ನಟಿ ಮೀನಾ ಪತಿ ಸಾವಿಗೆ ಪಾರಿವಾಳಗಳ ಹಿಕ್ಕೆಯೇ ಕಾರಣ ಎಂದ ವೈದ್ಯರು!!

By Infoflick Correspondent

Updated:Thursday, June 30, 2022, 12:05[IST]

ನಟಿ ಮೀನಾ ಪತಿ ಸಾವಿಗೆ ಪಾರಿವಾಳಗಳ ಹಿಕ್ಕೆಯೇ ಕಾರಣ ಎಂದ ವೈದ್ಯರು!!

ಬಹುಭಾಷಾ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಬುಧವಾರ ಮುಂಜಾನೆ ನಿಧನರಾಗಿದ್ದಾರೆ. ಇನ್ನು ಚಿಕ್ಕ ವಯಸ್ಸಿನ ವಿದ್ಯಾಸಾಗರ್‌ ಅವರ ಸಾವಿಗೆ ಪಾರಿವಾಳದ ಹಿಕ್ಕೆಗಳೇ ಕಾರಣ ಎಂಬುದು ಇದೀಗ ಬಹಿರಂಗವಾಗಿದೆ. ಇತ್ತೀಚಿನ ಮೀನಾ ಕುಟುಂಬದವರು ಕೋವಿಡ್ -19 ಸೋಂಕಿನಿಂದ ಬಳಲಿದ್ದರು. ಈ ವೇಳೆ ವಿದ್ಯಾಸಾಗರ್ ಅವರಿಗೆ ಅನಾರೋಗ್ಯ ಕಾಡಿತ್ತು. ಕಳೆದ ಎರಡುವಾರಗಳ ಹಿಂದೆ ಆಸ್ಪತ್ರಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ವಿಧಿವಶರಾಗಿದ್ದಾರೆ. 

ವಿದ್ಯಾ ಸಾಗರ್‌ ಅವರು ತೀವ್ರ ಶ್ವಾಸಕೋಶದ ಸಮಸ್ಯೆ ಎದುರಿಸುತ್ತಿದ್ದರು. ಅವರ ಶ್ವಾಸಕೋಶ ಅಲರ್ಜಿಗೆ ತುತ್ತಾಗಿತ್ತು. ಇದಕ್ಕೆ ಕಾರಣ ಪಾರಿವಾಳದ ಹಿಕ್ಕೆಗಳು. ಹೌದು, ಪಾರಿವಾಳದ ಹಿಕ್ಕೆಯ ವಾಸನೆಯನ್ನು ವಿದ್ಯಾಸಾಗರ್‌ ಅವರು ಹಲವು ವರ್ಷಗಳ ಕಾಲ ಉಸಿರಾಡಿದ್ದರು. ಈ ಕಾರಣಕ್ಕಾಗಿ ಅವರಿಗೆ ಶ್ವಾಸಕೋಶದ ಅಲರ್ಜಿ ಶುರುವಾಗಿತ್ತು. ಕೋವಿಡ್‌ ಬಂದಾಗ ಈ ಅಲರ್ಜಿ ಹೆಚ್ಚಳವಾಗಿ, ಅವರ ಶ್ವಾಸಕೋಶವನ್ನು ಬದಲಿಸಲು ವೈದ್ಯರು ತೀರ್ಮಾನಿಸಿದ್ದರು.  

ಆದರೆ, ಶ್ವಾಸಕೋಶದ ಕಸಿ ಮಾಡಲು ಮತ್ತೊಂದು ಶ್ವಾಸಕೋಶ ಸಿಕ್ಕಿರಲಿಲ್ಲ. ಔಷಧಿಯ ಮುಖಾಂತರ ಚಿಕಿತ್ಸೆ ನೀಡುತ್ತಿದ್ದರಾದರೂ ಫಲಕಾರಿಯಾಗದೇ ಉಸಿರು ಚೆಲ್ಲಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಳಯಾಳಂ ಭಾಷೆಗಳಲ್ಲಿ ನಟಿಸಿದ್ದ ಮೀನಾ, 2009 ರಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿರುವ ವಿದ್ಯಾಸಾಗರ್ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ 11 ವರ್ಷದ ನೈನಿಕಾ ಎಂಬ ಮಗಳಿದ್ದು, ಸಂತೋಷದಿಂದ ಬಾಳುತ್ತಿದ್ದ ಸಂಸಾರದಲ್ಲಿ ಈಗ ಬಿರುಗಾಳಿ ಎದ್ದಿದೆ.