ಡ್ರಾಮಾ ಜೂನಿಯರ್ಸ್ ಮೆಗಾ ಅಡಿಷನ್ ನಲ್ಲಿ ಮರಿ ಸಿಂಹಾದ್ರಿಯ ಸಿಂಹ ಆರ್ಭಟ ನೋಡಿ..! ಫಿದಾ
Updated:Wednesday, March 16, 2022, 16:45[IST]

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಕಾರ್ಯಕ್ರಮ ಬಂದುಹೋಗಿವೆ. ಜನರನ್ನು ರಂಜಿಸುವ ನಿಟ್ಟಿನಲ್ಲಿ ಆಯಾ ಚಾನೆಲ್ಗಳು ಹೊಸ ಹೊಸ ವಿಭಿನ್ನ ಶೈಲಿಯ ಕಾರ್ಯಕ್ರಮ ಮತ್ತೆ ಮತ್ತೆ ಜನರ ಮುಂದೆ ತರುತ್ತಿದ್ದಾರೆ. ಜನರ ರಂಜಿಸುವ ವಿಚಾರವಾಗಿ ಸಾಕಷ್ಟು ಸಕತ್ ಸರ್ಕಸ್ ಕೂಡ ಮಾಡುತ್ತಾರೆ. ಇದೀಗ ಜೀ ಕನ್ನಡದಲ್ಲಿ ಮತ್ತೆ ಡ್ರಾಮಾ ಜೂನಿಯರ್ಸ್ 4 ಆರಂಭವಾಗುತ್ತಿದೆ. ಹೌದು ಮೊನ್ನೆಯಷ್ಟೇ ರಾಜ್ಯದ ಮೂಲೆಮೂಲೆಗೂ ಅಲೆದಾಡಿ ಅಡಿಶನ್ ನಡೆಸಿರುವ ಡ್ರಾಮಾ ಜೂನಿಯರ್ಸ್ ತಂಡ, ಇದೇ ಮಾರ್ಚ್ 19ರಿಂದ ಸಂಜೆ 7 ಗಂಟೆಯಿಂದ ಪ್ರಸಾರ ಆಗಲಿದೆ. ಸಾಕಷ್ಟು ಚಿಕ್ಕಮಕ್ಕಳನ್ನು ಹಿಡಿದು ತಂದಿರುವ ಡ್ರಾಮಾ ಜೂನಿಯರ್ಸ್ ತಂಡ. ಇದೇ 19ನೇ ತಾರೀಕು ಡ್ರಾಮಾ ಜೂನಿಯರ್ಸ್ ಸೀಸನ್ 4 ರ ಮೆಗಾ ಆಡಿಷನ್ ನಡೆಸಲಿದೆ.
ವೇದಿಕೆಯಲ್ಲಿ ಈಗಾಗಲೇ ವಿಭಿನ್ನವಾಗಿ ನಟನೆ ಮಾಡಿ ಪ್ರೇಕ್ಷಕರಿಂದ ಹಾಗೂ ಜಡ್ಜಸ್ ಗಳಿಂದಲೂ ಕೂಡ ಸೈ ಎನ್ನಿಸಿಸಿಕೊಳ್ಳಲು ಚಿಕ್ಕ ಮಕ್ಕಳು ಹೆಚ್ಚು ಆಕ್ಟಿವ್ ಆಗಿಯೇ ಬಂದಿದ್ದಾರೆ ಎಂದು ಹೇಳಬಹುದು. ಇದೀಗ ಒಂದು ಪ್ರೊಮೋ ವಿಡಿಯೋ ಹರಿದಾಡುತ್ತಿದೆ.
ಜೀ ಕನ್ನಡ ಪ್ರೊಮೊ ವಿಡಿಯೋದಲ್ಲಿ ನಾಲ್ಕು ವರ್ಷದ ಒಬ್ಬ ಪುಟ್ಟ ಮಗು ವೇದಿಕೆ ಮೇಲೆ ಸಿಂಹಾದ್ರಿಯ ಸಿಂಹದ ಖಡಕ್ ಡೈಲಾಗ್ ಹೇಳುತ್ತಾ ಎಲ್ಲರನ್ನು ಬಿದ್ದು ಬಿದ್ದು ನಗುವಂತೆ ಮಾಡಿದೆ. ಹೌದು ಜಡ್ಜಸ್ ಗಳು ಈಗಾಗಲೇ. ಈ ಮಗುವಿನ ಪ್ರದರ್ಶನಕ್ಕೆ ಫಿದಾ ಆಗಿದ್ದಾರೆ ಎನ್ನಲಾಗುತ್ತಿದೆ. ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಡ್ರಾಮಾ ಜೂನಿಯರ್ಸ್ ಸೀಸನ್ 4 ರ ಕಾರ್ಯಕ್ರಮವನ್ನು ನೀವೂ ನೋಡುವ ತವಕದಲ್ಲಿದ್ದರೆ ಈ ವಿಡಿಯೋವನ್ನು ಶೇರ್ ಮಾಡಿ. ಮತ್ತು ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು... (Video credit : zee kannada)