಮ ಪತ್ನಿಗೆ ಕಲರ್ಸ್ ಕನ್ನಡ ವೇದಿಕೆಗೆ , ಜನತೆಗೆ ಧನ್ಯವಾದ ಹೇಳಿದ್ದಾರೆ.